ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪೮ ಆ ಶ್ರೀಮದ್ಭಾಗವತವು [ಅಧ್ಯಾ. ೫. ಓ ವಸುದೇವಾ ! ಮಿಥಿಲಾಧಿಪತಿಯಾದ ಜನಕನು ಈ ಭಾಗವತ ಧರಗಳನ್ನು ಕೇಳಿ ಬಹಳ ಸಂತೋಷಗೊಂಡವನಾಗಿ, ತನ್ನ ಉಪಾ ಧ್ಯಾಯರೊಡಗೂಡಿ, ಜಯಂತೀದೇವಿಯ ಪುತ್ರರಾದ ಆ ಮಹರ್ಷಿಗಳನ್ನು ವಿಶೇಷವಾಗಿ ಸತ್ಕರಿಸಿ ಪೂಜಿಸಿದನು. ಆಮೇಲೆ ಅಲ್ಲಿ ನೆರೆದಿದ್ದ ಜನರೆಲ್ಲರೂ ನೋಡುತಿದ್ಹಾಗೆಯೇ ಆ ಮುನಿಗಳೆಲ್ಲರೂ ಅಂತರಾನವನ್ನು ಹೊಂದಿ ದರು. ಇತ್ತಲಾಗಿ ವಿದೇಹರಾಜನೂಕೂಡ ಆ ಮುನಿಗಳಿಂದ ಉಪದೇತಿ ಸಲ್ಪಟ್ಟ ಭಾಗವತಧಗಳನ್ನು ನಿಯಮದಿಂದನು ಸುತ್ತ, ಕೊನೆಗೆ ಅದರಿಂದ ಉತ್ತಮಗತಿಯಾದ ಮುಕ್ತಿಯನ್ನು ಹೊಂದಿದನು. ಓ ಮಹಾ ಭಾಗಾ ! ನೀನೂ ಹಾಗೆಯೇ ಆ ಭಾಗವತಧಕ್ಕಗಳನ್ನು ಶ್ರದ್ಧೆಯಿಂದ ಅನುಷ್ಠಿಸುತ್ತ, ದೇಹದಲ್ಲಿಯೂ, ದೇಹಾನುಬಂಧಗಳಲ್ಲಿಯೂ ಮೋಹವನ್ನು ತ್ಯಜಿಸಿದಪಕ್ಷದಲ್ಲಿ ಉತ್ತಮಪದವನ್ನು ಹೊಂದಬಹುದು. ಇದೇನೋ ಶಾ ಸ್ವವಿಹಿತವಾದ ಪ್ರಕ್ರಿಯೆಯು. ಆದರೆ ನೀನೂ, ನಿನ್ನ ಪತ್ನಿ ಯೂ ಆ ಶಾಸ್ತ್ರಪಕ್ರಿಯೆಯಿಲ್ಲದೆಯೇ ಕೃತಾರರೆನಿಸಿರುವಿರಿ! ಏಕೆಂದರೆ, ಸರೇಶ್ವ ರನಾದ ಆ ಶ್ರೀಹರಿಯೇ ನಿಮಗೆ ಪ್ರತ್ರನಾಗಿ ಅವತರಿಸಿರುವನು. ಅದ ರಿಂದ, ದಂಪತಿಗಳಾದ ನಿಮ್ಮಿಬ್ಬರ ಯಶಸ ಲೋಕವಿಖ್ಯಾತವಾಗಿರುವು ದು, ಸರೇಶ್ವರನಾದ ಆ ಕೃಷ್ಣನನ್ನು ಪತ್ರಸ್ನೇಹದಿಂದ ಕಾ ಣುವುದು, ಅವನ ಲೀಲೆಗಳನ್ನು ಆಗಾಗ ಕಣ್ಣಾರೆ ನೋಡುತ್ತಿರುವುದು, ಆಗಾಗ ಅವನನ್ನಾಲಿಂಗಿಸುವುದು, ಅವನೊಡನೆ ಸಂಭಾಷಿಸುವುದು, ಆವ ನೊಡನೆ ಸಹಶಯ್ಕೆಯಲ್ಲಿ ಮಲಗುವುದು, ಅವನೊಡನೆ ಏಕಾಸನದಲ್ಲಿ ಕು ಳ್ಳಿರುವುದು, ಸಂಗಡ ಸೇರಿ ಭೋಜನಮಾಡುವುದು, ಹೀಗೆ ನೀವು ಯಾವಾ ಗಲೂ ಅವನೊಡನೆ ಕಲೆತಿರುವುದರಿಂದಲೇ ನಿಮ್ಮ ಆತ್ಮವು ಪಾವನವಾಗಿರುವು ದು ಶಿಶುಪಾಲ, ಪೌಂಡ್ರಕ, ಸಾಲ್ವ ಮುಂತಾದ ದುಷ್ಟರಾಜರು,ಅವನಲ್ಲಿ ಆಜನ್ಮದ್ವೇಷವನ್ನಿಟ್ಟು, ತಾವು ಮಲಗುವಾಗಲೂ, ಕುಳ್ಳಿರುವಾಗಲೂ, ಇತರಸಮಯಗಳಲ್ಲಿಯೂ ಆ ಶ್ರೀಕೃಷ್ಣನ ನಡೆನುಡಿಗಳನ್ನೂ, ಅವನ ನೋ ವಗಳನ್ನೂ ನೆನೆಸಿಕೊಂಡು, ಅಸೂಯೆಯಿಂದ ಕುದಿಯುತ್ತಿದ್ದವರು. ಆ ವಿಧವಾದ ಬದ್ಧದ್ವೇಷದಿಂದ ಆ ಕೃಷ್ಣನನ್ನು ಸ್ಮರಿಸುತ್ತಿದ್ದ ಮಾತ್ರಕ್ಕೆ