ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೩೪ ಶ್ರೀಮದ್ಭಾಗವತರ ಅಧ್ಯಾ. ೧೯. ಶಕ್ತಿಯೇ ಶೌರವೆನಿಸುವುದು. ಕೀಲುಮೇಲೆಂಬ ತಾರತಮ್ಯವಿಲ್ಲದೆ,ಸಮಸ್ತ ವನ್ನೂ ಬ್ರಹ್ಮಾತ್ಮಕವೆಂದು ತಿಳಿಯುವ ಸಮಬುದ್ದಿಯೇ ಸತ್ಯವು ಕಂಡು ದನ್ನು ಕಂಡಹಾಗೆ ಹೇಳುವುದೇ ಋತವೆನಿಸುವುದು ಕರಗಳಲ್ಲಿ ತನಗೆ ಕರ್ತೃತ್ವವಿಲ್ಲವೆಂಬ ಬುದ್ಧಿಯೇ ಶೌಚವು. ಕರೆಫಲಗಳಲ್ಲಿ ಆಸೆಯನ್ನು ತೋರಿಸದೆ, ಆ ಫಲಗಳನ್ನು ತ್ಯಜಿಸುವುದೇ ತ್ಯಾಗವು. ನನ್ನಲ್ಲಿ ಭಕ್ತಿವರ್ಧಕ ವಾದ ಛದ್ಮವೇ ಮನುಷ್ಯನಿಗೆ ಶ್ರೇಯಸ್ಕರವಾದ ಧನವು ಸರದೇವೋ ತಮನಾದ ನಾನೇ ಯಜ್ಞವು. ಜ್ಞಾನೋಪದೇಶವೇ ದಕ್ಷಿಣೆ ! ಪ್ರಾಣ ಯಾಮವೇ ಉತ್ತಮವಾದ ಬಲವು. ಮಹೆಶ್ವರಪೀರಾಟಗಳಿಂದ ಕೂಡಿದ ನನ್ನ ಈಶ್ವರಸಂಬಂಧಿಸ್ವಭಾವವನೇ ಭಗವೆನಿಸುವುದು. ನನ್ನಲ್ಲಿ ಭಕ್ತಿಯೇ ಜನರಿಗೆ ಉತ್ತಮವಾದ ಲಾಭವು, ಆತ್ಮನಲ್ಲಿ ದೇವಮನುಷ್ಕಾರಭೇದಬುದ್ಧಿ ಯಿಲ್ಲದಿರುವುದೇ ವಿದ್ಯೆ ! ನಿಷಿದ್ಧ ಕಠ್ಯಗಳಲ್ಲಿ ಜಿಹಾಸೆಯೆ ಹೀಯಸಿಸು ವುದು. ಯಾವುದರಲ್ಲಿಯೂ ಆಸೆಯಿಲ್ಲದಿರುವುದು, ಇದ್ದುದರಲ್ಲಿ ತೃಪ್ತಿ, ಮುಂ ತಾದ ಗುಣಗಳೇ ಮನುಷ್ಯನಿಗೆ ಭೂಷಣವು, ಸುಖದುಃಖಗಳೆರಡನ್ನೂ ಗಮನಿಸದಿರುವುದೇ ಸುಖವು ಏಷಯಸುಖಕ್ಕೆ ಆಸೆಪಡುವುದೇ ದುಃಖವು. ಸಂಸಾರಬಂಧಕ್ಕೂ, ಮೋಕ್ಷಕ್ಕೆ ಕಾರಣಗಳೇನೆಂಬುದನ್ನು ತಿಳಿದವನೇ ಪಂಡಿತನು. ದೇಹವನ್ನೇ ತಾನೆಂದು ತಿಳಿದವನೇ ಮೂರ್ಖನು. ನನ್ನ ವಿಷಯ ವಾದ ಜ್ಞಾನವೇ ಸನ್ಮಾರ್ಗವು. ಶಬ್ದಾದಿವಿಷಯಗಳಿಗೆ ಮನಸ್ಸನ್ನು ತಗು ಲಿಸುವುದೇ ದುಮ್ಮಾರ್ಗವು. ಸತ್ವಗುಣಾಭಿವೃದ್ಧಿಯೇ ಸ್ವರ್ಗವು. ತಮೋ ಗುಣವೃದ್ಧಿಯೇ ನರಕವು. ನನ್ನ ಅಂಶಭೂತನಾದ ಗುರುವೇ ಬಂಧುವು. ಮನುಷ್ಯ ಶರೀರವೇ ಗೃಹವು, ಗುಣಾಡ್ಯನೇ ಐಶ್ವಶ್ಯವಂತನು. ತುಷ್ಠಿಯಿಲ್ಲ ದವನೇ ಬಡವನು. ಇಂದ್ರಿಯಗಳನ್ನು ಜಯಿಸಲಾರದವನೇ ಕೃಪಣನು. ಶಬ್ದಾದಿವಿಷಯಗಳಿಗೆ ಹೋಗದಂತೆ ಮನಸ್ಸನ್ನು ನಿಗ್ರಹಿಸಬಲ್ಲವನೇ ಪ್ರಭು ! ಆ ವಿಷಯಗಳಿಗೆ ವಶನಾದವನೇ ಅಳೆಂದು ತಿಳಿ!ಉದ್ದವಾ : ಇವೆಲ್ಲವೂ ಮೋ ಕ್ಷಸಾಧಕಗಳಾದ ಗುಣಗಳು.ನೀನು ಕೇಳಿದ ಒಂದೊಂದು ಪ್ರಶ್ನೆಗೂ ಕ್ರಮ ವಾಗಿ ಉತ್ತರವನ್ನು ಹೇಳಿದುದಾಯಿತು. ಮೇಲೆ ಹೇಳಿದುದಕ್ಕೆ ವಿರುದ್ಧ ಪಾಗಿ ನಡೆಯುವುದೇ ಮೋಕ್ಷನಿರೋಧಕಗಳಾದ ದೋಷಗಳೆಂದೂ ತಿಳಿ.