ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨೪.] ಏಕಾದಶಸ್ಕಂಧನು. ೨೩೧೪ ಶರೀರಗಳು ನಶಿಸುವುವು.) ಆ ಅನ್ನವು ಧಾನ್ಯಬೀಜಗಳಲ್ಲಿ ಲಯಿಸುವುವು. (ಎಂದರೆ,ನಟ್ಟ ಬೀಜಗಳು ಮೊಳೆಯಲಾರವು. ಆ ಧಾನ್ಯಬೀಜಗಳು ಭೂಮಿ ಯಲ್ಲಿ ಲಯಿಸಿಹೋಗುವುವು. ಭೂಮಿಯು, ತನ್ನ ಗುಣವೆನಿಸಿಕೊಂಡ ಗಂಧತನ್ಮಾತ್ರದಲ್ಲಿ ಲಯಿಸಿಹೋಗುವುದು. ಗಂಧವು ಜಲದಲ್ಲಿ ಅಯಿ ಸುವುದು. ಆ ಜಲವು ತನ್ನ ತನ್ಮಾತ್ರವೆನಿಸಿದ ರಸದಲ್ಲಿ ಲಯಿಸಿಹೋಗು ವುದು. ಹಾಗೆಯೇ ರಸವು ತೇಜಸ್ಸಿನಲ್ಲಿಯೂ, ತೇಜಸ್ಸು, ರೂಪತನ್ಮಾತ್ರ ದಲ್ಲಿಯೂ, ರೂಪವು ವಾಯುವಿನಲ್ಲಿಯೂ, ವಾಯುವು ಸ್ಪರ್ಶತನ್ಮಾತ್ರದ ಲ್ಲಿಯೂ, ಸ್ಪರ್ಶವು ಆಕಾಶವೆಂಬ ಭೂತದಲ್ಲಿಯೂ, ಆಕಾಶವು ಶಬ್ದತ ನ್ಮಾತ್ರದಲ್ಲಿಯೂ ಲಯಿಸುವುವು. ಹೀಗೆಯೇ ಇಂದ್ರಿಯಗಳೆಲ್ಲವೂ ತಮ್ಮ ಲ್ಲಿ ಪ್ರಧಾನವೆನಿಸಿದ ಮನಸ್ಸಿನೊಡಗೂಡಿ, ತಮತಮಗೆ ಉತ್ಪತ್ತಿ ಕಾರಣ ಗಳೆನಿಸಿದೆ, ವೈ ಕಾರಿಕಾಹಂಕಾರದ ಬೇರೆಬೇರೆ ಅಂಶಗಳಲ್ಲಿ ಲಯಿಸಿದಮೇಲೆ, ಶಬ್ದ ತನ್ಮಾತ್ರವು ತನಗೆ ಕಾರಣವೆನಿಸಿದ ಭೂತಾದಿಯೆಂಬ ತಾಮಸಾಹಂ ಕಾರದಲ್ಲಿ ಲಯಿಸುವುದು, ದೇಹಾತ್ಮಾಭಿಮಾನವೇ ಮೊದಲಾದ ಮೋಹ ವನ್ನುಂಟುಮಾಡುವುದರ ಮೂಲಕವಾಗಿ, ಸಮಸ್ತ ಪ್ರಾಣಿಗಳನ್ನೂ ತನ್ನ ವಶಮಾಡಿಕೊಳ್ಳತಕ್ಕೆ ಈ ತಾಮಸಾಹಂಕಾರವು, ತೈಜಸ ಕಾರಿಕಗಳೆಂಬ ಮತ್ತೆರಡು ಅಹಂಕಾರಗಳೊಡಗೂಡಿ, ಮಹತ್ತತ್ವದಲ್ಲಿ ಲಯಿಸುವುದು. ಆ ಮಹತ್ತತ್ವವು ತನಗೆ ಕಾರಣಭೂತಗಳಾದ ಸತ್ಯಾದಿಗುಣಗಳಲ್ಲಿ ಲಯಿ ಸುವುದು. ಆ ಗುಣಗಳು ಅವ್ಯಕದಲ್ಲಿ ಲಯಿಸುವುವು. (ಎಂದರೆ ಮಹತ್ವ ತ್ವವು, ತನಗೆ ಕಾರಣಭೂತಗಳಾದ ಸತ್ಯಾದಿಗುಣಗಳು ವೈಷಮ್ಯವನ್ನು ಬಿಟ್ಟು ಶಾಂತವಾದೊಡನೆ, ಅವ್ಯಕದಲ್ಲಿ ಲಯಿಸುವುದು.) ಆ ಅವ್ಯಕ್ತವು ಅವ್ಯಯವೆನಿಸಿದ ಕಾಲದೊಡನೆ ಸಂಸರ್ಗವನ್ನು ಹೊಂದುವುದು. ಆ ಕಾಲ ವೂಕೂಡ ಮಾಯಾಮಯನಾದ (ಪ್ರಕೃತಿಸಂಸ್ಕೃನಾದ) ಜೀವನೋ ಡನೆ ಏಕೀಭವಿಸುವುದು. ಆ ಜೀವನು ಉತ್ಪವಿನಾಶಗಳಿಲ್ಲದ ಪರಮಾ ನೆನಿಸಿದ ನನ್ನಲ್ಲಿ ಲಯಿಸುವನು. ಪಾತೃಭೂತನಾದ ನಾನು ನನ್ನ ಲ್ಲಿಯೇ ನೆಲೆಗೊಂಡಿರತಕ್ಕವನೇ ಹೊರತು, ನನಗೆ ಬೇರೊಂದಾಧಾರವಿಲ್ಲ. ನನಗೆ ಕರಪ್ರಾಪ್ತಗಳಾದ ದೇವಮನುಷ್ಯಾದಿಶರೀರಗಳೊಡನೆ ಸಂಯೋ