ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಶ್ರೀಮದ್ಭಾಗವತರ [ಅ. ೨. ಬೃ ಮಂಡಲಾದಿಗಳಿಂದ ಅಲಂಕೃತವಾದ ಭೂಮಿ) ಅಗ್ನಿ, ಸೂರಿ, ಜಲ, ಹೃದಯ, ಬ್ರಾಹ್ಮಣರು, ಈ ಏಳುಸ್ಕಾನಗಳಲ್ಲಿ ಗಂಧಪುಷ್ಪಾದಿಪೂಜಾ ದ್ರವ್ಯಗಳಿಂದ ನಿಷ್ಕಪಟವಾದ ಭಕ್ತಿಯೊಡನೆ ನನ್ನ ನಾ ರಾಧಿಸಬಹುದು. ಹೀಗೆ ಪೂಜೆಯನ್ನು ಮಾಡತಕ್ಕವನು, ಮೊದಲು ದೇಹಶುದ್ಧಿಗಾಗಿ ಹಲ್ಲುಗ ಳನ್ನು ಚೆನ್ನಾಗಿ ಬೆಳಗಿ, ಮೈತೊಳೆದು ಸ್ನಾನಮಾಡಬೇಕು. ಆಮೇಲೆ ಮೃಕ, ಗೋಮಯ,ಮುಂತಾದ ಲೇಪನಹಿಂದವೈದಿಕ ತಾಂತ್ರಿಕಗಳೆಂಬ ಎರಡು ಬಗೆಯ ಮಂತ್ರಗಳಿಂದಲೂ ಮಂತ್ರಸ್ನಾನವನ್ನು ನಡೆಸಬೇಕು. ಆಮೇಲೆ ವೇದೋಕ್ತ ರೀತಿಯಿಂದ ಸಂರೊಪಾಸನಾದಿನಿತ್ಯಕಮ್ಮಗಳನ್ನು ನಡೆಸಬೇಕು. ಆ ಸಂಧೋಪಾಸನೆಗಳನ್ನು ನಡೆಸಿದಕೂಡಲೆ, ಫಲಾಪೇ ಕೈಯಿಲ್ಲದ ಸಂಕಲ್ಪವನ್ನು ಮಾಡಿ,ಕರಕಯಹೇತುವಾಗಿಯೇ ಪೂಜಾಕರವ ನ್ನಾರಂಭಿಸಬೇಕು. ನನ್ನನ್ನು ಆವಾಹನಮಾಡಿ ಆರಾಧಿಸುವುದಕ್ಕೆ ಯೋಗ್ಯದ ಳಾದ ಪ್ರತಿಮೆಗಳಲ್ಲಿ, ಶಿಲಾಮಯ, ದಾರುಮಯ, ಲೋಹಮಯ, ಲೇಪ ಮಯ, ಲೇಖ್ಯ ಚಿತ್ರ), ಸಿತಾಮಯ (ಮರಳಿನಪ್ರತಿಮೆ) ಮನೋಮಯ, ಮಣಿಮಯಗಳೆಂಬ ಎಂಟು ವಿಧಗಳುಂಟು. ಇವುಗಳಲ್ಲಿ ಅಚಲವೆಂದೂ, (ರವೆಂದೂ) ಚಲವೆಂದೂ (ಅಸ್ಥಿರವೆಂದೂ) ಬೇರೆ ಎರಡು ವಿಧವುಂಟು. ಇವೆಲ್ಲವೂ ಮಂತ್ರನ್ಯಾಸಾದಿಗಳಿಂದ ನನ್ನ ಸಾನ್ನಿಧ್ಯಕ್ಕೆ ಯೋಗ್ಯಳಗ ಆಸಿಸಿರುವುವು. ಇವುಗಳಲ್ಲಿ ಸ್ಥಿರಪ್ರತಿಮೆಗಳಿಗೆ ಪೂಜಾಕಾಲಗಳಲ್ಲಿ ಆಗಾಗ ಆವಾಹನೋದ್ಧಾಸನಗಳಿಲ್ಲ. ಆಸ್ಥಿರಪ್ರತಿಮೆಗಳಲ್ಲಿ ಆ ಆವಾಹನೋದ್ಯಾಸ ನಗಳು ವೈಕಲ್ಪಿಕಗಳು. ಸ್ಥಂಡಿಲದಲ್ಲಿ ಮಾತ್ರ, ಅಗಾಗ ಅವೆರಡನ್ನೂ ಮಾ ಯೇ ತೀರಬೇಕು ಲೆಪ್ಪದಿಂದಲೂ, ಚಿತ್ರಲೇಖನದಿಂದಲೂ, ಮರಳಿ ನಿಂದ ಮಾಡಿದ ಪ್ರತಿಮೆಗಳಿಗೆ ಸ್ವಪನಮಾತ್ರದಿಂದಲೇ ಶುದ್ಧಿಯು ಇತರಪ್ರತಿಮೆಗಳಿಗೆ ಪರಿಮಾರ್ಜನದಿಂದ ಎಂದರೆ, ಚೆನ್ನಾಗಿ ತೊಳೆಯುವ ದರಿಂದ ಶುದ್ಧಿಯು. ಫಲೋದ್ದೇಶದಿಂದ ನನ್ನ ಪೂಜೆಯನ್ನು ನಡೆಸತಕ್ಕವರು, ವಿಧಿವಿಹಿತ ಳಾದ ಸಮಸ್ತ ಪೂಜಾದ್ರವ್ಯಗಳನ್ನೂ ಸಂಗ್ರಹಿಸಿಕೊಂಡು, ಡಂಭವಿಲ್ಲದ ಆರಾಧಿಸಬೇಕು. ಫಲಾಭಿಪಂಥಿಯಿಲ್ಲದ ನಿಜವಾದ ಭಕ್ತರಾದರೋ ತಮಗೆ