ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪t ಅಧ್ಯಾ, ೧೧ ] ಏಕಾದಶಸ್ಕಂಧನ. ವರು. ಸೃಷ್ಟಿದಶೆಯಲ್ಲಿ ಸುಖದುಃಖಗಳಿಗೆ ಕಾರಣಗಳೆಂದು ಹೇಳಿಸಿಕೊ ಕೃವ, ಕಾಲ, ದೇಶ, ಸ್ವಭಾವ, ಶರೀರ, ವಿಧಿನಿಷೇಧರೂಪವಾದ ಶಾಸ್ತ್ರ ಗಳು, ಈ ಮೊದಲಾದುವುಗಳೆಲ್ಲಾ, ಸತ್ಯೇಶ್ವರನಾದ ನನ್ನ ಅಧೀನಗಳಾಗಿರು ವುವೇಹೊರತು ಬೇರೆಯಲ್ಲ! ಅವೆಲ್ಲವೂ ನಾನೇ ಎಂದು ತಿಳಿ” ಎಂದನು. ಈನಡುವೆ ಉದ್ದವನು ತಿಗಿ ಕೃಷ್ಣನನ್ನು ಕುರಿತು ಪ್ರಶ್ನೆ ಮಾಡು ವನು «ಓ ಪ್ರಭೂ! ಜೀವನಾದರೆ ಪ್ರಕೃತಿಗೆಣಸು ಮರೂಪಗಳಾದ ದೇಹದಲ್ಲಿಯೇ ಸೇರಿರತಕ್ಕವನು. ಅದೇ ಗುಣಜನ್ಯಗಳಾದ ಶಬ್ದಾಂವಿಷಯಗ ಇನ್ನೂ ಅನುಭವಿಸತಕ್ಕವನು. ಆ ಗುಣಮಲಕಗಳಾದ ಕೆರೆಗಳಿಗೂ ಕರ್ತ ನಾಗಿರುವನು. ಹೀಗೆ ಜೀವನು ಸತ್ಯಾದಿಗುಣಗಳಲ್ಲಿಯೇ ಮರೆಸಲ್ಪಟ್ಟಿರು ವಾಗ, ಎಷ್ಟೇ ತತ್ವಜ್ಞಾನಪಿದ್ದರೂ ಆ ಗುಣಗಳಿಂದ ಮುಕ್ತನಾಗು ವುದು ಹೇಗೆ ? ಅಥವಾ ಈಶ್ವರನಂತೆಯೇ ಅವನೂ ಸ್ವಯಂಪ್ರಕಾಶವುಳ್ಳವ ವಾಗಿದ್ದ ಮೇಲೆ, ಇವನು ಮಾತ್ರ ಆ ಗುಣಗಳಿಂದ ಬದ್ಧನಾಗುವುದು ಹೇಗೆ ? ಆದುದರಿಂದ ಜೀವಸಿಗೆ ಬಂಧಮೋಕ್ಷಗಳೆರಡೂ ಅಸಂಭವವೆಂದೇ ನನಗೆ ತೋರುವುದು. ಮೋಕ್ಷಪಾಯಭೂತವಾದ ಸಿಫ್ರೆಣಬುದ್ದಿ ಯುಳ್ಳ ವಿದ್ವಾಂಸನು ಹೇಗೆ ನಡೆಯಬೇಕು? ಆತನಿಗೆ ತನ್ನ ದೇಹಪೋಷಣ ಕ್ಕಾಗಿ ಸಿದ್ರಾಹಾರಗಳುಂಟೇ ಅಥವಾ ಇಲ್ಲವೆ ? ಅಂತವನಲ್ಲಿ ಕಾಣಬಹು ದಾದ ಲಕ್ಷಣಗಳೇನು ? ಅವನು ಸುಮ್ಮನೆ ಕುಳಿತಿರುವನೆ ? ಸಂಚರಿಸು ತಿರುವನೆ ? ಅವನ ನಡತೆಯೆಂತದು ! ಈ ನನ್ನ ಪ್ರಶ್ನೆಗೆ ಸಮಾಧಾನವನ್ನು ಹೇಳಬೇಕು. ನಿತ್ಯಮುಕ್ತನಾದ ಈಶ್ವರನೊಬ್ಬ ತನ್ನ ಅವಿದ್ಯೆಯಿಂದ ನಿತ್ಯಬದ್ಧನಾಗುವನೆಂದು ನನಗೆ ಭ್ರಮವುಂಟಾಗಿರುವುದು. ಈ ಭ್ರಮ ವನ್ನು ಪರಿಹರಿಸಬೇಕು” ಎಂದನು. ಇದು ಹತ್ತನೆಯ ಅಧ್ಯಾಯವು. ಈ ಜೀವಾತ್ಮ ಪರಮಾತ್ಯ ಸ್ವರೂಪವು. ಅದಕ್ಕೆ ಕೃಷ್ಣನು ಉದ್ದವನನ್ನು ಕುರಿತು « ಉದ್ದವಾ! ಕೇಳು ! ಪ್ರಕೃತಿಗುಣಗಳಿಂದಲೂ, ತನ್ಮೂಲಕವಾದ ಕರಗಳಿಂದಲೂ ನನ್ನನ್ನೇ, ಬದನೆಂದೂ, ಮುಕ್ಕನೆಂದೂ ಹೇಳುವುದು ಭ್ರಮವೇನೂರು