ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಅಧ್ಯಾ. ೨೭.] ಏಕದತಕ್ಕಂಧರ. ದೊರೆತ ಅಲ್ಪ ಸ್ವಲ್ಪ ದ್ರವ್ಯಗಳಿಂದಾಗಲಿ, ಕೊನೆಗೆ ಕೇವಲಮನಂ ಕಲ್ಪದಿಂದಲೇ ಆ ದ್ರವ್ಯಗಳಿಂದ ಆರಾಧಿಸುವಂತೆ ಭಾವಿಸಿಯಾಗಲಿ, ಪೂಜೆಗಳನ್ನು ನಡೆಸಬಹುದು. ಉದ್ಯವಾ ! ಮುಖ್ಯವಾಗಿ ನನಗೆ ಅಭಿಷೇಕ ದಲ್ಲಿಯೂ, ಅಲಂಕಾರಗಳಲ್ಲಿಯೂ ಹೆಚ್ಚು ಪ್ರೀತಿಯು ನನ್ನನ್ನು ಅರ್ಚಿಸ ಕವರು ಇವೆರಡನ್ನೂ ತಪ್ಪದೆ ನಡೆಸಬೇಕು ಸ್ಮಂಡಲದಲ್ಲಿ ಆಯಾ ಅಂಗದ ಪ್ರಧಾನದೇವತೆಗಳನ್ನು , ಮಂತ್ರಪೂಕವಾಗಿ ಆಯಾಸ್ಥಾನಗ ಇಲ್ಲಿ ಸ್ಥಾಪನಮಾಡುವುದೂ, ಅಗ್ನಿಯಲ್ಲಿ ಹವಿಸ್ಸನ್ನು ಹೋಮಮಾಡು ವುದೂ, ಸೂರಿನಲ್ಲಿ ಸ್ತುತಿಯೂ, ಜಲದಲ್ಲಿ ಗಂಧಪಷ್ಟಸಲಿಲಾಡಿಗಳಿಂದ ಅರ್ಚಿಸುವುದೂ, ನನಗೆ ವಿಶೇಷ ಸಂತೋಷಕರವಾದ ಪೂಜೆಯೆನಿಸುವುದು ಉದ್ದವಾ ! ಕೇವಲಜಲಮಾತ್ರವನ್ನಾದರೂ ಭಕ್ತಿಯಿಂದ ಸಮರ್ಪಿಸಿದ ಪಕ್ಷದಲ್ಲಿ, ಅದೇ ನನಗೆ ಅತ್ಯಂತಪ್ರಿಯವೆನಿಸುವುದು. ಇನ್ನು ಗಂಧ, ಪುಪ್ಪ, ಧೂಪ, ದೀಪ, ನಿವೇದನ, ತಾಂಬೂಲಾದಿಗಳನ್ನು ಸಂಗ್ರಹಿಸಿ ತಂದು, ನನ್ನನ್ನು ಭಕ್ತಿಯಿಂದಾರಾಧಿಸಿದ ಪಕ್ಷದಲ್ಲಿ ಹೇಳಬೇಕಾದುದೇನು? ಭಕ್ತಿ ಯಿಲ್ಲದೆ ಎಷ್ಟೇ ದೊಡ್ಡ ಕಾಣಿಕೆಗಳನ್ನು ತಂದೊಪ್ಪಿಸಿದರೂ ಅದು ನನಗೆ ಪ್ರಿಯವೆನಿಸಲಾರದು. ಇನ್ನು ಪೂಜಾಕ್ರಮವನ್ನು ತಿಳಿಸುವೆನು ಕೇಳು : ಮೊದಲು ಪೂಜೆಗೆ ಬೇಕಾದ ಉಪಕರಣಗಳನ್ನೆಲ್ಲಾ ಸಿದ್ಧಪಡಿಸಿಕೊಳ್ಳ ಬೇಕು. ಆಮೇಲೆ ಪೂಾಗ್ರಗಳಾದ ದರ್ಭಗಳಿಂದ ಆಸನವನ್ನು ಕಲ್ಪಿಸಿ ಕೊಂಡು, ತಾನು ಪೂರಾಭಿಮುಖವಾಗಿಯಾಗಲಿ, ಉತ್ತರಾಭಿಮುಖ ವಾಗಿಯಾಗಲಿ, ಅಥವಾ ಆರ್ಚಾ ವಿಗ್ರಹಕ್ಕೆ 'ಇದಿರಾಗಿಯಾಗಲಿ ಕುಳಿತು, ಪೂಜೆಯನ್ನು ಪಕ್ರಮಿಸಬೇಕು. ಪೂಜೆಯು ಮುಗಿಯುವವರೆಗೆ ಆಗಾಗ ಎದ್ದು ಹೋಗಬಾರದು. ಪೂಜೆಮಾಡುವವನು, ಮೊದಲು ತನ್ನ ಅಂಗರ ಇಲ್ಲಿ ಮಂತ್ರನ್ಯಾಸವನ್ನು ಮಾಡಿಕೊಂಡು, ಅರ್ಚಾಪ್ರತಿಮೆಗೂ ಹಾಗೆಯೇ ಮಂತ್ರಪೂರಕವಾದ ಅಂಗನ್ಯಾಸವನ್ನು ನಡೆಸಿ, ಆಮೇಲೆ ಆ ಅರ್ಚಾ ಮೂರ್ತಿಯನ್ನು ಕೈಯಿಂದ ಸವರಬೇಕು. ಆಮೇಲೆ ಪ್ರೋಕ್ಷಣಕಲಶವನ್ನು ತನ್ನ ಎಡಪಾರ್ಶ್ವದಲ್ಲಿಟ್ಟುಕೊಂಡು, ಆ ಕಲಶತೀರಜಂದ, ಪೂಜಾಸ್ಥಳ ವನ್ನೂ, ಪೂಜಾದ್ರವ್ಯಗಳನ್ನೂ, ಅರ್ಭ್ಯಪಾದ್ಯಾ ಪಾತ್ರಗಳನ್ನೂ