ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

988 ಅಣ್ಯಾ ೧೯.) ಏಕಾದಶಸ್ಕಂಧನು. ಅವಲಂಬಿಸಿ, ಅಂತರಾತ್ಮನಾದ ನಾನೇ ನಿನಗೆ ಪ್ರಾಪ್ಯನೂ, ಪ್ರಾಪಕನೂ ಎಂಬ ನಂಬಿಕೆಯನ್ನಿಟ್ಟು, ನನ್ನ ನಾ ರಾಧಿಸುತ್ತಿರು. ಹಿಂದಿನ ಅನೇಕಮಹ ರ್ಷಿಗಳಕೂಡ, ಜ್ಞಾನವಿಜ್ಞಾನಗಳೆಂಬ ಈ ಎರಡುಬಗೆಯ ಯಜ್ಞಗಳಿಂ ದಲೇ ತಮ್ಮ ಆತ್ಮನಲ್ಲಿ ಅಂತರಾತ್ಮನಾದ ನನ್ನನ್ನಾ ರಾಧಿಸಿ ಸಿದ್ಧಿಯನ್ನು ಹೊಂದಿರುವರು. ಉದ್ದವಾ ! ಈಗ ಪ್ರಕೃತಿಪರಿಣಾಮರೂಪವಾದ ಈ ಶರೀರವನ್ನವಲಂಬಿಸಿರುವ ನಿನ್ನಲ್ಲಿ ಉತ್ಪತ್ತಿ ಸ್ಥಿತಿ ಲಯಗಳೆಂಬ ವಿಕಾರ ಗಳು ಶರೀರಸಂಬಂಧಕ್ಕೆ ಮೊದಲೂ ಇದ್ದುವಲ್ಲ! ಮುಂದೆಯೂ ಉಂಟಾ ಗತಕ್ಕವುಗಳಲ್ಲ! ಆ ವಿಕಾರಗಳೆಲ್ಲವೂ ಶರೀರಕ್ಕೆ ಸಂಬಂಧಪಟ್ಟವುಗಳೇ ಹೊರತು ನಿನಗಲ್ಲ. ಆತ್ಮ ಸ್ವರೂಪವೆಂಬದು,ಶರೀರಸಂಬಂಧಕ್ಕೆ ಮೊದಲ , ಶರೀರವಿಯೋಗವಾದ ಮೇಲೆಯೂ ಇರುವಂತೆಯೇ, ಅವುಗಳ ಮಧ್ಯಕಾಲ ದಲ್ಲಿಯೂ ವೃಕಯಾದಿವಿಕಾರಗಳಿಲ್ಲದೆ ಏಕರೂಪವಾಗಿರುವುದು. ಆದು ದರಿಂದ ಈ ವಿಕಾರಗಳು ಶರೀರಕ್ಕೇ ಹೊರತು ಆತ್ಮನಿಗಲ್ಲವೆಂದು ತಿಳಿ” ಎಂದನು. ತಿರುಗಿ ಉದ್ದವನು (ಕೃಷ್ಣಾ! ಓ ವಿಶ್ವೇಶ್ವರಾ ! ವಿಶ್ವ ಮೂರ್ತಿ! ನೀನು ಹೇಳಿದ ಜ್ಞಾನವೆಂಬುದು ಅತಿಪುರಾತನವಾಗಿ, ಉಪದೇಶಪರಂಪರೆ ಯಿಂದ ಬರತಕ್ಕದು. ವೈರಾಗ್ಯವನ್ನೂ , ಮೋಕ್ಷಜ್ಞಾನವನ್ನೂ ಹುಟ್ಟಿ ಸ ತಕ್ಕುದಾಗಿಯೂ, ಆತ್ಮಶುದ್ಧಿಗೆ ಕಾರಣವಾಗಿಯೂ ಇರುವ ಆ ಜ್ಞಾನ ವಿಚಾರವನ್ನು ನನಗೆ ಇನ್ನೂ ವಿಸ್ತರಿಸಿ ತಿಳಿಸಬೇಕು. ಮತ್ತು ಮಹನೀಯ ರಿಗೂ ಸುಲಭವಾಗಿ ತಿಳಿಯದ ಪರಮಗೋಪ್ಯವಾದ ಭಕ್ತಿಯೋಗವನ್ನೂ ನನಗೆ ವಿವರಿಸಿ ತಿಳಿಸಬೇಕು ಭಯಂಕರವಾದ ಸಂಸಾರವೆಂಬ ಕಾಡುಮಾ ರ್ಗದಲ್ಲಿ, ತಾಪತ್ರಯವೆಂಬ ಬಿಸಿಲಿಗೆ ಸಿಕ್ಕಿ ತಪಿಸುತ್ತಿರುವ ನನಗೆ, ಅಮೃತ ಧಾರೆಯನ್ನು ವರ್ಷಿಸುವಂತೆ ಮೋಕ್ಷಸುಖವನ್ನು ತೋರಿಸತಕ್ಕೆ ನಿನ್ನ ಬಾ ದಾರವಿಂದವೆಂಬ ಕೊಡೆಯೇ ಆಶ್ರಯವಾಗಬೇಕಲ್ಲದೆ ಬೇರೆ ಗತಿಯಿಲ್ಲ ! ಸಂಸಾರವೆಂಬ ಹಾಳುಬಾವಿಯಲ್ಲಿ ಬಿದ್ದು, ಕಾಲವೆಂಬ ಕೊರಸರ್ಪದಿಂದ ದಷ್ಯನಾಗಿ, ವಿಷಯಾಭಿಲಾಷೆಯೆಂಬ ದಾಹದಿಂದ ತಪಿಸುತ್ತಿರುವ ನನ್ನ ನ್ನು, ಮೋಕ್ಷಜ್ಞಾನಬೋಧಕಕಗಳಾದ ನಿನ್ನ ವಾಕ್ಯಾಮೃತವರ್ಷದಿಂದ