ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮೮ ಶ್ರೀಮದ್ಭಾಗವತವು [ಅಧ್ಯಾ, ೩. ಸುವುದಕ್ಕೆ ಶಕ್ತರಾಗದೆ ಹೋದರು. ಹೀಗೆ ಕಾಲವಶರಾದ ಅವರ ಹೆಸರು ಮಾತ್ರ ಈಗ ಕಿವಿಗೆ ಬೀಳುವುದೇ ಹೊರತು; ಯಾರೂ ಈಗ ಕಣ್ಣಿಗೆ ಕಾಣ ತಕ್ಕವರಲ್ಲ.” ಇದು ಎರಡನೆಯ ಅಧ್ಯಾಯವು. ನಿ ( ರಾಜರ ಮಮತೆಯನ್ನು ನೋಡಿ ಭೂಮಿಯ ಹಾಸ್ಯ ವಚನಗಳು. ಓ ಪರೀಕ್ಷಿದ್ರಾಜಾ ! ಈ ಭೂಮಿಯೂ ಕೂಡ ತನ್ನನ್ನು ಸಾಧಿಸಬೇ ಕಂದು ತವಕಿಸುತ್ತಿರುವ ಆರಾಜರನ್ನು ನೋಡಿ ಹೀಗೆಂದು ಹಾಸ್ಯ ಮಾಡು ತಿರುವುದು ( ಅಯ್ಯೋ ! ಈ ರಾಜರ ಅವಿವೇಕವನೆಂದು ಹೇಳ ಬಹುದು ? ಮೃತ್ಯುವಿನ ಕೈಯಲ್ಲಿ ಆಟದ ಬೊಂಬೆಯಂತೆ ಸಿಕ್ಕಿಬಿದ್ದಿರುವ ಈ ರಾಜರು, ನನ್ನನ್ನು ಜಯಿಸಿ ಭೋಗಿಸಬೇಕೆಂದು ಯತ್ನಿಸುತ್ತಿರುವರು. ತಮ್ಮ ಪಿತೃ ಪಿತಾಮಹಾದಿಗಳ ಮರಣವನ್ನು ಕಣ್ಣಾರೆ ನೋಡಿ, ತಾವೂ ಹಾಗೆಯೇ ಮೃತ್ಯುವಶರೆಂಬುದನ್ನು ತಿಳಿದವರಾಗಿದ್ರೂ, ಇವರು ನನ್ನನ್ನು ತಮ್ಮ ವಶಮಾಡಿಕೊಳ್ಳಬೇಕೆಂದು ಆತುರಪಡುತ್ತಿರುವರೇ ಹೊರತು, ಈ ಕೋರಿಕೆಯು ಕೇವಲಸಿರರಕವೆಂಬುದನ್ನು ತಿಳಿಯಲಾರರು ನೀರಿನ ಗುಳ್ಳೆ ಯಂತೆ ಈಗಲೋ ನಾಳೆಯೋ ನಾಶಹೊಂದತಕ್ಕೆ ತಮ್ಮ ದೇಹದಲ್ಲಿ ತಮ್ಮ ಗೆ ನಂಬಿಕೆಯಿರುವುದರಿಂದಲ್ಲವೇ ಇವರಿಗೆ ಈ ವ್ಯಮನೋರಥಗಳೆಲ್ಲವೂ ಹುಟ್ಟುವುವು. ಇವರು ತಮ್ಮೊಳಗೆ ತಾವು ” ಮೊದಲು ಇಂದ್ರಿ ಯಸಿಗ್ರಹವನ್ನು ಸಾಧಿಸಿ, ಅದರಿಂದ ದೇವತೆಗಳನ್ನು ಪಾಸಿಸಿ, ಆ ದೇವತೆ ಗಳ ಅನುಗ್ರಹವನ್ನು ಸಂಪಾದಿಸಬೇಕು ಆ ಅನುಗ್ರಹಬಲದಿಂದ ಇತರ ರಾಜರನ್ನೂ, ರಾಜಮಂತ್ರಿಗಳನ್ನೂ, ರಾಜಾಧಿಕಾರಿಗಳನ್ನೂ, ಪರಜನ ರನ್ನೂ, ಅವರ ಆಪ್ತಜನವನ್ನೂ , ಗಜಾಧಿಪತಿಗಳನ್ನೂ, ಆಮೇಲೆ ಲೋಕಕಂ ಟಕರಾದ ದುಷ್ಟರನ್ನೂ ಕ್ರಮವಾಗಿ ಜಯಿಸುತ್ತಬಂದು, ಸಮುದ್ರಾಂತ ವಾದ ಸಮಸ್ತಭೂಮಿಯನ್ನೂ ಜಯಿಸಿಬಿಡಬೇಕು.” ಎಂಬೀ ಆಶೋತ್ತರ ಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಗುಣಿಸುತ್ತಿರುವರೇ ಹೊರತು, ತಮ್ಮ ಬೆನ್ನ ಹಿಂದೆ ಕಾದಿರುವ ಮೃತ್ಯುವನ್ನು ಕಾಣಲಾರರು. ಒಂದುವೇಳೆ ದೈವಾ