ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮ ಶ್ರೀಮದ್ಭಾಗವತವು [ಅಭ್ಯಾ. ೧೪. ಡುತ್ತಿರುವುದೆಂದೂ, ಧ್ಯಾನಕಾಲದಲ್ಲಿ ಅದನ್ನು ಮೇಲುಮುಖವಾಗುವಂತೆ ಸರಿಯಾಗಿ ತಿರುಗಿಸಿಟ್ಟು, ಚೆನ್ನಾಗಿ ವಿಕಾಸಗೊಳಿಸಿದಂತೆಯೂ, ಅದು ಅಷ್ಟ್ರಪತ್ರಗಳಿಂದಲೂ, ಕರ್ಣಿಕೆಯಿಂದಲೂ ಶೋಭಿಸುತ್ತಿರುವುದೆಂದೂ ಭಾವಿಸಿಕೊಳ್ಳಬೇಕು. ಮತ್ತು ಅದರ ಕರ್ಣಿಕೆಯನ್ನು ಸುತ್ತಿ, ಹೊರಗಿ ನಿಂದ ಕ್ರಮವಾಗಿ ಸೂರೆಚಂದ್ರಾಗ್ನಿ ಮಂಡಲಗಳು ಆವರಿಸಿರುವಂತೆ ಧ್ಯಾನಿಸಬೇಕು, ಆ ಅಗ್ನಿ ಮಂಡಲದ ನಡುವೆ ಶುಭಾಶ್ರಯವಾದ ನನ್ನ ಸ್ವ ರೂಪವನ್ನು ಧ್ಯಾನಿಸಬೇಕು. ಅಲ್ಲಿ ಧ್ಯಾನವಿಷಯವಾದ ನನ್ನ ಸ್ವರೂಪ ವೆಂತದೆಂದು ಕೇಳಿದೆಯಲ್ಲವೆ ? ಅದನ್ನು ಹೇಳುವೆನು ಕೇಳು ! ಶ್ಯಾಮಲ ವಾದ ಮೈ!ಶಾಂತಮೂರ್ತಿ ! ಅಂದವಾದ ಮುಖ! ಸುಂದರವಾಗಿ ನೀಡಿದ ನಾಲ್ಕುಭುಜಗಳು ! ಪರಮಸುಂದರವಾದ ಕೊರಲು! ನುಣುಪಾದ ಕಪೋ ಲಗಳು : ಶುಭವಾದ ಮುಗುಳ್ಳ ಗೆ! ಒಂದೇ ಅಳತೆಯುಳ್ಳ ಎರಡು ಕಿವಿಗೆ ಳಲ್ಲಿಯೂ ತೂಗಾಡುತ್ತಿರುವ ಮಕರಕುಂಡಲಗಳು!ಮೈಮೇಲೆ ಹೊಂಬಣ್ಣ ದ ಪಟ್ಟಿ ಮಡಿ ! ಮೇಘಶ್ಯಾಮಲವಾದ ಮೈ: ಶ್ರೀವತ್ವವೆಂಬ ಮಕ್ಕೆ ಯಿಂದಲೂ, ಶ್ರೀದೇವಿಯಿಂದಲೂ ಶೋಭಿತವಾದ ಎದೆ! ಶಂಖಚಕ್ರ ಗದಾಪದ್ಯಗಳಿಂದ ಶೋಭಿಗಳಾದ ಚತುರ್ಭುಜಗಳು, ಕಂಠದಲ್ಲಿ ವನ ಮಾಲಿಕೆ ! ಕಾಲಿನಲ್ಲಿ ಅಂದುಗೆಗಳು ! ಕೌಸ್ತುಭರತ್ನ ಕಾಂತಿಯಿಂದ ತುಂ ಬಿದ ಮೈ. ! ಕಾಂತಿಯಿಂದ ಝಗಝಗಿಸುತ್ತಿರುವ ಕಿರೀಟ, ಕೇಯೂರ, ಕಟಕ, ಕಟಿಸೂತ್ರಾದ್ಯಾಭರಣಗಳಿಂದ ಕೂಡಿದ ಸಾಂಗಸುಂದರವಾದ ಮೂರ್ತಿ! ಪ್ರಸನ್ನ ದೃಷ್ಟಿ ! ಇಂತಹ ಸುಕುಮಾರವಾದ ನನ್ನ ದಿವ್ಯಾ ಕೃತಿಯಲ್ಲಿ, ಪಾದದಿಂದ ತಲೆಯವರೆಗೆ ಒಂದೊಂದವಯವದ ಸೌಂದರವ ನ್ಯೂ ಪ್ರತ್ಯೇಕವಾಗಿ ಮನಸ್ಸಿಗೆ ತಂದುಕೊಂಡು ಧ್ಯಾನಿಸಬೇಕು. ಈ ಧ್ಯಾನಕಾಲದಲ್ಲಿ ನೀರನಾದವನು, ಮನಸ್ಸೆಂಬ ಹಗ್ಗದಿಂದ, ಕಣ್ಣು, ಕಿವಿ, ಮೊದಲಾದ ಇಂದ್ರಿಯಗಳೆಂಬ ಕುದುರೆಗಳನ್ನು, ಶಬ್ಯಾವಿಷಯಗಳ ಕಡೆಗೆ ಹೋಗದಂತೆ ಬಂಧಿಸಿ, ಬುದ್ಧಿಯೆಂಬ ಸಾರಥಿಯ ಸಹಾಯದಿಂದ ಆ ಮನಸ್ಸನ್ನು ನನ್ನಲ್ಲಿ ತಗುಲಿಸಿಡಬೇಕು. ಹೀಗೆ ಮದೇಕಧ್ಯಾನದಿಂದ ನನ್ನ ಸಾಂಗಸೌಂದಯ್ಯವನ್ನೂ ಅನುಭವಿಸುತ್ತ ಬಂದಮೇಲೆ, ಬೇರೆ