ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೬ ಶ್ರೀಮದ್ಭಾಗವತವು [ಅಧ್ಯಾ, ೨೩, ಲೆಯೂ, ಮನುಷ್ಯನು ಅವುಗಳನ್ನು ನಂಬಿ ಎಚ್ಚರತಪ್ಪಿದ್ದರೆ, ಅವು ತಿರುಗಿ ವಿಷಯಾಭಿಲಾಷೆಯನ್ನು ಹುಟ್ಟಿಸಿ ಅವರವನ್ನೇ ತಂದಿಡುವುವು. ಆದುದ ರಿಂದ ಮನುಷ್ಯನು, ಈ ವಿಚಾರವನ್ನು ತಿಳಿದು, ಆ ಇಂದ್ರಿಯಗಳಲ್ಲಿ ವಿಶ್ವಾಸ ವನ್ನಿಡದೆ, ವಿಷಯಸಂಗವನ್ನು ಬಿಟ್ಟು, ನನ್ನನ್ನು ಭಜಿಸುತ್ತ, ಸತ್ಯಾಭಿ ವೃದ್ಧಿಗೆ ಹೇತುಗಳಾದ ದ್ರವ್ಯಗಳನ್ನೇ ಸೇವಿಸುತ್ತ ಬಂದರೆ, ಆ ಸತ್ತೋ ಪ್ರೇಕದಿಂದ ರಜಸ್ತಮೋಗುಣಗಳನ್ನು ಅಡಗಿಸಬಹುದು. ಆದರೆ ಈ ಸತ್ಯ ಗುಣವೂಕೂಡ ಪ್ರಕೃತಿಸಂಬಂಧಿಯೆ. ಆದುದರಿಂದ, ಆ ಗುಣವಿರುವವ ರೆಗೂ ಕೂಡ ಪ್ರಕೃತಿಸಂಬಂಧವು ಬಿಡಲಾರದು. ಹಾಗಿದ್ದರೂ ಆ ಸತ್ವಗುಣ ವನ್ನು ಹೆಚ್ಚಿಸಿಕೊಳ್ಳುವುದರಿಂದ, ಅನನ್ಯ ಪ್ರಯೋಜನವಾದ ನನ್ನ ಉಪಾಸ ನಾತ್ಮಕಜ್ಞಾನವು ಹುಟ್ಟುವುದು. ಆ ಜ್ಞಾನದಿಂದ ಮನಸ್ಸು ರಾಗಾದಿ ದೋಷಗಳನ್ನು ನೀಗಿ ನಿಷ್ಕಲ್ಮಷವಾಗುವುದು. ಈ ಜ್ಞಾನಬಲದಿಂದ ಆ ಸತ್ವಗುಣವೂ ತನ್ನಿಂದತಾನೇ ಶಾಂತವಾಗುವುದು. ಹೀಗೆ ಗುಣತ್ರಯ ರಹಿತನಾದ ಜೀವನು, ದೇಹಾವಸಾನದಲ್ಲಿ ನನ್ನನ್ನು ಸೇರುವನು. ಹೀಗೆ ಮನಸ್ಸಿನಲ್ಲಿ ತೋರುವ ಸತ್ಯಾದಿಗುಣಗಳನ್ನೂ, ಹೊರಗಿನ ದೇಹವನ್ನೂ ನೀಗಿದ ಜೀವನು, ತನಗೆ ಅ ತರಾಮಿಯಾದ ನನ್ನ ಸ್ವರೂಪವನ್ನು ಅನ ವರತವೂ ಸಾಕ್ಷಾತ್ಕರಿಸುತ್ತಿರುವುದರಿಂದ, ಸಂಸಾರಕಾರಣಗಳಾದ ಹೊರ ಗಿನ ಕರಗಳಲ್ಲಿಯಾಗಲಿ, ಒಳಗೆ ಮೋಕ್ಷ ಸಾಧನವಾದ ಜ್ಞಾನಯೋಗದಲ್ಲಿ ಯಾಗಲಿ, ಅವನಿಗೆ ಪ್ರವೃತ್ತಿಯು ಹುಟ್ಟದು. ಎಂದರೆ, ಮುಕ್ತಿದಶೆಯಲ್ಲಿ ಜೀವನು ಶಾಸ್ತವಶ್ಯನೂ ಆಗದಿರುವನು. ಇದು ಇಪ್ಪತ್ತೈದನೆಯ ಅಧ್ಯಾಯವು (ಸಂಗನು ದೂಷವೆಂಬುದನ್ನು ತಿಳಿಸುವುದಕ್ಕೆ 1 ಸಿ, ಕೃಷ್ಣನು ಐತಿಗೀತೆಯನ್ನು ಹೇಳಿದುದು. * ಉದ್ಯನಾ ! ಯಾವನು ನನ್ನ ಪ್ರಾಪ್ತಿಗೆ ಸಾಧನವಾದ ಇಂತಹ ಮನುಷ್ಯ ದೇಹವನ್ನು ಪಡೆದಿರುವಾಗ, ಫಲೋದ್ದೇಶವುಳ್ಳ ಪ್ರವೃತ್ತಿ ಧರ ಗಳಲ್ಲಿ ಪ್ರವರ್ತಿಸದೆ, ನನ್ನ ಆರಾಧನರೂಪವಾದ ನಿವೃತ್ತಿಧಮ್ಮವನ್ನೇ ಅವ