ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭14 ಶ್ರೀಮದ್ಭಾಗವತರು [ಅಧ್ಯಾ. ಎಂ ನೋಡುತ್ತಿರುವುದನ್ನೂ ಕಂಡನು. ಹೀಗೆ ನೋಡಿದಮೇಲೆ ಆ ಶಿಶುವನ್ನು ತೋಳುಗಳಿಂದ ಅಪ್ಪಿಕೊಳ್ಳುವುದಕ್ಕಾಗಿ ಮುಂದೆ ಹೋಗುವಷ್ಟರಲ್ಲಿ, ವಿಚಿತ್ರಶಕ್ತಿಯುಳ್ಳ ಭಗವಂತನು, ಆ ತನ್ನ ಶಿಶುರೂಪವನ್ನು ಮರೆಸಿಕೊಂಡು ಬಿಟ್ಟನು. ಆ ಶಿಶುವನ್ನು ಆರಿಸಿಕೊಳ್ಳಬೇಕೆಂದು ಆತಿಕುತೂಹಲ ಹಿಂದಿದ್ದ ಆ ಋಷಿಯ ಉದ್ದೇಶವು, ದರಿದ್ರನ ಮನೋರಥದಂತೆ ನಿಷ್ಪಲ ವಾಯಿತು. ಆ ಶಿಶುವು ಕಣ್ಮರೆಯಾದೊಡನೆ, ಪ್ರಳಯಬಲವೂ ಅದೃಶ್ಯ ವಾಯಿತು. ಆ ವಟವೃಕ್ಷವೂ ಅಗೋಚರವಾಯಿತು! ಆ ಋಷಿಯು ಹಿಂದಿ ನಂತೆ, ತನ್ನ ಆಶ್ರಮದಲ್ಲಿ ತಾನು ಸಮಾಧಿನಿಷ್ಠ ನಾಗಿ ಕುಳಿತಿರುವುದನ್ನೂ ನೋಡಿದನು. ಇದು ಒಂಬತ್ತನೆಯ ಅಧ್ಯಾಯವು. w ಮ ಪ್ರತ್ಯಕ್ಷವಾದುದು. - w ! ಮಾರ್ಕಂಡೇಯನಿಗೆ ಪಾರತೀಪರಮೇಶ್ವರರು ) ಪ್ರತ್ಯಕ್ಷವಾದುದು. - ಓ ಮಹರ್ಷಿಗಳೆ ! ಹೀಗೆ ಮಾರ್ಕಂಡೇಯನ್ನು, ಭಗವಂತನು ತನಗೆ ತೋರಿಸಿದ ಮಾಯಾಪ್ರಭಾವವನ್ನು ನೋಡಿ ವಿಸ್ಮಿತನಾಗಿ, “ಭಗವತ ವಾದ ಇಂತಹ ಮಾಯೆಯನ್ನು ದಾಟಬೇಕಾದರೆ, ಅವನಲ್ಲದೆ ಬೇರೆ ಗತಿಯಿ ಲ್ಲವೆಂದೂ ನಿರ್ಧರಿಸಿ, ಅವನನ್ನೇ ಮರೆಹೊಕ್ಕು ಹೀಗೆಂದು ಪ್ರಾರ್ಥಿಸುವನು. ««& ಶ್ರೀಹರಿ ! ಆಶ್ರಿತರಿಗೆ ಸಂಸಾರಭಯವನ್ನು ನೀಗಿಸತಕ್ಕೆ ನಿನ್ನ ಪಾದ ಮೂಲವನ್ನೇ ನಾನು ಮರೆಹೊಕ್ಕಿರುವೆನು.ಯಾವ ನಿನ್ನ ಮಾಯೆಯಿಂದುಂ ಟಾದ ಆಜ್ಞಾನದಲ್ಲಿ ಸಿಕ್ಕಿ ವಿದ್ವಾಂಸರೂ ಮೋಹಗೊಳ್ಳವರೂ, ಅಂತಹ ಮಾಯೆಯಿಂದ ನೀನು ನನ್ನನ್ನು ದರಿಸಬೇಕು.” ಎಂದನು. ಹೀಗೆ ಮಾರ್ಕೆ೦ ಡೇಯನು ನಿಶ್ಚಲಮನಸ್ಸಿನಿಂದ ಭಗವಂತನಲ್ಲಿ ಮರೆಹೊಕ್ಕು ಪ್ರಾರ್ಥಿಸು ಇರುವ ಸಮಯಕ್ಕೆ ಸರಿಯಾಗಿ, ರುದ್ರನು ಪಾಶ್ವತೀಸಮೇತನಾಗಿ, ತನ್ನ

  • ದೇಶದಲ್ಲಿ ನಿಶಲವಾದ ದೇಶವ, ಅ ಕಾಲದಲ್ಲಿ ಮಹಾಕಾಲವು ಅಂತ ರ್ಗತವಾಗಿರುವಂತ ಮಾಡುವುದೂ, ತನಗಿಂತಲೂ ವ್ಯತಿರಿಕ್ತಗಳಾದ ಪದರ ಸಮೂಹ ಗಳನ್ನು, ಕಲಾವಕಾನವನ್ನುಂಟುಮಾಡುವ ಜಲಾದಿಗಳನ್ನೂ ಸೃಹಕುವುದು ಆಹರನ ಸರಳತ್ರದಿಂದಾದುದೇ!