ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨೫.] ಏಕಾದಶಸ್ಕಂಧನು. ೩೨೫ ಉಪಭೋಗಿಸಲ್ಪಡತಕ್ಕವುಗಳಾಗಿಯೂ, ಶ್ರಮಲಬ್ಬಗಳಾಗಿಯೂ ಇರುವ ಆಹಾರಗಳು ರಾಜಸಗಳು, ಶಾಸ್ತ್ರ ನಿಷಿದ್ಧಗಳಾಗಿಯೂ, ದೇಹೇಂದ್ರಿಯಗಳಿಗೆ ಬಾಧಕಗಳಾಗಿಯೂ ಇರುವ ಆಹಾರಗಳು ತಾಮಸಗಳು. ಆತ್ಮಾನುಭವ ದಿಂದಾಗುವ ಸುಖವು ಸಾತ್ವಿಕವು. ವಿಷಯಾನುಭವದಿಂದಲಭಿಸತಕ್ಕ ಸುಖವು ರಾಜಸವು, ಮೋಹದಿಂದಲೂ, ದೈನ್ಯದಿಂದಲೂ ಲಭಿಸತಕ್ಕ ಸುಖವು ತಾಮ ಸವು ನನ್ನ ಗುಣಾನುಭವದಿಂದಾಗುವ ಸುಖವು ನಿರ್ಗುಣವಾದುದು. ಉದ್ದವಾ! ಹೀಗೆಯೇ, ದ್ರವ್ಯ, ದೇಶ, ಫಲ, ಕಾಲ, ಜ್ಞಾನ, ಕರ, ಕಾರಣ, ಶ್ರದ್ಧೆ, ಜಾಗರಾದ್ಯವಸ್ಥೆ, ಆಕೃತಿ, ನಿಷ್ಠೆ, ಎಂಬಿವೇ ಮೊದಲಾದುವೆಲ್ಲವೂ ಸತ್ಯಾದಿಗುಣಗಳ ಕಾರರೂಪಗಳಾಗಿ, ಗುಣಮಯಗಳಾಗಿಯೇ ಇರುವುವು. ಇವೆಲ್ಲವೂ ಪ್ರಕೃತಿಸಂಸರ್ಗವುಳ್ಳ ಜೀವವನ್ನೇ ಹೊಂದಿರುವುವು. ಇನ್ನು ಹೆಚ್ಚು ಮಾತಿನಿಂದೇನು ? ಕಣ್ಣಿಂದ ನೋಡಬಹುದಾದ ಐಹಿಕವಿಷಯಗಳು, ಕಿವಿಯಿಂದ ಕೇಳಿ ತಿಳಿಯತಕ್ಕ ಪಾರಲೌಕಿಕಗಳು, ಬುದ್ಧಿಯಿಂದ ಯೋ ಚಿಸತಕ್ಕವುಗಳು, ಇವೆಲ್ಲವೂ ತ್ರಿಗುಣಗಳಿಂದಲೇ ಬಂದವುಗಳೆಂದು ತಿಳಿ! ಹೀಗೆ ಇವೆಲ್ಲವೂ ತ್ರಿಗುಣಾತ್ಮಕಗಳಾದುದರಿಂದಲೇ, ಆಯಾ ಸತ್ಯಾದಿಗು ಣಗಳಿಗೆ ತಕ್ಕ ಪ್ರಾಚೀನಪುಣ್ಯಪಾಪಕಗಳ ಮೂಲಕವಾಗಿ, ಸಂ ಸಾರವನ್ನುಂಟುಮಾಡುವುವು. ಆದುದರಿಂದ ಜೀವನು ತನ್ನ ಮನ ಸ್ಸಿನಲ್ಲಿ ಹುಟ್ಟತಕ್ಕ ಈ ಸತ್ಯಾದಿತ್ರಿಗುಣಗಳನ್ನು ಜಯಿಸಬೇಕಾದರೆ, ದೃಢವಾದ ಭಕ್ತಿಯೋಗದಿಂದ ನನ್ನಲ್ಲಿಯೇ ನಟ್ಟ ಮನಸ್ಸುಳ್ಳವನಾಗಿರ ಬೇಕು. ಆ ಭಕ್ತಿಯೋಗದಿಂದ ಸತ್ವಗುಣವು ಹೆಚ್ಚು ಹೆಚ್ಚುತ್ತ ಬಂದು, ರಜಸ್ತಮೋಗುಣಗಳಡಗಿಸಿ, ಕೊನೆಗೆ ಪರಿಪಾಕದಶೆಯಲ್ಲಿ ಆ ಸತ್ವಗುಣವೂ ತನ್ನಿಂದತಾನೇ ಶಾಂತವಾಗುವುದು. ಹೀಗೆ ಪುರುಷನು ನಿರ್ಗುಣತ್ವವನ್ನು ಹೊಂದಿದಮೇಲೆ, ನನ್ನೊಡನೆ ಸಾಧನವನ್ನು ಪಡೆಯು ವನು ಆದುದರಿಂದಲೇ ವಿದ್ವಾಂಸರು, ಆತ್ಮ ಪರಮಾತ್ಮ ಜ್ಞಾನಸಂಪಾ ದನೆಗೆ ಮುಖ್ಯಸಾಧನವಾದ ಈ ಮನುಷ್ಯ ದೇಹವನ್ನು ಪಡೆದಿರುವಾಗ, ಗುಣಮೂಲಕಗಳಾದ ಶಬ್ದಾದಿವಿಷಯಗಳಲ್ಲಿ ಮನಸ್ಸಿಡಿ,ನನ್ನನ್ನೇ ಅನವರ ತವೂ ಭಜಿಸುತ್ತಿರುವರು. ಇಂದ್ರಿಯಗಳನ್ನು ವಶಮಾಡಿಕೊಂಡಮೇ