ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9Y ಶ್ರೀಮದ್ಭಾಗವತವು ಅಣ್ಣ ೮. ಆ ಮಾರ್ಕಂಡೇಯನು ಈ ಕಲ್ಪದಲ್ಲಿಯೇ ತನ್ನ ಕುಲದಲ್ಲಿ ಹುಟ್ಟಿದವ ನೆಂದೂ ಕೇಳಿರುವೆನು. ಅವನು ಹುಟ್ಟಿದಮೇಲೆ ಪ್ರಳಯವೇನೂ ನಡೆದ ಹಾಗಿಲ್ಲ! ಹೀಗೆ ಈ ಕಲ್ಪದಲ್ಲಿಯೇ ಹುಟ್ಟಿದವನು, ಇನ್ನೂ ನಡೆಯದಿರುವ ಪ್ರಳಯವನ್ನು ನೋಡಿದನೆಂಬುದು ಹೇಗೆ ? ಜಗತ್ತೆಲ್ಲವೂ ಏಕಾರ್ಣವವಾಗಿ ದ್ದಾಗ, ಆತನು ತಾನೊಬ್ಬನೇ ಆ ಪ್ರಳಯಜಲದಲ್ಲಿದ್ದು, ಆಗ ಸಣ್ಣ ಮಗು ವಾಗಿ ವಟಪತ್ರದಲ್ಲಿ ಮಲಗಿದ್ದ ಪರಮಪುರುಷನನ್ನು ಕಂಡನಂತೆ ? ಈ ವಿಚಾರದಲ್ಲಿ ನಮಗೆ ದೊಡ್ಡ ಸಂದೇಹವುಂಟಾಗಿರುವುದರಿಂದ, ಅದರ ನಿಜಸ್ಥಿತಿಯನ್ನು ಕೇಳಿ ತಿಳಿಯಬೇಕೆಂದು ನಮಗೆ ಬಹಳ ಕುತೂಹಲವುಂಟು. ಓ ಮಹಾಯೋಗೀ! ಪುರಾಣವಿದರಲ್ಲಿ ಮೇಲೆನಿಸಿಕೊಂಡ ನೀನು, ಈ ನಮ್ಮ ಸಂದೇಹವನ್ನು ನೀಗಿಸಬೇಕು” ಎಂದನು ಆದಣಾ ಸೂತನು ಓ ಮಹರ್ಷಿ! ಕೇಳು ! ಈಗ ನೀನು ಕೇಳುವ ಪ್ರವು ಲೋಕಪಾವನವಾದುದು. ಏಕೆಂದರೆ, ಕಲಿದೋಷವನ್ನು ನೀಗಿಸ ತಕ್ಕ ಶ್ರೀಮನ್ನಾರಾಯಣನ ಚರಿತ್ರವೇ ಇದರಲ್ಲಿ ನಿರೂಪಿಸಲ್ಪಡುವುದು, ಆ ಚರಿತ್ರವನ್ನು ತಿಳಿಸುವೆನು ಕೇಳು. “ ಮಾರ್ಕಂಡೇಯನು, ತನ್ನ ತಂದೆ ಯಿಂದ ಬ್ರಾಹ್ಮಣವರ್ಣಕ್ಕೆ ಉಚಿತವಾದ ಸಂಸ್ಕಾರಗಳೆಲ್ಲವನ್ನೂ ಕ್ರಮ ವಾಗಿ ಹೊಂದಿ, ಉಪನಯನವಾದಮೇಲೆ ಶಾಸೋಕ್ತವಾಗಿ ವೇದಗಳ ವ್ಯಭ್ಯಸಿಸಿ, ತನ್ನ ವರ್ಣಾಶ್ರಮಧರ್ಮಗಳನ್ನೂ, ವೇದಾಧ್ಯಯನವನ್ನೂ ಮಾಡುತ್ತಿದ್ದನು. ಸೃಷ್ಟಿಕಬ್ರಹ್ಮಚಾರಿಯೆನಿಸಿಕೊಂಡು, ಶಾಂತನಾಗಿ, ಆಶ್ರಮೋಚಿತವಾದ ಜಲಾವಲ್ಕಲಗಳನ್ನೂ, ದಂಡಕಮಂಡಲುಗಳನ್ನೂ, ಮೌಂಟೇಯಜ್ಯೋಪಪೀಠಗಳನ್ನೂ,ಕೃಷ್ಣಾಜಿನವನ್ನೂ, ಅಕ್ಷಮಣಿಯ ಜಪ ಸರವನ್ನೂ, ದರ್ಭೆಯ ಪವಿತ್ರಗಳನ್ನೂ ಧರಿಸಿ, ತ್ರಿಸಂಧ್ಯಾಕಾಲಗಳಲ್ಲಿಯೂ ಸೂರಲ್ಲಿಯ, ಗುರುಗಳಲ್ಲಿಯೂ ಬ್ರಾಹ್ಮಣರಲ್ಲಿಯೂ, ತನ್ನ ಹೃದಯ ದಲ್ಲಿಯೂ 'ಆ ಶ್ರೀಹರಿಯನ್ನು ಆರಾಧಿಸುತ್ತಿದ್ದನು. ಹಗಲುರಾತ್ರಿಗಳೆರಡರಲ್ಲಿ ಯೂ,ಅನ್ನವನ್ನು ಭಿಕ್ಷ ಮಾಡಿತಂದು,ಅದನ್ನು ಗುರವಿಗೆ ಸಮರ್ಪಿಸಿ, ಅವನು ಭುಜಿಸಿ ಮಿಕ್ಕುದನ್ನು, ಅವನು ಅನುಜ್ಞೆಯನ್ನು ಕೊಟ್ಟರೆ ತಾನು ಭುಜಿಸು ವನು. ಅವನು ಅನುಮತಿಸದಿದ್ದರೆ ಉಪವಾಸದಲ್ಲಿಯೇ ಇದ್ದು ಬಿರುವನು