ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ಳು ಅಧ್ಯಾ, ೨೨.] ಏಕಾದಶಂಥವು. ಜೀವನಿಗೆ ಆ ಭೇದಗಳಿಲ್ಲವೆಂದೂ ಅನುವಾದಿಸಿ, ಕೊನೆಗೆ ಆ ಜೀವನಿಗುಂ ಜಾಗತಕ್ಕ ವಿಕಾರಗಳೂ ನನಗಿಲ್ಲವೆಂಬುದನ್ನೂ ಪ್ರತಿಪಾದಿಸಿ, ತನ್ನ ವ್ಯಾಪಾ ರದಿಂದ ವಿರಮಿಸುವುವು. ಇದೇ ವೇದಗಳ ಮುಖ್ಯ ತಾತ್ಪರವು.” ಎಂ ದನು. ಇದು ಇಪ್ಪತ್ತೊಂದನೆಯ ಅಧ್ಯಾಯವು. - + ತತ್ವಸಂಖ್ಯಾ ನಿರೂಪಣವು +m. ಉದ್ಯವನ್ನು ಪ್ರಶ್ನೆ ಮಾಡುವನು. ಓ ವಿಶ್ವೇಶ್ವರಾ ! ಕಷ್ಟಾ : ತತ್ವ ಗಳೆಷ್ಟು ? ಕೆಲವು ಮಹರ್ಷಿಗಳು ಒಂಬತ್ತು ತತ್ವಗಳೆಂದೂ, ಬೇರೆ ಕೆಲ ವರು ಹನ್ನೊಂದು ತತ್ವಗಳೆಂದೂ, ಇನ್ನು ಕೆಲವರು ಇದೇ ತತ್ವಗಳೆಂದೂ ಹೇಳಿರುವರು. ನೀನಾದರೋ ಈಗ ಮೂರೇ ತತ್ವಗಳೆಂದು ಹೇಳುತ್ತಿ ರುವೆ. ಈ ತತ್ವಸಂಖ್ಯೆಯವಿಷಯವಾಗಿ ಇನ್ನೂ ಅನೇಕಭಿನ್ನಾಭಿಪ್ರಾ ಯಗಳನ್ನು ಕೇಳಿರುವೆನು. ಕೆಲವರು ಇಪ್ಪತ್ತಾರುತತ್ವಗಳನ್ನು ವರು. ಕೆಲ ವರು ಇಪ್ಪತ್ತೈದೆಂದು ನಿರ್ಣಯಿಸಿರುವರು. ಹಾಗೆಯೇ ಕೆಲವರು ಆರು ತತ್ವಗಳೆಂದೂ, ಕೆಲವರು ಏಳುತತ್ವಗಳೆಂದೂ, ಕೆಲವರು ನಾಲೈ ತತ್ವಗ ಳೆಂದೂ ಹೇಳುವರು. ಬೇರೆ ಕೆಲವರು ಹದಿನೇಳುತತ್ವಗಳೆಂದು ಹೇಳುವರು. ಕೆಲವರು ಹದಿನಾರೆಂದು ನಿರ್ಣಯಿಸುವರು. ಮತ್ತೆ ಕೆಲವರು ಹದಿಮೂ ರೆಂದು ಹೇಳುವರು. ಋಷಿಗಳು ಹೀಗೆ ತತ್ವಸಂಖ್ಯೆಯನ್ನು ಬೇರೆಬೇರೆ ವಿಧವಾಗಿ ಹೇಳುವ ಉದ್ದೇಶವೇನು ? ಇದರ ನಿರ್ಣಯವನ್ನು ನನಗೆ ತಿಳೆಸ ಬೇಕು.” ಎಂದನು. ಅದಕ್ಕಾ ಕೃಷ್ಣನು ಉದ್ಯವಾ! ಕೇಳು. ಮೇಲೆ ಹೇಳಿದಂತೆ ಋಷಿಗಳು ನಿರೂಪಿಸಿರುವ ಎಲ್ಲಾ ಪಕ್ಷಗಳೂ ಯುಕ್ತಿಯುಗ ಳಾಗಿಯೇ ಇರುವುವು. ಸಮಸ್ತ ತತ್ವಗಳಿಗೂ ಮೂಲಕಾರಣವು ನನ್ನ ಮಾ ಯೆಯೇ ! ಆ ಮಾಯೆಯಿಂದ ಹುಟ್ಟಿದ ತತ್ವಗಳನ್ನು ಅನೇಕವಾಗಿ ವಿಭಾ ಗಿಸಿ, ಹೆಚ್ಚು ಸಂಖ್ಯೆಯನ್ನು ತೋರಿಸಿದರೂ, ಮುಖ್ಯ ವಿಭಾಗಗಳಿಂದ ಸ್ವ ಸಂಖ್ಯೆಯನ್ನು ತೋರಿಸಿದರೂ ವಿರೋಧವೇನೂ ಬಾರದು. ಆದುದರಿಂ ನೀನು ತತ್ವಗಳವಿಷಯವಾಗಿ ಅವರವರು ಹೇಳಿದ ಸಂಖ್ಯಾಭೇದಗಳನ್ನು ವಿರುದ್ಧವಾಗಿ ಗ್ರಹಿಸಬಾರದು. ಆ ಸಂಖ್ಯಾಭೇದಗಳಲ್ಲಿ ವಿರೋಧವಿಲ್ಲವಂ 168 B