ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೩೦ ಶ್ರೀಮದ್ಭಾಗವತವು ಅಧ್ಯಾ. ೧೯. ಆಪ್ಯಾಯನಮಾಡಿ ಉದ್ಧರಿಸಬೇಕು.” ಎಂದನು. ಅದಕ್ಕಾ ಕೃಷ್ಣನು, (ಉದ್ದವಾ ! ಕೇಳು! ಹಿಂದೆ ಅಜಾತಶತ್ರುವಾದ ಛದ್ಮರಾಜನು, ಧರಜ್ಞ ನಾದ ಭೀಷ್ಮಾಚಾಯ್ಯನನ್ನು ನಾವೆಲ್ಲರೂ ಕೇಳುತ್ತಿರುವಹಾಗೆಯೇ ಇದೇ ವಿಚಾರವಾಗಿ ಪ್ರಶ್ನೆ ಮಾಡಿದನು. ಭಾರತಯುದ್ಧವು ಮುಗಿದಮೇಲೆ, ಅದ ರಲ್ಲಿ ತನ್ನ ಬಂಧುಗಳನ್ನು ತಾನು ಕೊಲ್ಲಿಸಿದೆನೆಂಬ ಸಿಲ್ವೇದದಿಂದ, ಧರರಾ ಜನು ಬಹಳವಾಗಿ ಮನಸ್ಸಿನಲ್ಲಿ ಕೊರಗುತ್ಯ, ಶರತಲ್ಪದಲ್ಲಿ ಮಲಗಿದ್ದ ಭೀ ಪ್ರಾಚಾರನಲ್ಲಿಗೆ ಬಂದು, ಅವನಿಂದ ಅನೇಕಧಗಳನ್ನು ಕೇಳಿ ತಿಳಿದಮೇಲೆ, ಮೋಕ್ಷಧವನ್ನೂ ತನಗೆ ಉಪದೇಶಿಸಬೇಕೆಂದು ಪ್ರಾರ್ಥಿಸಿದನುಆಗ ಭೀಷ್ಮಾಚಾರನು ಉಪದೇಶಿಸಿದ ಧರಗಳನ್ನೇ ಈಗ ನಾನೂ ನಿನಗೆ ತಿಳಿ ಸುವೆನು ಕೇಳು ! ಅವು ಜ್ಞಾನ, ವಿಜ್ಞಾನ, ವೈರಾಗ್ಯ, ಶ್ರದ್ಧೆ, ಭಕ್ತಿ, ಇವೆ ಇವುಗಳಿಂದ ಕೂಡಿರುವುವು. ಈ ಕಣ್ಣಿಗೆ ಕಾಣುವ ದೇವಮನುಷ್ಯಾದಿಶರೀ ರಗಳಲ್ಲಿ, ಶಬ್ದ, ರೂಪ, ರಸ, ಗಂಧ, ಸ್ಪರ್ಶ, ಕಾರ್, ಗತಿ, ವಾಕ್ಕು, ಮಲ ಮೂತ್ರ ವೀಲ್ಯ ವಿಸರ್ಜನೆಗಳೆಂಬ ಇಂದ್ರಿಯವ್ಯಾಪಾರಗಳೊಂಭತ್ತೂ, ಏ ಕಾದಶೇಂದ್ರಿಯಗಳೂ, ಪಂಚಭೂತಗಳೂ, ಸತ್ವರಜಸ್ತಮಸ್ತುಗಳೆಂಬ ಮೂರುಗುಣಗಳೂ ಕಲೆತಿರುವುದನ್ನೂ, ಜ್ಞಾನವೊಂದೇ ಆಕಾರವಾಗಿ ಉಳ್ಳ ಆತ್ಮವಸ್ತುವು ನನ್ನೊಡಗೂಡಿಯೇ ಅದರಲ್ಲಿ ನೆಲೆಗೊಂಡಿರುವುದನ್ನೂ ವಿವೇಚನೆಯಿಂದ ತಿಳಿದುಕೊಳ್ಳುವುದೇ ಜ್ಞಾನವೆನಿಸುವುದು. ಎಂದರೆ ಪ್ರಕೃತಿಪುರುಷಸ್ವರೂಪಾರಿವಿವೇಚನವೇ ಜ್ಞಾನವು. ಅಂತಹ ಪ್ರಕೃತಿ ಪುರುಷರಿಗಿಂತಲೂ ವಿಲಕ್ಷಣನಾದ ನನ್ನ ನೇ ಉಪಾಯವಾಗಿ ಹಿಡಿದು, ಅದ ರಿಂದ ಹೊಂದಬೇಕಾದ ಯಾವ ನನ್ನ ಸ್ವರೂಪವುಂಟೋ ಅದನ್ನು ತಿಳಿಯು ವುದೇ ವಿಜ್ಞಾನವೆನಿಸುವುದು ತ್ರಿಗುಣಾತ್ಮಕವಾದ ಪ್ರಕೃತಿಯ ಪರಿಣಾ ಮಗಳೆನಿಸಿಕೊಂಡ ದೇವಮನುಷ್ಯಾದಿದೇಹಗಳಿಗೆ ಮಾತ್ರವೇ ಉತ್ಪತ್ತಿ ಸ್ಥಿತಿಲಯಗಳೆಂಬ ವಿಕಾರಗಳುಂಟೆಂದೂ, ಆತ್ಮವೆಂಬುದು ದೇಹದಿಂದ ದೇ ಹಕ್ಕೆ ಪ್ರವೇಶಿಸುತ್ತ, ಆಯಾದೇಹಪ್ರಾಪ್ತಿಗೆ ಮೊದಲೂ, ದೇಹಸಂಬಂಧ ವಿದ್ಯಾಗಲೂ,ದೇಹವು ಬಿದ್ದು ಹೋದಮೇಲೆಯೂ ತಾನುಮಾತ್ರ ಒಂದೇ ವಿಧವಾಗಿ ನಿಲ್ಲತಕ್ಕುದೆಂದೂ, ಹೀಗೆ ದೇಹಾತ್ಮ ವಿವೇಚನವೇ ಜ್ಞಾನವೆಂ