ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9144 ಶ್ರೀಮದ್ಭಾಗವತನ [ಅಧ್ಯಾ. ೩೦ ದೂ, ಬಂಧುವೆಂದೂ ನೋಡದೆ, ಒಬ್ಬರನ್ನೊಬ್ಬರು ಕೊಲ್ಲುತಿದ್ದರು. ಕೊನೆ ಕೊನೆಗೆ ಅವರಲ್ಲಿದ್ದ ಬಾಣಗಳೆಲ್ಲವೂ ತೀರಿಹೋದುವು. ಧನುಸ್ಸುಗಳೆಲ್ಲವೂ ಮುರಿದು ಬಿದ್ದುವು. ಶಸ್ತ್ರಾಸ್ತ್ರಗಳೂ ಮುಗಿದುಹೋದುವು. ಹೀಗೆ ಯುದ್ಧ ಸಾಧನಗಳೆಲ್ಲವೂ ವ್ಯಯವಾದಮೇಲೆ, ಅವರು ಮುಷ್ಟಿಗಳಿಂದ ಆ ಸಮ ದ್ರತೀರದಲ್ಲಿ ಬೆಳೆದಿದ್ದ ಹೊಡಕೆಗಳನ್ನು ಕಿತ್ತುಕೊಂಡು, ಅದರಿಂದ ಒಬ್ಬ ರನ್ನೊಬ್ಬರು ಹೊಡೆದಾಡುವುದಕ್ಕೆ ತೊಡಗಿದರು.ಅವರು ಕೈಗೆ ಕಿತ್ತುಕೊಂ ಡಕೂಡಲೇ, ದೈವಯೋಗದಿಂದ ಆ ಹೊಡಕೆಯ ಹುಲ್ಲುಗಳೇ ವಜಸ ಮಾನವಾದ ಪುಸ್ತಯುಧಗಳಂತಾದುವು. ಕೃಷ್ಣನು ಬೇಡಬೇಡವೆಂದು ಅನೇಕ ವಿಧವಾಗಿ ತಡೆಯುತ್ತಿದ್ದರೂ ಕೇಳದೆ, ಒಬ್ಬರಿಗೊಬ್ಬರು ಹೊಡೆದಾ ರು, ಕೊನೆಗೆ ಆ ಕೃಷ್ಣನಮೇಲೆಯೇ ತಿರುಗಿ, ಅವನನ್ನೂ ಹೊಡೆಯು ವುದಕ್ಕೆ ಯತ್ನಿಸಿದರು ಹೀಗೆ ಮದಾಂಥರಾದ ಆ ಯಾದವರು, ಭಗವನ್ಮಾ ಯೆಯಿಂದ ಬುದ್ಧಿಗೆಟ್ಟು, ಕೃಷ್ಣ ಬಲರಾಮರನ್ನೇ ತಮಗೆ ಶತ್ರುಗಳಂತೆ ಭಾವಿಸಿ, ಅವರನ್ನು ಕೊಲ್ಲಬೇಕೆಂದು ಮೇಲೆ ಬಿದ್ದು ಬಂದರು. ಆದರೆ ಕೃಷ್ಣ ಬಲರಾಮರಿಬ್ಬರೂ, ತಮ್ಮ ಮೇಲೆ ಹದ್ದು ಮೀರಿ ಬರುತ್ತಿರುವ ಆ ಯಾದವರನ್ನು ನಿವಾರಿಸುವುದಕ್ಕೆ ಬೇರೆ ಉಪಾಯವಿಲ್ಲದೆ, ತಾವೂ ಕೋಪ ರಿಂದ ಕೆಲವು ಹೊಡಕೆಗಳನ್ನು ಕಿತ್ತುಕೊಂಡು, ಅದನ್ನು ಕೈಯಲ್ಲಿ ಹಿಡಿದು ತಿರು `ಸುತ್ತ, ತಮಗಿದಿರಾದವರನ್ನು ಹೊಡೆದೋಡಿಸುತ್ತ ಬಂದರು ಓ ಪ - ಕದ್ರಾಜಾ!ಕೃಷ್ಣನ ಮಾಯೆಯಿಂದ ಮೋಹಿತರಾಗಿ, ಬ್ರಾಹ್ಮಣಶಾಪದಿಂದ ಮೊದಲೇ ಹರಪ್ರಾಯರಾಗಿದ್ದ ಆ ಯಾದವರಿಗೆ, ಅನ್ನೋನ್ಯ ಸ್ಪರ್ಧೆ ಯೂ, ಅದರಿಂದ ಒಬ್ಬರಮೇಲೊಬ್ಬರಿಗೆ ತಡೆಯಲಾರದ ಕೋಪವೂ ಹೆ ಚು ತಬಂದು, ಬಿದಿರುಮೆಳೆಯಲ್ಲಿ ಹುಟ್ಟಿದ ಬೆಂಕಿಯ) ವನವೆಲ್ಲವನ್ನೂ ಶುರುವಂತೆ, ಅಯಾದವ ಕುಲವನ್ನೇ ನಿರ್ಮೂಲಮಾಡುವಂತಾಯಿತು. ಹೀಗೆ ತನ್ನ ಕುಲದವರೆಲ್ಲರೂ ಅನ್ಯೂನ್ಯಕಲಹದಿಂದ ಹತರಾಗಿ ಬಿದ್ದು ದನ್ನು ಕಂಡು, ಕೃಷ್ಣನು, ಭೂಭಾರಪರಿಹಾರವೆಂಬ ತನ್ನ ಉದ್ದೇಶವು ಇಂದಿಗೆ ತೀರಿತೆಂದು ತಿಳಿದುಕೊಂಡನು ಇಷ್ಟರಲ್ಲಿ ಬಲರಾಮನು, ಆ ಸ ಮುದ್ರತೀರದಲ್ಲಿಯೇ ಬೇರೊಂದುಕಡೆಯಲ್ಲಿ, ಪರಮಾತ್ಮಧ್ಯಾನರೂಪವಾದ