ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨೫] ಏಕಾದಶಕ್ಕಂಥವು. ೨೨೬ ದ್ರಿಯಗಳು ವಿಷಯಾತುರದಿಂದಲೂ, ಕರೇಂದ್ರಿಯಗಳು ಕರಾರಂಭದಲ್ಲಿ ಯೂ ಕಳವಳಿಸುತ್ತಿರುವುವೋ, ಆಗ ಅವನಲ್ಲಿ ರಜೋಗುಣವು ಉದ್ರೇಕಹೋಂ ದಿರುವುದಾಗಿ ತಿಳಿಯಬೇಕು.ಯಾವಾಗ ಪುರುಷನ ಚಿತ್ರವು ತಿರೋಹಿತವಾಗಿ, ರೂಪವೇ ಮೊದಲಾದ ಜ್ಞಾನೇಂದ್ರಿಯವಿಷಯಗಳನ್ನೂ ಗ್ರಹಿಸಲಾರದೆ ಲಯಿಸಿಹೋಗುವುದೊ, ಆಗ ಸಂಕಲ್ಪವಿಕಲಾತ್ಮಕವಾದ ಮನಸ್ಕೂ ನಷ್ಟವಾಗುವುದು. ಅಜ್ಞಾನವೂ ವಿಷಾದವೂ ತಲೆದೋರುವುವು. ಅಂತವರಲ್ಲಿ ತಮಸ್ಸು ಉದ್ರೇಕಹೊಂದಿದುದಾಗಿ ತಿಳಿಯಬೇಕು. ಉದ್ದವಾ ! ಸತ್ವ ಗುಣವು ಹೆಚ್ಚಿದಷ್ಟೂ ದೇವತೆಗಳ ಬಲವು ಹೆಚ್ಚುವುದು. ರಜೋಗುಣವು ಹೆಚ್ಚಿದಷ್ಟೂ ಅಸುರರ ಬಲವು ಹೆಚ್ಚು ವುದು. ತಮೋಗುಣವು ಹೆಚ್ಚಿದ ಹಾಗೆಲ್ಲಾ ರಾಕ್ಷಸರ ಬಲವು ಹೆಚ್ಚುವುದು. ದೇಹಸಂಸರ್ಗವುಳ್ಳ ಜೀವನಿಗೆ, ಸತ್ವಗುಣದಿಂದ ಜಾಗರಾವಸ್ಥೆಯೂ, ರಜಸ್ಸಿನಿಂದ ಸ್ವಪ್ನವೂ, ತಮಸ್ಸಿ ಸಿಂದ ಸುಷುಪ್ತಿಯೂ ಉಂಟಾಗುವುದೆಂದು ತಿಳಿ ! ಈ ಮೂರವಸ್ಥೆಗಳ ನ್ನೊಳಗೊಂಡಂತೆ ತೋರುವ ಆತ್ಮಸ್ವರೂಪವು, ಇವು ಮೂರಕ್ಕಿಂತಲೂ ಬೇರೆಯಾಗಿರುವುದು. ಆದುದರಿಂದ ಆತ್ಮನಿಗೆ ಈ ಅವಸ್ಥೆಗಳು ಸ್ವಭಾವ ದಿಂದ ಬಂದುವಲ್ಲ. ಸತ್ವಗುಣವು ಉಲ್ಲಾಸಹೊಂದಿದಷ್ಟೂ ಜನರು ಬ್ರಹ್ಮಲೋಕಪಠ್ಯಂತವಾಗಿ ಮೇಲುಮೇಲಿನ ಉತ್ತಮಲೋಕಗಳನ್ನು ಹೊಂದುವರು. ತಮಸ್ಸು ಹೆಚ್ಚಿದಷ್ಟೂ ಕೆಳಕೆಳಗಿನ ಅಧೋಲೋಕಗಳಲ್ಲಿ ಬಿಳುವರು. ರಜೋಗುಣವು ಹೆಚ್ಚಿದವರು ಮೇಲೆ ಹೇಳಿದ ಊರ್ಧ್ಯಾವೋ ಲೋಕಗಳಿಗೆ ಮಧ್ಯಸ್ಥಾನದಲ್ಲಿ ಸಂಚರಿಸುವರು ಸತ್ವಗುಣವು ಉತ್ಕರ್ಷ ದಶೆಯಲ್ಲಿದ್ದಾಗ ಮರಣಹೊಂದಿದವರು, ಸ್ವರ್ಲೋಕವನ್ನು ಸೇರುವರು. ರಜೋಗುಣವು ಹೆಚ್ಚಿದ್ಯಾಗ ಮೃತಿಹೊಂದಿದವರು ನರಲೋಕವನ್ನು ಹೊಂದುವರು. ತಮೋಗುಣವು ಹೆಚ್ಚಿದಾಗ ಮೃತರಾದವರು ನರಕದಲ್ಲಿ ಬಿಳುವರು.ಈ ಗುಣಗಳಸಂಬಂಧವೇ ಇಲ್ಲದ ನಿರ್ಗುಣರು ನನ್ನನ್ನು ಸೇರುವರು ಸತ್ವಗುಣದ ಅತ್ಯುತ್ಕರ್ಷದಶೆಯೇ ನಿರ್ಗುಣವು. ಏಕೆಂದರೆ, ಸರ ಗುಣವು ಅತ್ಯುಚ್ಚದಶೆಯನ್ನು ಹೊಂದಿದಾಗ, ಅದು ಎಲ್ಲಾ ಗುಣಗಳ