ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಶ್ರೀಮದ್ಭಾಗವತರು [ಅಧ್ಯಾ, ೨೨. ಕಾರಣವು. ಸತ್ವರಜಸ್ತಮೋಗುಣಗಳು ತಮ್ಮ ಸಾಮ್ಯವನ್ನು ಬಿಟ್ಟು, ಹೆಚ್ಚು ಕಡಿಮೆಯಾಗುವುದರಿಂದ ಸಂಭವಿಸುವ ವಿಕಾರವೇ ಅಹಂಕಾರವೆಂದು ತಿಳಿ! ಈ ಅಹಂಕಾರವೆಂಬುದು ಪ್ರಕೃತಿಯಿಂದ ಜನಿಸಿದ ಮಹತ್ವದಿಂದ ಹುಟ್ಟಿದುದು. ಈ ಅಹಂಕಾರವೇ ಮನುಷ್ಯನಿಗೆ ದೇಹವೇ ಆತ್ಮವೆಂಬ ಭ್ರಮವನ್ನೂ, ಆತ್ಮನಲ್ಲಿ ದೇವಮನುಷ್ಕಾವಿಕಲ್ಪಗಳನ್ನೂ ಹುಟ್ಟಿಸು ತಿರುವುದು. ಈ ಅಹಂಕಾರವು ಸಾತ್ವಿಕ (ವೈ ಕಾರಿಕ),ಐಂದ್ರಿಯ ತೈಜಸ), ತಾಮಸಗಳೆಂಬ ಮೂರು ವಿಧವಾಗಿರುವುದು. ಐಂದ್ರಿಯವೆಂಬುದು ರಾಜಸಾ ಹಂಕಾರವು. ಇಂದ್ರಿಯೋತ್ಪತ್ತಿಗೆ ಈ ರಾಜಸಾಹಂಕಾರವು ಸಹಕಾರಿ ಯಾದುದರಿಂದ ಅದಕ್ಕೆ ಐಂದ್ರಿಯವೆಂದು ವ್ಯವಹಾರವು. ಉದ್ಯವಾ ! ಹೀಗೆ ದೇಹಾತ್ಮಗಳಲ್ಲಿ ಅಭೇದಭ್ರಾಂತಿಯನ್ನುಂಟು ಮಾಡುವುದಕ್ಕೆ ಅಹಂ ಕಾರವೇ ಕಾರಣವೆಂದು ತಿಳಿದೆಯಷ್ಟೆ” « ಹಾಗಿದ್ದರೆ ದೇಹಾತ್ಮಗಳಿಗಿರುವ ವೈಲಕ್ಷಣ್ಯವೇನು” ಎಂದು ಕೇಳುವೆಯಾ ? ಆತ್ಮವೆಂಬುದು ಕೇವಲಜ್ಞಾ ನಮಯವು. ದೇಹವಾದರೋ ಜಡವಾದುದು. 4 ಅಹಂ ” ಎಂಬ ಶಬ್ದಕ್ಕೆ ಆತ್ಮವೇ ವಿಷಯವೆಂಬುದು ನಿರ್ವಿವಾದಾಂಶವು ಉಂಟೆಂದೂ ಇಲ್ಲವೆಂದೂ ಹೇಳುವ ವ್ಯಪದೇಶಗಳು ದೇಹಕ್ಕೇ ಹೊರತು ಆತ್ಮ ನಿಗಿಲ್ಲ. ಆತ್ಮವು ಯಾವಾಗಲೂ ಇರತಕ್ಕುದು. ದೇಹಕ್ಕಾದರೂ ಆಗಾಗ ವಿಕಾ ರಗಳುಂಟಾಗುವುದರಿಂದ ಒಮ್ಮೆ ಇದ್ದ ಸ್ಥಿತಿಯು ಮತ್ತೊಮ್ಮೆ ಕಾಣಲಾ ರದು. ( ಆಸ್ತಿ” “ನಾಸ್ತಿ”ಎಂಬ ಭೇದವು ಆತ್ಮಕ್ಕಿಲ್ಲದಿದ್ದರೂ,ನನ್ನಲ್ಲಿ ಏನು ಖರಾದವರಿಗೆ ಆತ್ಮನಲ್ಲಿಯೂ ಆ ಭೇದಭ್ರಮವೇ ಅನುವರ್ತಿಸುತ್ತ ಬರು ವುದು ಏಕೆಂದರೆ, ನನ್ನಿಂದಲೇ ಚೇತನರಿಗೆ ಆತ್ಮಸ್ವರೂಪಸಾಕ್ಷಾತ್ಕಾರವುಂ ವಾಗಬೇಕು, ಆ ಆತ್ಮಸ್ವರೂಪಜ್ಞಾನವುಂಟಾಗುವವರೆಗೆ ದೇಹಾತ್ಮಭಮ ವೂ, ಅದರಮೂಲಕವಾದ ಸಂಸಾರವೂ ಬಿಟ್ಟು ಹೋಗಲಾರದು.”ಎಂದನು. ಉದ್ಯವನ್ನು ತಿರುಗಿ ಪ್ರಶ್ನೆ ಮಾಡುವನು (ಪ್ರಭೋ ! ನಿನ್ನಲ್ಲಿ ವಿಮು ಖರಾದವರು, ತಮ್ಮ ತಮ್ಮ ಕರ್ಮಗಳಿಗೆ ಫಲವಾಗಿ ಶರೀರಗಳನ್ನೆತ್ತುತಿ ರುವರೆಂದು ಹೇಳಿದೆಯಲ್ಲವೆ ? ಕಬದ್ಧರಾದವರು ನೀಚೋಮದೇಹಗ ಇನ್ನು ಹೇಗೆ ಹೊಂದುವರೆಂಬುದನ್ನೂ, ಆ ದೇಹವಿಯೋಗದ ರೀತಿ