ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

AM ಶ್ರೀಮದ್ಭಾಗವತರು [ಅಧ್ಯಾ, ೨೪, ನಾಚೇತನಮಯವೆನಿಸಿರುವುದು. ಆ ಮೂರುಬಗೆಯ ಅಹಂಕಾರಗಳಲ್ಲಿ ಶಬ್ದಾದಿತನ್ಮಾತ್ರಗಳಿಗೆ ಕಾರಣವೆನಿಸಿದ ತಾಮಸಾಹಂಕಾರದಿಂದ ಆಕಾ ಶಾದಿಮಹಾಭೂತಗಳು ಹುಟ್ಟಿದುವು. ಆಯಾದೇವತೆಗಳಿಂದ ಅಧಿಷಿ ತಗ ಳಾದ ಏಕಾದಶೇಂದ್ರಿಯಗಳು ರಾಜಸ ಸಾತ್ವಿಕಾಹಂಕಾರಗಳಿಂದ ಹುಟ್ಟಿ ದುವು. ಮಹತ್ತು ಮೊದಲಾದ ಆ ತತ್ವಗಳು ಮೊದಲು ಬೇರೆಬೇರೆಯಾ ಗಿದ್ದಾಗ, ಪ್ರಪಂಚಸೃಷ್ಟಿಗೆ ಸಾಮರ್ಥ್ಯವಿಲ್ಲದಿದ್ದುವು. ಆಗ ಆ ತತ್ವಗಳು, ಅಂತರಾಮಿಯಾದ ನನ್ನ ಪ್ರೇರಣೆಯಿಂದ ಒಂದಾಗಿ ಕಲೆತು, ಕಾರಸಮ ರಗಳಾಗಿ, ಸುವರ್ಣಮಯವಾದ ಒಂದು ಅಂಡವನ್ನು ಸೃಷ್ಟಿಸಿದುವು. ಉದ್ದವಾ ! ಆ ಅಂಡವು ನನಗೆ ನಿವಾಸಸ್ಥಾನವಾಯಿತು. ಪ್ರಳಯ ಜಲಮಧ್ಯದಿಂದ ಹುಟ್ಟಿದ ಆ ಅಂಡದಲ್ಲಿ ನಾನಿದ್ದಾಗ, ನನ್ನ ನಾಭಿಯಿಂದ ಜಗರೂಪವಾದ ಒಂದು ಕಮಲವು ಹೊರಟಿತು. ಆ ಕಮಲಮಧ್ಯ ದಿಂದ ಚತುರಖನು ಉದ್ಭವಿಸಿದನು. ಆ ಚತುರುಗನು ಕೇ ವಲ ರಜೋಗುಣಪ್ರಚುರನಾಗಿ ಸೃಷ್ಟಿಕಾರಕ್ಕಾಗಿ ಬಯಸಿ, ತಶ ಸ್ಸಿನಿಂದ ನನ್ನ ಅನುಗ್ರಹವನ್ನು ಪಡೆದು, ಭೂರ್ಭುವಸ್ಸುವರ್ಲೋಕಗಳೆಂಬ ಮೂರುಲೋಕಗಳನ್ನೂ, ಲೋಕಪಾಲಕರನ್ನೂ ಸೃಷ್ಟಿಸಿದರು. ಅವುಗ ಇಲ್ಲಿ ಸ್ವರ್ಲೋಕವು ದೇವತೆಗಳಿಗೆ ಸ್ಥಾನವೆನಿಸಿತು. ಭುವರ್ಲೋಕವೆಂಬ ಅಂತರಿಕ್ಷವ ಭೂತಗಳಿಗೆ ಸ್ಥಾನವೆನಿಸಿತು. ಭೂಲೋಕವೆಂಬುದು ಮತ್ತು ಪೈರು ಮೊದಲಾದ ಪ್ರಾಣಿಗಳಿಗೆ ಸ್ಥಾನವಾಯಿತು. ತಪಸ್ಸಿದ್ದರೆನಿಸಿದ ಭ್ರಗು ಮೊದಲಾದ ಮಹರ್ಷಿಗಳಿಗೆ ಈ ಮೂರು ಲೋಕಗಳಿಗಿಂತಲೂ ಬೇರೆ ನಿಸಿದ ಮಹರ್ಲೋಕ, ಜನಲೋಕಗಳೆಂಬ ಬೇರೆ ಎರಡುಲೋಕಗಳು ನಿವಾಸಸ್ಥಾನಗಳಾದುವು. ಸುರರಿಗೂ, ನಾಗರಿಗೂ ವಾಸಕ್ಕಾಗಿ, ಭೂಮಿ ಯ ಕೆಳಗೆ, ಆತಲಾದಿಲೋಕಗಳು ಸೃಷ್ಟಿಸಲ್ಪಟ್ಟವು. ಚೇತನರು ನಡೆಸ ತಕ್ಕ ಸಾತ್ವಿಕ, ರಾಜಸ, ತಾಮಸಗಳೆಂಬ ಮೂರು ಬಗೆಯ ಕರಗಳಿಗೆ ಫಲ ರೂಪಗಳಾದ ಸ್ಯಾನಭೇದಗಳೆಲ್ಲವೂ ಆ ಮೂರುಲೋಕಗಳಲ್ಲಿಯೇ ಎಂದರೆ, ಬ್ರಹ್ಮಾಂಡದಲ್ಲಿಯೇ ಅಂತರ್ಗತಗಳಾಗಿರುವುವು. ಪ್ರಾಣಾಯಾಮವೇ ಮೊದಲಾದ ಯೋಗಗಳಿಗೂ, ತಪಸ್ಸಿಗೂ, ಸನ್ಯಾಸಧರಗಳಿಗೂ ಫಲ