ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯ, ಆ.] ದ್ವಾದಶಸ್ಕಂಧನ. ೨೩೯ ಳನ್ನು ಹೊರಡಿಸಿ, ಅವುಗಳನ್ನು ತನ್ನಲ್ಲಿಯೇ ಅಡಗಿಸಿಟ್ಟುಕೊಳ್ಳುವಂತೆ ನೀನೇ ಈ ಜಗತ್ತನ್ನು ಸೃಷ್ಟಿಸಿ, ನೀನೇ ಅದನ್ನು ಉಪಸಂಹರಿಸಿಕೊಳ್ಳುವೆ. ಹೀಗೆ ಎಲ್ಲಾ ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಸಹಿಸತಕ್ಕವ ನಾಗಿ, ಸಾಧಾರನಾಗಿ, ಸಧ್ವನಿಯಾಮಕನಾದ ನಿನ್ನ ಪಾದಮೂಲ ವನ್ನಾಶ್ರಯಿಸುವುದರಿಂದ, ಗುಣ, ಕಮ್ಮ, ಕಾಲಸಂಬಂಧವಾದ ದೋಷಗ ಳಾವುವೂ ಅಂಟಲಾರವು, ವೇದವಿದರಾದ ಮಹರ್ಷಿಗಳೆಲ್ಲರೂ ಯಾವು ದನ್ನು ಅನವರತವೂ ಧ್ಯಾನಿಸುತ್ತಲೂ, ಸ್ತುತಿಸುತ್ತಲೂ, ಪೂಜಿಸುತ್ತಲೂ ಇರುವರೋ, ಆ ನಿನ್ನ ಪಾದವನ್ನೇ ನಾನು ಮರೆಹೊಕ್ಕಿರುವೆನು ಓ ನಿರ ತಿಶಯ ಪುರುಷಾರ್ಥಸ್ವರೂಪನಾದ ಸತ್ಯೇಶ್ವರಾ' ನಿನ್ನ ಪಾದಾಶ್ರಯವಿದ್ದವ ರಿಗೆ ಯಾವ ವಿಧವಾದ ಭಯವೂ ಇರುವುದಿಲ್ಲ. ನಿನ್ನ ಪಾದಾಶ್ರಯಕ್ಕಿಂತ ಲೂ, ಜನರಿಗೆ ಉತ್ತಮವಾದ ಬೇರೆ ಶ್ರೇಯಸ್ಕಾಧನವೂ ಇಲ್ಲ! ಸಾಳಾಚೆ ತು ರ್ಮುಖಬ್ರಹ್ಮನ ಪದವಿಯಕೂಡ ಎರಡು ಪರಾರ್ಧಕಾಲದವರೆಗೆ ಮಾ ತ್ರವೇ ನಿಲ್ಲತಕ್ಕುದೇ ಹೊರತು ಸ್ಥಿರವಲ್ಲ ಆದುದರಿಂದ ಕಾಲರೂಪನಾದ ನಿನಗೆ ಆ ಬ್ರಹ್ಮನೂ ಭಯಪಡುತ್ತಿರುವನು. ಹೀಗಿರುವಾಗ ಅವನಿಂದ ಸೃಷ್ಟಿಸಲ್ಪಟ್ಟ ಇತರಭೂತಗಳು ಕಾಲಕ್ಕಾಗಿ ಭಯಪಡುವುದರಲ್ಲಿ ಆತ್ಮ ರವೇನಿದೆ ? ಹೀಗೆ ಸತ್ಯಸಂಕಲ್ಪ ನಾಗಿಯೂ, ಪರಮಾತ್ಮನಾಗಿಯೂ, ಗುರುವಾಗಿಯೂ, ಪರಾತ್ಪರನಾಗಿಯೂ ಇರುವ ನಿನ್ನ ಪಾದಮೂಲವೇ ಭಕ್ತರಿಗೆ ಆತ್ಮಹಿತವನ್ನುಂಟು ಮಾಡತಕ್ಕುದಾದುದರಿಂದ, ನಾನು, ಅನೇಕ ದೋಷಗಳಿಗೆ ನೆಲೆಯಾಗಿಯೂ, ನಿಷ್ಪಲವಾಗಿಯೂ ಇರುವ ಈ ದೇಹಾದಿ ಗಳಲ್ಲಿ ಮಮತೆಯನ್ನು ತೊರೆದು, ನಿನ್ನ ಭಾವವನ್ನೆ ಭಜಿಸುವೆನು. ನಿನ್ನ ಪಾದಸರಣಮಾತ್ರವೇ ಸಮಸ್ತಪುರುಷಾರ್ಥಗಳನ್ನೂ ಕೈಗೂಡಿಸುವುದು. ಓ ಶರೀಶ್ವರ! ನೀನೇ ಅಲಾರವಾಗಿ ರಜಸ್ಸತ್ವತಮೋಗುಣಗಳನ್ನು ಮುಂದಿಟ್ಟುಕೊಂಡು, ಬ್ರಹ್ಮ ರುದ್ರಾದಿದೇಹಗಳನ್ನು ಸಂಗ್ರಹಿಸಿ, ಈ ಜಗ ತಿನ ಸೃಷ್ಟಿ ಸ್ಥಿಲಯಗಳನ್ನು ನಿರ್ವಹಿಸತಕ್ಕವನಾಗಿದ್ದರೂ, ಅವುಗಳಲ್ಲಿ ಸಮಯವಾದ ನಿನ್ನ ಮೂರ್ತಿಯ ಉಪಾಸನಾಯೋಗ್ಯವಾದುರ್ ಹುಳು, ಬ್ರಹ್ಮ ರುದ್ರಾಹರೂಪಗಳಲ್ಲ! ಏಕೆಂದರೆ, ಆ ಸತ್ವಮೂತಿಯೇ