ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭4c ಶ್ರೀಮದ್ಭಾಗವತವು (ಅಧ್ಯಾ, ೧೨ ನ್ನೊಳಗೊಂಡಿರುವುದು. ಶೈವವು ಇಪ್ಪತ್ತುನಾಲ್ಕು ಸಾವಿರಗ್ರಂಥಗಳುಳ್ಳು ದು, ಶ್ರೀಭಾಗವತವು ಹದಿನೆಂಟುಸಾವಿರಗ್ರಂಥಗಳುಳ್ಳುದು. ನಾರದಪುರಾ ಣವು ಇಪ್ಪತ್ತೈದುಸಾವಿರ ಗ್ರಂಥಗಳನ್ನೊಳಗೊಂಡಿರುವುದು. ಹೀಗೆಯೇ, ಮಾರ್ಕಂಡೇಯದಲ್ಲಿ ಒಂಬತ್ತು ಸಾವಿರಗ್ರಂಥಗಳೂ, ಆಗ್ನೆಯದಲ್ಲಿ ಹದಿನೈ ದು ಸಾವಿರದ ನಾನೂರು ಗ್ರಂಥಗಳೂ, ಭವಿಷ್ಯದಲ್ಲಿ ಹದಿನಾಲ್ಕು ಸಾವಿರದ ಐನೂರು ಗಂಧಗಳೂ,ಬ್ರಹ್ಮ ಕೈವರ್ತದಲ್ಲಿ ಹದಿನೆಂಟುಸಾವಿರ ಗ್ರಂಥಗಳೂ ಲೈಂಗದಲ್ಲಿ ಹನ್ನೊಂದುಸಾವಿರ ಗ್ರಂಥಗಳೂ, ವಾರಾಹದಲ್ಲಿ ಇಪ್ಪತ್ತುನಾ ಲ್ಕು ಸಾವಿರ ಗ್ರಂಥಗಳೂ, ಸ್ಟಾಂದಪುರಾಣದಲ್ಲಿ ಎಂಭತ್ತೊಂದುಸಾವಿರದ ಒಂದು ನೂರು ಗ್ರಂಥಗಳೂ, ವಾಮನದಲ್ಲಿ ಹತ್ತು ಸಾವಿರ ಗ್ರಂಥಗಳೂ, ಕೂರ್ಮದಲ್ಲಿ ಹದಿನೇಳುಸಾವಿರ ಗ್ರಂಥಗಳೂ, ಮಾತೃದಲ್ಲಿ ಹದಿನಾಲ್ಕು ಸಾವಿರ ಗ್ರಂಥಗಳೂ, ಗಾರುಡದಲ್ಲಿ ಹತ್ತೊಂಬತ್ತು ಸಾವಿರ ಗ್ರಂಥಗಳೂ, ಬ್ರಹ್ಮಾಂಡದಲ್ಲಿ ಹನ್ನೆರಡುಸಾವಿರ ಗ್ರಂಥಗಳೂ ಇವೆ. ಹೀಗೆ ಈ ಎಲ್ಲಾ ಪುರಾಣಗಳ ಗ್ರಂಥಸಂಖ್ಯೆಯು ಒಟ್ಟು ನಾಲ್ಕು ಲಕ್ಷವೆಂದು ನಿರ್ಣಯಿಸಲ್ಪ ಟಿದೆ. ಇವುಗಳಲ್ಲಿ ಈ ಶ್ರೀಭಾಗವತವು ಹದಿನೆಂಟಸಾವಿರ ಗ್ರಂಥಗಳನ್ನೊಳ ಕೊಂಡಿರುವುದು. ಪೂತ್ವದಲ್ಲಿ ಭಗವಂತನು, ತನ್ನ ನಾಭಿಕಮಲದಲ್ಲಿದ್ದ ಬ್ರಹ್ಮನು ಸಂಸಾರಭೀತನಾಗಿದ್ದಾಗ, ಅವನಲ್ಲಿ ಕಾರುಣ್ಯದಿಂದ ಈ ಪುರಾಣವನ್ನು ಪದೇಶಿಸಿದನು. ಈ ಪುಠಾಣದಲ್ಲಿ ನಡುನಡುವೆ ಬೇರೆಬೇರೆ ಎಷ್ಟೋ ಉಪಾಖ್ಯಾನಗಳು ಕಲೆತಿದ್ದರೂ, ಅವೆಲ್ಲವೂ ಭಗವತ್ಕಥಾಮೃತ ಗರ್ಭಿತಗಳಾಗಿಯೇ ಇದ್ದು, ಸರುಷರನ್ನು ಆನಂದಗೊಳಿಸುವುವು. ಸಮ ವೇದಾಂತಗಳಿಗೂ ಸಾರಭೂತವಾದ ಆ ಬ್ರಹ್ಮ ಸ್ವರೂಪವೇ ಇದರಲ್ಲಿ ಮುಖ್ಯಪ್ರತಿಪಾದ್ಯವಾದ ವಿಷಯವು. ಎಂದರೆ, ಆದೇ ಇದರ ಮುಖ್ಯವಾ ಚ್ಯಾರ್ಥವು ಬ್ರಹ್ಮವೆಂಬ ಆ ವಸ್ತುವು ಅದ್ವಿತೀಯವಾದುದು. ಕೈವಲ್ಯವೂ (ಮೋಕ್ಷವು ಅದರ ಕೈವಶವಾಗಿರುವುದು. ಆ ಕೈವಲ್ಯವೇ ಈ ಗ್ರಂಥದ ಪಠನಪ್ರಯೋಜನವು. ಯಾವನು ಪರಮಾತ್ಮಾನುಭವದಲ್ಲಿಯೇ ನಟ್ಟ ಮನ ಸ್ಸುಳ್ಳವನಾಗಿ, ಬೇರೊಂದನ್ನೂ ತಿಳಿಯದೆ, ಆ ಭಗವಂತನ ಮನೋಹರ ವಾದ ಅಲೆಗಳಿಂದ ಆಕರ್ಷಿಸಲ್ಪಟ್ಟ ಮನಸ್ಸುಳ್ಳವನಾಗಿ, ಆ ಭಗವಂತನ