ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೮೨ ಶ್ರೀಮದ್ಭಾಗವತವು [ಅಧ್ಯಾ, ೨೧, ಧರಿಸಿರತಕ್ಕೆ ಪ್ರಾಣವಾಯುವೇ ವಾಗಿಂದ್ರಿಯದಮೂಲಕವಾಗಿ ಛಂದೋ ಮಯವಾಗಿಯೂ, ಅಮೃತಮಯವಾಗಿಯೂ ಹೊರಬಿದ್ದು, ನಾನಾಬ ಗೆಯ ಶ್ರೇಯೋಮಾರ್ಗಗಳನ್ನು ನಿರೂಪಿಸತಕ್ಕ ವೇದವಾಕ್ಯವನ್ನು ವ್ಯಕ್ತ ಗೊಳಿಸುವುದು. ಇದು, ಶಬ್ದಬ್ರಹ್ಮಾತ್ಮಕವಾದುದರಿಂದ ಬೃಹತಿಯೆನಿಸುವು ದು.ಓಂಕಾರವೆಂಬ ಪ್ರಣವಾಕ್ಷರವನ್ನೇ ಬೀಜವಾಗಿ ಉಳ್ಳ ಸ್ವರಗಳು,ಸ್ಪರ್ಶಾ ಕ್ಷರಗಳು, ಊಷ್ಮವರ್ಣಗಳು, ಅಂತಸಗಳು ಮೊದಲಾದ ಎಲ್ಲಾ ವರ್ಣಗ ಳಿಂದ ಭೂಷಿತವಾಗಿಯೂ ನಾನಾಬಗೆಯ ಶ್ರುತಿಭೇದಗಳಿಂದ ವಿಸ್ತ್ರತವಾ ಗಿಯೂ, ಕೊನೆಮೊದಲಿಲ್ಲದುದಾಗಿಯೂ, ನಾಲ್ಕು ನಾಲ್ಕು ವರ್ಣಗಳಿಂದ ಕ್ರಮವಾಗಿ ಹೆಚ್ಚುತ್ತಿರುವ ಗಾಯತ್ರಿ ಮೊದಲಾದ ವಿವಿಧಛಂದಸ್ಸುಗೆ ಮುಳ್ಳುದಾಗಿಯೂ ಇರುವ ವೇದವನ್ನು, ಪ್ರಾಣವಾಯುವೇ ಹೀಗೆ ತನ್ನ ವ್ಯಾಪಾರದಿಂದ ಆಗಾಗ ಹೊರಕ್ಕೆ ಕಾಣಿಸುತ್ತ, ಆಗಾಗ ತನ್ನಲ್ಲಿಯೇ ಉಡುಗಿಸಿಟ್ಟುಕೊಳ್ಳವುದು. ಉದ್ಯವಾ : ಮೇಲೆ ಹೇಳಿದಂತೆ ಚತುರ್ವ ರ್ಸೊತ್ತರಗಳಾದ ಛಂದಸ್ಸುಗಳಲ್ಲಿ, ಗಾಯತ್ರಿ, ಉಷ್ಣಕು, ಅನುಷ್ಟುಭ, ಬೃಹತಿ, ಪಚ್ಚಿ, ತ್ರಿಷ್ಟುಭ, ಜಗತಿ, ಅತಿಛಂದಸ್ಸು, ಅತ್ಯಷ್ಟಿ, ಅತಿಜಗತಿ, ವಿರಾಟ್ಟೆ೦ಬ ಭೇದಗಳುಂಟು. ಶಬ್ದಬ್ರಹ್ಮಾತ್ಮಕವಾದ ಆ ವೇದವು ಯಾವುದನ್ನು ವಿಧಿಸುವುದೋ, ಯಾವ ತತ್ವವನ್ನು ವಿವರಿಸುವುದೋ, ಯಾವುದನ್ನು ಅನುವಾದಮಾಡುವುದೋ, ಯಾವ ಅರ್ಥವನ್ನು ವಿಕಲ್ಪಿ ಸುವದೋ, ಆ ಮರ್ಮಗಳನ್ನೆಲ್ಲಾ ನಾನೊಬ್ಬನು ಹೊರತು ಬೇರೆ ಯಾ ರೂ ತಿಳಿಯಲಾರರು. ಆ ವೇದಗಳ ಹೃದಯವನ್ನು ಚೆನ್ನಾಗಿಬಲ್ಲವನು. ನಾನೊಬ್ಬನೇ. ಮುಖ್ಯವಾಗಿ ವೇದಗಳ ಮುಖ್ಯತಾತ್ಸಲ್ಯವೆಲ್ಲವೂ ಇಷ್ಟೇ! ಅದು ವಿಥಿಸತಕ್ಕ ಧರಗಳೆಲ್ಲವೂ ನನ್ನ ಆರಾಧನರೂಪವಾದುದು. ಆದರೆ ಳಗಿನ ವಾಕ್ಯಗಳೆಲ್ಲವೂ ಸಶರೀರಕನಾದ ನನ್ನನ್ನೇ ವಿಷಯೀಕರಿಸುತ್ತಿರು ವುವು. ಆ ವೇದಗಳು ವಿಕಲ್ಪಿಸಿ ಅಪವಹಿಸತಕ್ಕ ವಿಷಯಗಳೂ ನಾನೇ ! ಇನ್ನು ಹೆಚ್ಚು ಮಾತಿನಿಂದೇನು ಮೊತ್ತಕ್ಕೆ ವೇದದ ತಾತ್ಪಯ್ಯಾರವೇನೆಂದರೆ ಆವೇದಗಳು ಒಂದೊಂದುವಾಕ್ಯದಿಂದಲೂ ನನ್ನನ್ನೇ ವಿಷಯೀಕರಿಸುತ್ತ, ದೇವಮನುಷ್ಯಾದ್ಯಾಕಾರಗಳೆಲ್ಲವೂ ಪ್ರಕೃತಿಪರಿಣಾಮರೂಪಗಳೆಂದೂ,