ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫೫ ಅಧ್ಯಾ, ೨೯.] ಏಕಾದಶಸ್ಕಂಧನು. ಮತ್ತಷ್ಟು ಚಾಂಚಲ್ಯವನ್ನು ಹೊಂದುವುದು. ಹೀಗೆ ಮನಸ್ಸಮಾಧಾನ ವಿಲ್ಲದವರು ಯೋಗಭ್ರಷ್ಟರಾಗುವರು. ಆದುದರಿಂದ ಯೋಗಚಿಯಲ್ಲಿ ಸಿದ್ಧಿಯನ್ನು ಹೊಂದುವುದು ಸುಲಭಸಾಧ್ಯವಲ್ಲ. ಇದನ್ನು ಪಾಲೋ ಚಿಸಿಯೇ ವಿವೇಕಿಗಳಾದ ಕೆಲವರು, ಆ ಯೋಗಮಾರ್ಗಕ್ಕೆ ಪ್ರಯತ್ನಿ ಸದೆ, ನಿರ್ಭಯಾನಂದವನ್ನು ಕರೆಯತಕ್ಕ ನಿನ್ನ ಪಾದಾರವಿಂದಗಳನ್ನೇ ಆಶ್ರಯಿಸಿ, ಸುಲಭವಾಗಿ ತಮ್ಮ ಇಷ್ಯಸಿದ್ಧಿಯನ್ನು ಪಡೆಯುವರು. ಇದಲ್ಲದೆ ಕರೆ ಗಳನ್ನಾಚರಿಸುವವರೂ, ಯೋಗಾಭ್ಯಾಸವನ್ನು ಹಿಡಿದವರೂ, ತಾವೇ ದೊಡ್ಡ ಕರಸಿಷ್ಠರೆಂದೂ, ಯೋಗನಿಷ್ಠರೆಂದೂ, ಗವ್ವಪಟ್ಟು, ನಿನ್ನ ಮಾಯೆಯಿಂದ ವಂಚಿತರಾಗುವುದೂ ಉಂಟು. ಇದರಿಂದ ಅವರ ಪ್ರಯತ್ನ ಗಳೆಲ್ಲವೂ ನಡುವೆ ವಿಫತವನ್ನು ಹೊಂದುವುವು. ನಿನ್ನನ್ನೇ ಆಶ್ರಯಿಸಿ, ನಿನ್ನಲ್ಲಿ ಭಕ್ತಿಯೋಗವನ್ನು ಹಿಡಿದವರಿಗೆ, ಅಂತಹ ಗವೂ ಹುಟ್ಟಿಲಾ ರದು. ನಿನ್ನ ನಾಶ್ರಯಿಸಿದವರನ್ನು ಸಿನೇ ಆ ಮಾಯೆಯಿಂದ ದಾಟಿ ಸುವೆ! ಭಕ್ತ ಪರಾಧೀನನಾದ ನಿನ್ನಲ್ಲಿ ಇದೊಂದಾಶ್ರವಲ್ಲ ! ಏಕೆಂದರೆ, ಲೋಕೇಶ್ವರರೆನಿಸಿದ ಬ್ರಹ್ಮಾದಿದೇವತೆಗಳೆಲ್ಲರೂ, ತಮ್ಮ ಕಿರೀಟಾಗ್ರ ದಿಂದ ನಿನ್ನ ಪಾದಾರವಿಂದವನ್ನು ಸೋಕಿಸಿ ನಮಸ್ಕರಿಸುವರು. ಇಂತಹ ಮಹಾಮಹಿಮೆಯುಳ್ಳವನಾಗಿದ್ದರೂ, ನೀನು ಹಿಂದೆ ಬೃಂದಾವನದಲ್ಲಿ ಮೃಗಗಳೊಡನೆ ವಿಹರಿಸಿದುದೂ, ರಾಮಾವತಾರದಲ್ಲಿ ಕಪಿಗಳೊಡನೆ ಆಟ ವಾಡುತಿದ್ದುದೂ, ನಿನ್ನ ಸೌಲಭ್ಯ ಸೌಶೀಲ್ಯ ವಾತ್ಸಲ್ಯಾದಿಗಳನ್ನು ಲೋ ಕಕ್ಕೆ ಪ್ರಕಾಶಗೊಳಿಸಿರುವುದು. ಹೀಗೆ ಸರೈಸುಲಭನಾಗಿಯೂ, ಸರೋ ಶೂರನಾಗಿಯೂ, ಸಾರಪ್ರದನಾಗಿಯೂ ಇರುವ ನಿನ್ನನ್ನು ಕೃತಜ್ಞತಾ ಬುದ್ದಿಯುಳ್ಳ ಯಾವನು ತಾನೇ ಮರೆಯುವನು? ನಿನ್ನಿಂದಾಗುವ ಉಪ ಕಾರವನ್ನು ತಿಳಿದವನು ಯಾವನು ತಾನೇ ನಿನ್ನನ್ನು ಬಿಟ್ಟು ಇತರ ದೈವವ ನ್ನು ಭಜಿಸುವನು? ಪರಮಾತ್ಮಸ್ಮರಣವನ್ನು ತಪ್ಪಿಸತಕ್ಕ, ಐಶ್ವಯ್ಯಕ್ಕೂ ಅವನು ಅಪೇಕ್ಷಿಸಲಾರನು. ಅಥವಾ ನಿನ್ನ ಪಾದಾಶ್ರಿತರಿಗೆ ಅಪೇಕ್ಷೆಯಂ ಟಾದಪಕ್ಷದಲ್ಲಿ ಯಾವ ಕೋರಿಕೆಯು ತಾನೇ ದುರ್ಲಭವು? !ಆದರೆ ನಿನ್ನ ಸೇವಾನಿರತರು, ಬೇರೆ ಯಾವ ಪುರುಷಾರವನ್ನೂ ಮನಸ್ಸಿನಿಂದಲೂ