ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ಶ್ರೀಮದ್ಭಾಗವತರ [ಅಧ್ಯಾ, ೩೧ ಪ್ರದ್ಯುಮ್ಮಾದಿಗಳ ಪತ್ನಿ ಯರೂ, ತಮ್ಮ ತಮ್ಮ ಪತಿದೇಹವನ್ನಾಲಿಂಗಿಸಿ ಅಗ್ನಿ ಪ್ರವೇಶಮಾಡಿದರು. ಕೃಷ್ಣಪತ್ನಿ ಯರಾದ ರುಕ್ಕಿಣಿ ಮೊದಲಾದವ ರೆಲ್ಲರೂ, ತಮ್ಮ ಪತಿಯಾದ ಆ ಭಗವಂತನನ್ನೇ ಧ್ಯಾನಿಸುತ್ತ ಅಗ್ನಿ ಪ್ರವೇಶ ಮಾಡಿದರು. ಅರ್ಜುನನೂ ತನಗೆ ಪರಮಪ್ರಿಯನಾದ ಕೃಷ್ಣನ ವಿಯೋಗ ವನ್ನು ಸಹಿಸಲಾರದೆ ದುಃಖದಿಂದ ಕೊರಗುತ್ತಿದ್ದು, ಕೊನೆಗೆ ಆತ್ರೀಕೃಷ್ಣನ ಗುಣಸ್ಕರಣದಿಂದಲೂ, ತನ್ನ ಹಿತೈಷಿಗಳು ಹೇಳಿದ ಸಮಾಧಾನವಾಕ್ಯಗ ಳಿಂದಲೂ, ಪ್ರಯತ್ನ ಪೂರೈಕವಾಗಿ ತನ್ನ ಮನಸ್ಸನ್ನು ತಾನೇ ಸಮಾಧಾ ನಕ್ಕೆ ತಂದುಕೊಂಡನು. ಆ ಮೇಲೆ ಅರ್ಜುನನು, ಸಂತಾನವಿಲ್ಲದೆ ಮೃತಿ ಹೊಂದಿದ ಆ ಯಾದವರೆಲ್ಲರಿಗೂ ತಾನೇ ಮುಂದಾಗಿನಿಂತು ಅಪರಕ್ರಿಯ ಗಳನ್ನು ಮಾಡಿಸಿದನು. ಅತ್ತಲಾಗಿ ಶ್ರೀಕೃಷ್ಣನು ಈ ಲೋಕವನ್ನು ಬಿಟ್ಟು, ನಿಜಲೋಕಕ್ಕೆ ಹೋದೊಡನೆ, ಇತ್ತಲಾಗಿ ಸಮುದ್ರವು ಉಕ್ಕಿ ಬಂದು, ಶ್ರೀಕೃಷ್ಣನು ವಾಸಮಾಡುತ್ತಿದ್ದ ಅರಮನೆಯೊಂದನ್ನು ಬಿಟ್ಟು ದ್ವಾರಕಾನಗರವೆಲ್ಲವನ್ನೂ ಕೊಚ್ಚಿಸಿ ಬಿಟ್ಟಿತು. ಸ್ಮರಣಮಾತ್ರದಿಂದಲೇ ಅಶುಭಗಳೆಲ್ಲವನ್ನೂ ನೀಗಿಸತಕ್ಕ ಸಾಕ್ಷಾದ್ಭಗವಂತನು, ಎಲ್ಲಿ ನಿತ್ಯನಿವಾಸ ಮಾಡುತಿದ್ದನೋ, ಆ ಭಗವಂತನ ಸಾನ್ನಿಧ್ಯದಿಂದ ಯಾವುದು ಸಮಸ್ತ ಮಂಗಳಗಳಿಗೂ ಮಂಗಳವೆನಿಸಿಕೊಂಡಿದ್ದಿತೋ, ಅಂತಹ ಭಗವನ್ಮಂದಿರ ವನ್ನು ಸಮುದ್ರವು ತಾನೇ ಏನು ಮಾಡಬಲ್ಲುದು ? ಆಮೇಲೆ ಅರ್ಜುನನು, ಅಲ್ಲಿ ಮೃತಶೇಷರಾಗಿದ್ದ ಬಾಲವೃದ್ಧರೆಲ್ಲರನ್ನೂ ತನ್ನೊಡನೆ ಇಂದ್ರ ಪ್ರಸಪುರಿಗೆ ಕರೆತಂದು, ಅಲ್ಲಿ ದೈವಾನುಗ್ರಹದಿಂದ ಬದುಕಿದ್ದ ವಜ್ರ ನೆಂಬ ಯಾದವನಿಗೆ, ಯಾದವರಾಜ್ಯದಲ್ಲಿ ಪಟ್ಟಾಭಿಷೇಕವನ್ನು ನಡೆಸಿದನು. ಓ ಪರೀಕ್ಷಿದ್ರಾಜಾ ! ನಿನ್ನ ತಾತಂದಿರಾದ ಧರಜಾದಿಗಳೆಲ್ಲರೂ, ಅರ್ಜು ನವಮೂಲಕವಾಗಿ, ತಮ್ಮ ಬಂಧುಗಳಾದ ಯಾದವರೆಲ್ಲರೂ ಮೃತಿಹೊಂ ದಿದುದನ್ನು ಕೇಳಿ ದುಃಖಿತರಾಗಿ, ನಿನ್ನೊಬ್ಬನನ್ನು ವಂಶೋದ್ಧಾರಕ್ಕಾಗಿ ನಿಲ್ಲಿಸಿ, ಎಲ್ಲರೂ ಒಟ್ಟಾಗಿ ಮಹಾಪ್ರಸ್ಥಾನಕ್ಕೆ ಹೊರಟರು. ಓ ರಾಜೇಂದ್ರಾ! ಹೀಗೆ ದೇವದೇವನಾದ ಶ್ರೀಕೃಷ್ಣನ ಜನ್ಮಕರಾದಿಗಳನ್ನು ಯಾವನು ಶ್ರದ್ಧೆಯಿಂದ ಕೀರ್ತಿಸುವನೋ, ಅವನು ಸತ್ವಪಾಪಗಳಿಂದ ವಿಮುಕ್ತ