ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨೮.] ಏಕಾದತಕ್ಕಂಥವು. ೨೬೪ ಅನರವೇನು ?” ಎಂದರೆ, ಅನೇಕಷಯಗಳಲ್ಲಿ ಇಂತಹ ತಪ್ಪತಿಳಿವಳಿ ಕೆಯೇ ಅನಕ್ಕೆ ಕಾರಣವಾಗುವುದು. ಹೇಗೆಂದರೆ; ಒಬ್ಬ ಮನುಷ್ಯನು ದೊಡ್ಡ ದಾಗಿ ಕಾಣಿಸುವ ತನ್ನ ನೆರಳನ್ನು ನೋಡಿ, ಅದೊಂದು ಭೂತವೆಂದು ಭವಿಸಿದಾಗ, ಅದೇ ಭಯಕಾರಣವಾಗುವುದು. ನಿಜಸ್ಥಿತಿಯನ್ನು ತಿಳಿದವನಿಗೆ ಆ ಭಯವಿಲ್ಲವಲ್ಲವೆ ? ಹಾಗೆಯೇ ತನ್ನ ಪ್ರತಿಧ್ವನಿಯನ್ನು ಕೇಳಿ, ಪಕ್ವತಗುಹೆಗಳಲ್ಲಿರುವ ಕ್ರೂರಮೃಗಗಳ ಧ್ವನಿಯೆಂದು ಭ್ರಮಿಸಿದ ವನಿಗೆ, ಭಯದಿಂದ ಮೈ ನಡುಗುವುದು, ಪ್ರತಿಧ್ವನಿಯೆಂದೇ ತಿಳಿದವನಿಗೆ ಆ ಭಯವಿರದು. ಹಾಗೆಯೇ ಸ್ವಚ್ಚವನ್ನು ನಿಜವೆಂದು ಭ್ರಮಿಸಿದವನಿಗೆ ಅದ ರಸುಖದುಃಖಗಳೂ ತೋರಿಬರುವುವು.ಅದು ಸ್ವಲ್ಪ ವೆಂದು ತಿಳಿದಮೇಲೆ ಮನ ಸ್ಸು ಶಾಂತವಾಗುವುದು. ಇದರಂತೆಯೇ ದೇಹಾದಿಗಳಲ್ಲಿ ಆತ್ಮಬುದ್ದಿಯೆ ಪ್ರಳಯಾಂತವಾಗಿ ಸಂಸಾರಭಯವನ್ನುಂಟುಮಾಡುವುದು. ಹೀಗೆ ದೇಹಗತ ವಾದ ಭೇದಗಳನ್ನು ಆತ್ಮನಲ್ಲಿ ಆರೋಪಿಸದೆ, ಎಲ್ಲಾ ಜೀವಾತ್ಮವೂ ಒಂದೇ ಎಂದು ತಿಳಿದವನು, ಬೇರೆಯವರ ವಿಷಯದಲ್ಲಿ ಗುಣದೋಷಗಳನ್ನೆಣಿಸ ಲಾರನು. ಇದಲ್ಲದೆ, ದೇಹಕ್ಕಾದರೂ, ಆ ಭೇದವನ್ನೆಣಿಸುವುದು ಯುಕ್ತ ಎಲ್ಲ ! ಏಕೆಂದರೆ, ಜಗತ್ತೆಲ್ಲವೂ ಆ ಪರಮಪುರುಷನೊಬ್ಬನ ಸ್ವರೂಪವೇ ಆಗಿರುವುದು. ಸೃಷ್ಟಿಸತಕ್ಕವನೂ ಅವನೇ ! ಸೃಷ್ಟಿಸಲ್ಪಡತಕ್ಕವನೂ ಅವನೇ ! ರಕ್ಷಿಸತಕ್ಕವನೂ, ರಕ್ಷಿಸಲ್ಪಡತಕ್ಕವನೂ ಆತನೇ ! ಲಯಕಾಲ ದಲ್ಲಿ ಇದನ್ನು ಉಪಸಂಹರಿಸತಕ್ಕವನೂ, ಉಪಸಂಹರಿಸಲ್ಪಡತಕ್ಕವನೂ ಆತನೇ ! ಎಂದರೆ, ಸೃಷ್ಟಿಗೆ ಮೊದಲು ಸೂಕ್ಷಚಿದಚಿದ್ವಿಶಿಷ್ಯನಾಗಿದ್ದ ಪರಮಪುರುಷನು, ಆ ತನ್ನ ಶರೀರದಿಂದಲೇ ಈ ಜಗತ್ತನ್ನು ವಿಸ್ತರಿಸಿ, ಅವುಗಳೊಳಗೆ 'ತಾನೂ ಅಂತರಾಮಿಯಾಗಿದ್ದು ಪೋಷಿಸುತ್ತ, ಕೊನೆಗೆ ಅವೆಲ್ಲವನ್ನೂ ತನ್ನಲ್ಲಿಯೇ ಉಪಸಂಹರಿಸಿಕೊಳ್ಳುವನು. ಹೀಗೆ ಸಮಸ್ತವೂ ಬ್ರಹ್ಮಾತ್ಮಕವೇ ಆಗಿರುವುದರಿಂದ, ತಾನು ಬೇರೆ, ಮತ್ತೊಬ್ಬನು ಬೇರೆ, ಚಿತ್ತು ಬೇಳೆ, ಅಕಿತ್ತು ಬೇರೆ, ಎಂಬ ಭೇದಬುದ್ಧಿಗೆ ಅವಕಾಶವಿಲ್ಲಿ : ಹೀಗೆ ಎಲ್ಲವೂ ಒಂದೇ ಆಗಿರುವಾಗ, ಯಾರು ಯಾರನ್ನು ನಿಂದಿಸಬಹುದು ? ಯಾರು ಯಾರನ್ನು ಸ್ತುತಿಸಬಹುದು ? ಯಾರು ಯಾರನ್ನು