ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪ ಶ್ರೀಮದ್ಭಾಗವತವು [ಅಧ್ಯಾ, ೧೪, ಸುಖವಿಲ್ಲ ! ಎಂತಹ ವಿಷಯಸುಖವೂ ಅದರ ಮುಂದೆ ಬರಲಾರದು. ಬೇರೊಂದರಲ್ಲಿಯೂ ಆಸೆಯನ್ನಿಡದೆ, ಜಿತೇಂದ್ರಿಯನಾಗಿ, ಸಮಸ್ತಭೂತ ಗಳಲ್ಲಿಯೂ ನನ್ನನ್ನೇ ಭಾವಿಸುವ ಸಮಬುದ್ಧಿಯುಳ್ಳವನಾಗಿ, ಮದೇಕಧ್ಯಾ ನದಿಂದ ಸಂತುಷ್ಟನಾದವನಿಗೆ, ಸತ್ವ ದೇಶ, ಸತ್ವ ಕಾಲ, ಸಲ್ಮಾವಸ್ಯೆಗಳೂ ಸುಖಮಯವಾಗಿಯೇ ತೋರುವುವು. ಉದಾ : ಹೆಚ್ಚು ಮಾತಿನಿಂದೇನು ? ನನ್ನಲ್ಲಿ ನಟ್ಟ ಮನಸ್ಸುಳ್ಳವನಿಗೆ ಬ್ರಹ್ಮಪಟ್ಟವಾಗಲಿ, ಮಹೇಂದ್ರಪದವಿ ಯಾಗಲಿ, ಸಮಸ್ತಭೂಮಂಡಲಾಧಿಪತ್ಯವಾಗಲಿ, ಪಾತಾಳಾಧಿಪತ್ಯವಾ ಗಲಿ, ಅಣಿಮಾದಿಯೋಗಸಿದ್ಧಿಗಳಾಗಲಿ, ಪುನರ್ಜನ್ಮವಿಲ್ಲದ ಕೈವಲ್ಯವಾಗಲಿ, ಎಷ್ಟು ಮಾತ್ರವೂ ರುಚಿಸಲಾರದೆಂದು ತಿಳಿ! ಅವನು ನನ್ನನ್ನು ಬಿಟ್ಟು ಬೇ ರೊಂದನ್ನೂ ಅಶಿಸಲಾರನು. ಅವನಿಗೆ ನನ್ನಲ್ಲಿ ಹೇಗೋ,ನನಗೂ ಅಂತವನಲ್ಲಿ ಅಸಾಧಾರಣಪ್ರೇಮವುಂಟು. ನನಗೆ ಈ ನನ್ನ ದೇಹವಾಗಲಿ, ನನ್ನ ಪತ್ರ ನಾದ ಚತುರು ಖನಾಗಲಿ, ಪೌತ್ರನಾದ ರುದ್ರನಾಗಲಿ, ಒಡಹುಟ್ಟಿದ ಬಲರಾಮನಾಗಲಿ, ಕೈಹಿಡಿದ ರುಕ್ಕಿಣಿಯಾಗಲಿ, ಆ ನನ್ನ ಭಕ್ತನಂತೆ ಪ್ರೀತಿ ಪಾತ್ರರಾಗಲಾರರು. ನನ್ನ ಕ್ಲಿಯೇ ಸತ್ಯಭಾರವನ್ನಿಟ್ಟು, ಬೇರೊಂದನ್ನೂ ಅಪೇಕ್ಷಿಸದವನಾಗಿಯೂ, ಶುಚಿಯಾಗಿಯೂ, ಶಾಂತನಾಗಿಯೂ, ಸತ್ರ ನನ್ನ ಭಾವವನ್ನಿಡುವುದರಿಂದ ಯಾರಲ್ಲಿಯೂ ವೈರಬುದ್ಧಿಯಿಲ್ಲದೆ ಸಮದ ರ್ಶನನಾಗಿಯೂ ಇರುವ ಭಕ್ತನನ್ನು , ನಾನು ಎಡೆಬಿಡದೆ ಹಿಂಬಾಲಿಸುವೆನು. ಸದಾಕಾಲದಲ್ಲಿಯೂ ಅವನನ್ನು ನನ್ನ ಪಾದರೇಣುಗಳಿಂದ ಪವಿತ್ರನನ್ನಾಗಿ ಮಾಡುತ್ತಿರುವೆನು. ನನ್ನಲ್ಲಿರುವ ಅನುರಾಗದಿಂದ ಬೇರೆ ಯಾವುದನ್ನೂ ಅಪೇಕ್ಷಿಸದೆ, ಶಾಂತರಾಗಿಯೂ, ಸತ್ವಭೂತದಯಾಪರರಾಗಿಯೂ ಇರುವ ಮಹಾತ್ಮರ ಬುದ್ಧಿಯನ್ನು , ಕಾಮವೆಂಬುದು ಎಷ್ಟು ಮಾತ್ರವೂ ಕದಲಿಸಲಾ ರದು. ಅಂತವರು ಯಾವಾಗಲೂ ನನ್ನನ್ನು ಅನುಭವಿಸುವುದರಿಂದುಂಟಾದ ಪರಮಾನಂದದಲ್ಲಿ ಮಗ್ನರಾಗಿ, ಮೋಕ್ಷಸುಖಕ್ಕೂ ಆಸೆಪಡಲಾರರು. ಭಕ್ತಿ ಯೋಗವನ್ನು ಮೊದಮೊದಲು ಆರಂಭಿಸಿದವನು, ಇಂದ್ರಿಯಗಳನ್ನು ಜ ಯಿಸಲಾರದವನಾಗಿದ್ದು, ಶಬ್ದಾದಿವಿಷಯಗಳು ನಾನಾಮುಖವಾಗಿ ಅವನ ಮನಸ್ಸನ್ನು ಕದಲಿಸುತ್ತಿದ್ದರೂ, ದಿನದಿನಕ್ಕೆ ಅ ಭಕ್ತಿಯು ಪರಿ