ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೮೯ ಅಧ್ಯಾ. ೩.] ದ್ವಾದಶಸ್ಕಂಧವು ನುಗ್ರಹಬಲದಿಂದ ಸಮುದ್ರಾಂತವಾದ ಸಮಸ್ತಭೂಮಿಯನ್ನೂ ಸ್ವಾಧೀನ ಪಡಿಸಿಕೊಂಡಮೇಲೆಯೂ ಅವರಿಗೆ ಆಸೆಯು ತೀರದು. ಸಮುದ್ರವನ್ನು ದಾಟಿ ದ್ವೀಪಾಂತರಗಳನ್ನು ಜಯಿಸುವುದಕ್ಕೆ ಆಶೆಪಡುವರು. ಇವರು ಎಷ್ಟು, ರಾಜ್ಯಗಳನ್ನು ಜಯಿಸಿದರೇನು ? ತಮ್ಮನ್ನು ತಾವು ಜಯಿಸಲಾರದೆ ಹೋದವರಲ್ಲವೆ ? ಏಕೆಂದರೆ, ಆತ್ಮಜಯವೇ ಮನುಷ್ಯನಿಗೆ ಜಯವೆನಿಸು ವುದು. ಆತ್ಮಜಯಕ್ಕೆ ಮುಕ್ತಿಯೇ ಪ್ರಧಾನಫಲವು. ಆ ಫಲವನ್ನು ಸಾಧಿಸ ದಿದ ಮೇಲೆ ಅವರ ಇಂದ್ರಿಯಜಯವೂ ನಿಷ್ಪಲವೇ ಆಗುವುದಲ್ಲವೆ? ಲೋಕಪ್ರಸಿದ್ಧರಾದ ಮನುಗಳೂ, ಅವರ ಮಕ್ಕಳೂ, ಏಕವೃತ್ರಾಧಿಪತ್ಯ ಹಿಂದ ನನ್ನನ್ನು ಅನುಭವಿಸುತ್ತಿದ್ದರೂ, ಕೊನೆಗೆ ನಾನಿದ್ದಲ್ಲಿಯೇ ನನ್ನ ನ್ನು ಬಿಟ್ಟು, ತಾವು ಬಂದಹಾಗೆ ಹೊರಟುಹೋದರಲ್ಲವೆ ? ಅಂತಹ ನನ್ನನ್ನು ಯುದ್ಧದಲ್ಲಿ ಸಾಧಿಸಬೇಕೆಂದು ಆತುರಪಡುವ ರಾಜರನ್ನು ಬುದ್ಧಿಹೀನರೆಂ ದು ಹೇಳುವುದರಲ್ಲಿ ಸಂದೇಹವೇನಿದೆ ? ರಾಜ್ಯದಲ್ಲಿ ನನ್ನದು ತನ್ನ ” ದೆಂಬ ಮಮತೆಯುಳ್ಳ ಮಢಜನರಿಗೆ, ನನ್ನ ಮೂಲಕವಾಗಿಯೇ ತಂದೆಮಕ್ಕ ಇಲ್ಲಿಯೂ, ಒಡಹುಟ್ಟಿದ ಸಹೋದರರಲ್ಲಿಯೂ ಆನ್ನೋನ್ಯವೈರವು ಹುಟ್ಟು ವುದು. ನನ್ನ ನಿಮಿತ್ತವಾಗಿಯೆ ಮೂಢಜನರಲ್ಲಿ ಒಬ್ಬರಿಗೊಬ್ಬರಿಗೆ ಸ್ಪರ್ಧೆ ಹುಟ್ಟಿ ಈ ಭೂಮಿಯು ನಿನ್ನದಲ್ಲ ' ನನ್ನ ದು ! ನಾನೇ ಇದಕ್ಕೆ ಭಾಗಿಯೆ ಹೊರತು ನೀನಲ್ಲ'"ಎಂಬೀ ವಾದಗಳು ಹೊರಟು, ಒಬ್ಬರನ್ನೊಬ್ಬರು ಕಲ್ಲು ವರು. ತಾವೂ ಪ್ರಾಣವನ್ನು ಬಿಡುವರು. ಪೃಥ, ಪುರೂರವಸ್ಸು, ಗಾಧಿ, ನಹುಷ, ಭತ, ಕಾರ್ತವೀರಾರ್ಜುನ, ಮಾಂಧಾತೃ, ಸಗರ, * ರಾಮ, ಖಟ್ವಾಂಗ, ದುಂಧುಮಾರ, ರಘು, ತೃಣಬಿಂದು, ಯಯಾತಿ, ಶಂತನು, ಗಯ, ಭಗೀರಥ, ಕುವಲಯಾಶ್ವ, ಕಕುತ್ಯ, ನೈಷಧ, ಇಗೆ, ಮುಂತಾದ ರಾಜರೂ, ಹಿರಣ್ಯಕಶಿಪ, ವೃತ್ರ, ರಾವಣ, ನಮುಚಿ, ಶಂಬರ, ನರಕ, ಹಿರ ಣ್ಯಾಕ್ಷ, ತಾರಕನೇ ಮೊದಲಾದ ದೈತ್ಯರೂ, ಇನ್ನೂ ಎಷ್ಟೋ ಮಂದಿ ಕ್ಷತ್ರಿಯರೂ, ದಾನವರೂ, ರಾಜ್ಯವನ್ನಾಳಿದರು. ಪ್ರಾಯಕವಾಗಿ ಇವ

  • ಈತನು ದಶರಥಶತ್ರನಾದ ರಾಮನಲ್ಲ! ರಾಮನೆಂಬ ಹೆಸರುಳ್ಳ ಬೇರೊಬ್ಬ ರಾಜನೆಂದು ಪೀರರಾಘನೀಯ ವ್ಯಾಖ್ಯಾನವ.