ಪುಟ:ಕಥಾಸಂಗ್ರಹ ಸಂಪುಟ ೨.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

158 ಕಥಾಸಂಗ್ರಹ-೪ ನೆಯ ಭಾಗ ಇನ್ನೂರೇಳು ಆಕ್ರೋಹಿಣೀ ಸಂಖ್ಯಾತವಾದ ರಾಕ್ಷ ಸಚತುರ್ಬಲವು ಸಕಲಾಯುಧಗ ಇನ್ನೂ ಧರಿಸಿಕೊಂಡು ಇರುವೆ ನೊಣಗಳಾದರೂ ಒಳಗೆ ಪ್ರವೇಶಿಸದಂತೆ ಬಹು ಜಾಗ ರೂಕತೆಯಿಂದಿದ್ದಿತು. ಆ ಭೀಕರನಿಶಾಚರ ಬಲದೊಳಗೆ ಪ್ರವೇಶಿಸುವುದು ಬ್ರಹೈ೦ ದಾದಿಗಳಿಗೂ ಅಸಾಧ್ಯವಾಗಿದ್ದಿತು. ಹೀಗಿರುವಲ್ಲಿ ಹಗೆಗಳಾದವರು ಆ ಯಾಗಶಾಲೆ ಯನ್ನು ಪ್ರವೇಶಿಸುವುದು ಹೇಗೆ ? ಆದರೂ ನಿಶಾಚರಕುಲಾರಣ್ಯ ದವಾನಪ್ರಾಯರಾದ ಆಂಜನೇಯಾದಿ ಕಪಿಸುಭಟರು ಸ್ವಲ್ಪವಾದರೂ ಅ೦ಜದೆ ಗಿರಿತರುಗಳನ್ನು ತೆಗೆದು ಕೊಂಡು ಬಂದು ಚತುರ್ದಿಕ್ಕುಗಳಲ್ಲಿಯೂ ಕವಿದು ಒಳಹೊಕ್ಕು ಎದುರಾದವರನ್ನು ಹೊಯ್ತು ತಿವಿದು ಕುಟ್ಟಿ ಕಚ್ಚಿ ಕವರಿ ಪರಚಿ ಇರಿದು ಒದೆದು ತಲೆಕೆಳಗಾಗುವಂತೆ ಬಿಸುಟು ರಾಕ್ಷಸರ ಚತುರ್ವಿಧಬಲವನ್ನು ಪುಡಿಪುಡಿಮಾಡಿದರು. ಆಹಾ ! ವಾನರಚ ಕೇಶ್ವರನಾದ ಸುಗ್ರೀವನ ಆಜ್ಞಾ ಮಂತ್ರಶಕ್ತಿಯ ಅಮೋಘತೆಯನ್ನು ಬಣ್ಣಿಸುವುದಕ್ಕೆ ಯಾರಿಗೆ ಸಾಧ್ಯವು ? ಬಹುಮಾನವಾಗಿ ಅಪಾರದ್ರವ್ಯವನ್ನೂ ವಿವಿಧವಾದ ದಿವ್ಯಾ ಬರಗಳನ್ನೂ ಅಮೂಲ್ಯಾಭರಣಗಳನ್ನೂ ತಿಂಗಳು ಗಟ್ಟಳೆಯಾಗಿ ಸಂಬಳಗಳನ್ನೂ ಕೊಟ್ಟು ಪ್ರೀತಿಸುತ್ತ ಆದರಿಸಿದಾಗ್ಯೂ ಈ ವಾನರವೀರರಂತೆ ಕವಲಿಲ್ಲದ ಮನ ಸ್ಸುಳ್ಳವರಾಗಿ ಸ್ವಾಮಿ ಕಾರ್ಯವನ್ನು ನಿರ್ವಹಿಸುವ ಸತ್ಯಸಂಧರು ಲೋಕದಲ್ಲಿ ದುರ್ಲ ಭರು. ಇಂಥ ಮರ್ಕಟವೀರಬಲವು ಕ್ಷಣಕಾಲದಲ್ಲಿ ಎದುರಾದ ರಾಕ್ಷಸಬಲವನ್ನೆಲ್ಲಾ ಬರಿಗೈದು ಇಂದ್ರಜಿತ್ತಿನ ಯಜ್ಞ ಮಂಟಪದ ಬಳಿಗೆ ಹೋಗಿ ನೋಡಲು ಆಗ ಇಂದ್ರ ಜೆತ್ತು ವೀರಬಾಹುವೇ ಮೊದಲಾದ ತನ್ನ ಶೂರನಿಶಾಚರಪರಿವಾರದಿಂದ ಕೂಡಿ ಯಜ್ಞ ದೀಕ್ಷೆ ಯನ್ನು ಹೊಂದಿ ತದುಚಿತಕರ್ಮಗಳನ್ನು ನಡೆಸುತ್ತ ತದೇಕಚಿತ್ತನಾಗಿದ್ದನು. ಆ ಯಜ್ಞರಕ್ಷಣಾರ್ಥವಾಗಿ ಅಲ್ಲಿಟ್ಟಿದ್ದ ರಾಕ್ಷ ಸಚ ತುರ್ಬಲವನ್ನು ಎಣಿಸಬಲ್ಲವರಾರು? ಅಷ್ಟು ಬಲಗಳೂ ಒಮ್ಮೊಗವಾಗಿ ಏಕಕಾಲದಲ್ಲಿ ಹೊರಟುಬಂದು ಲಕ್ಷ್ಮಣಾದಿಗಳನ್ನು ಮುತ್ತಲು ಆಗ ಆಂಜನೇಯಾದಿ ವಾನರವಾಹಿನೀಪತಿಗಳು ಸನ್ನದ್ಧರಾಗಿ ನಿಂತು ಸಂಹಾರಕ್ಕು ಸಕ್ರಮಿಸಿ ಆ ದೈತ್ಯರನ್ನು ಎಷ್ಟು ವಿಧದಿಂದ ಕೊಂದು ಕೆಡಹುತ್ತಿದ್ದರೂ ಮತ್ತು ಮತ್ತು ಬಂದು ನೀಲಮೇಘಗಳಂತೆ ಮುತ್ತು ಕಾದುತ್ತ ಮುಂದಕ್ಕೆ ದಾರಿ ಗೊಡದಿರಲು ಆಗ ಧೀರನಾದ ವಿಭೀಷಣನು ನೋಡಿ ಇವರೊಡನೆ ಹೀಗೆ ಜಗಳವಾ ಡುತ್ತ ನಿಂತರೆ ಸಾವಕಾಶವಾಗುವುದು. ಇನ್ನು ಸೂರ್ಯೋದಯಕ್ಕೆ ಒಂದು ಯಾವ ಮಾತ್ರ ಇದೆ. ಅಷ್ಟರಲ್ಲಿ ಇವನ ಯಜ್ಞವು ನೆರವೇರಿಹೋಗುವುದು ಎಂದು ಯೋಚಿಸಿ ತನ್ನ ಅಪ್ರತಿಮ ಗದಾಯುಧವನ್ನು ತೆಗೆದು ಕೊಂಡು ಲಕ್ಷಣನನ್ನು ನೋಡಿ ನಾನು ನಿನಗೆ ದಾರಿಯನ್ನು ಮಾಡಿ ಕೊಡುತ್ತ ಮುಂದೆ ಹೋಗುತ್ತೇನೆ. ನೀನು ನನ್ನ ಬೆಂಬಿ ಡದೆ ಬರುವವನಾಗು. ಆ೦ಗದಾದಿಗಳು ಈ ರಕ್ಕಸಬಲದೊಡನೆ ಕಾದುತ್ತಿರಲಿ ಎಂದು ಹೇಳಿ ಎದುರಾದ ರಾಕ ಸವೀರರನ್ನು ತನ್ನ ಗದಾದಂಡದಿಂದ ಮುರಿಬಡಿದು ಹೊರ ಬೀಳಿಸುತ್ತೆ ಯಮನ ನಗರಿಗೆ ಕಳುಹಿಸುತ್ತ ಹೋಗುತ್ತಿರಲು ಆಗ ಅಮಿತವಿಕ್ರಮ ನಾದ ಲಕ್ಷಣನು ಬೆಂಬಲವನ್ನು ಅಪೇಕ್ಷಿಸದೆ ಹೆದೆಯಲ್ಲಿ ಅಸಂಖ್ಯಾತಬಾಣಗಳನ್ನು ಸಂಧಾನಿಸುತ್ತ ಆ ಕರ್ಣಾ೦ತವಾಗಿ ಎಳೆದು ಪ್ರಯೋಗಿಸುತ್ತ ಅಪರಿಮಿತ 'ರಾಕ್ಷಸರ.