ಪುಟ:ಕಥಾಸಂಗ್ರಹ ಸಂಪುಟ ೨.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 189 ಅತ್ತ ಹಾಗಿರಲು, ಇತ್ತ ಜಾನಕಿಯು ಭಯ೭ ಯುಕ್ತಳಾಗಿ ನಿಜಪತಿ, ಯಾದ ಶ್ರೀರಾಮನಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ ಧಗದ್ದ ಗಾಯಮಾನ ವಾಗಿ ಉರಿಯುತ್ತಿರುವ ಚಿತಾಗ್ನಿಯ ಬಳಿಗೆ ಬಂದು ಮೂರುಸಾರಿ ಪ್ರದಕ್ಷಿಣವನ್ನು ಮಾಡಿ ನಮಸ್ಕರಿಸಿ ಕೈಮುಗಿದು ನಿಂತು ಕೊಂಡು ನಾನು ಮನೋವಾಕ್ಯಾಯ ಕರ್ಮಗಳಿಂದಲೂ ಶ್ರೀರಾಮನನ್ನಲ್ಲದೆ ಪರಪುರುಷನನ್ನು ಅಪೇಕ್ಷಿಸಿದವಳಾಗಿದ್ದರೆ ಈ ಅಗ್ನಿ ದೇವತೆಯು ನನ್ನನ್ನು ಸುಟ್ಟು ಬೂದಿಮಾಡಿ ಬಿಡಲಿ ! ಇಲ್ಲದಿದ್ದರೆ ಕಾಪಾಡಲಿ ಎಂದು ಮನಸ್ಸಿನಲ್ಲಿ ರಾಮನಡಿದಾವರೆಗಳನ್ನು ಧ್ಯಾನಿಸುತ್ತ ಬೆಂಕಿಯಲ್ಲಿ ಬಿದ್ದಳು. ಆಗ ಸಕಲ ಕಪಿಸೇನೆಗಳೂ ವಿಮಾನಸ್ಥರಾದ ದೇವತೆಗಳೂ ಖೋ ಎಂದು ಕೂಗಿ ರೋದಿಸಿ ದರು. ತರುವಾಯ ಅಗ್ನಿ ದೇವನು ನಿಜರೂಪವನ್ನು ಧರಿಸಿ ಒಂದು ಸೀತೆಯು ಮುಡಿದ ಹೂವುಗಳು ಬಾಡದಂತೆಯ ಉಟ್ಟು ತೊಟ್ಟಿದ್ದ ದಿವ್ಯ ವಸ್ತ್ರಾಭರಣಗಳ ಕಳೆಯು ಕುಂದದಂತೆಯ ಎಚ್ಚರಿಕೆಯಿಂದ ರಕ್ಷಿಸಿ ಸರ್ವಾಲಂಕಾರಭೂಷಿತೆಯಾಗಿ ಸೀತೆಯನ್ನು ಎತ್ತಿಕೊಂಡು ಚಿತಾಗ್ನಿ ಮಧ್ಯದಿಂದ ಹೊರಟು ಶ್ರೀರಾಮನ ಸನ್ನಿಧಿಗೆ ಬಂದು-ಎಲ್ಲೆ ಪರಿಶುದ್ದ ನಾದ ಶ್ರೀರಾಮನೇ ! ನೀನು ಲೋಕದವರಂತೆ ನಿಜವಾಗಿ ಮನುಷ್ಯನೇ ? ದುಷ್ಟನಾದ ರಾವಣನನ್ನು ಕೊಂದು ಲೋಕದಲ್ಲಿ ಧರ್ಮಸಂಸ್ಥಾಪನವನ್ನು ಮಾಡುವು ದಕಾಗಿ ಮನುಷ್ಯಾವತಾರದಿಂದ ಬಂದ ಮಹಾ ವಿಷ್ಣು ವಲ್ಲ ವೇ ? ಈ ಸೀತೆಯು ಸಾ ಮಾನ್ಯ ಸ್ತ್ರೀಯರಂತೆ ಮಾನುಷಿಯೇ ? ಸರ್ವವಿಧದಿಂದಲೂ ನಿನ್ನನ್ನು ಅನುಸರಿಸುವವ ಇಾಗಿ ನರರೂಪವನ್ನು ಧರಿಸಿ ಬಂದ ಸಾಕ್ಷಾ ದೇವಿಯಲ್ಲ ವೇ ? ಸರ್ವಜ್ಞ ನಾದ ನೀನು ಪ್ರಾಕೃತ ಮನುಷ್ಯರಂತೆ ನಟಿಸಬೇಡ, ಪರಿಶುದ್ಧ ಸ್ವಭಾವಳಾದ ಈ ಸೀತೆ ಯನ್ನು ನಿಸ್ಸಂದೇಹಚಿತ್ತದಿಂದ ಪರಿಗ್ರಹಿಸು ಎಂದು ಹೇಳಿ ಆಕೆಯನ್ನು ರಾಮನ ಸನ್ನಿಧಿ ಯಲ್ಲಿ ಬಿಟ್ಟು ತಾನು ತತ್ ಕ್ಷಣದಲ್ಲೇ ಅದೃಶ್ಯನಾದನು. ಅನಂತರದಲ್ಲಿ ಬ್ರಹ್ಮ ರುದ್ರೇ೦ದ್ರರೇ ಮೊದಲಾದ ಸಕಲ ದೇವತೆಗಳು ತಮ್ಮ ತಮ್ಮ ವಿಮಾನಗಳನ್ನೇರಿಕೊಂಡು ರಾಮನ ಬಳಿಗೆ ಬಂದು ಬಹು ಪ್ರಕಾರವಾಗಿ ಶ್ಲಾಘಿಸಿ ಆತನನ್ನು ಕುರಿತು ಎಲೈ ಶ್ರೀರಾಮಚಂದ್ರನೇ ! ಈ ಜಾನಕಿಯ ನೀನೂ ಜಗತ್ತಿ ನಲ್ಲಿ ಪಾಪವನ್ನು ವಿನಾಶಮಾಡುವುದಕ್ಕಾಗಿಯ ಧರ್ಮವನ್ನು ನೆಲೆಗೊಳಿಸುವುದಕ್ಕಾ ಗಿಯ ಅವತರಿಸಿದವರಲ್ಲವೇ ? ನೀನು ಮಹಾ ವಿಷ್ಣುವಾಗಿ ಈ ಮಹಾ ಲಕ್ಷ್ಮಿಯಾ ಗಿರುವ ಸೀತೆಯಲ್ಲಿ ಈ ರೀತಿಯಾಗಿ ಸಂದೇಹಪಟ್ಟುದರಿಂದ ಜಗಜ್ಜನರು ತಾವೂ ಲೋಕಾಪವಾದಕ್ಕೆ ಅಂಜೆ ನಡೆಯಬೇಕೆಂದು ತಿಳಿದಂತಾಯಿತು. ಈ ನಿನ್ನ ಸದ್ದು ಣಗ ಳಿಗೂ ನಿನ್ನ ನಿಜಪತ್ನಿ ಯಾದ ಈ ಸೀತೆಯು ನಡಿಸಿದ ಕೆಲಸಕ್ಕೂ ನಾವೆಲ್ಲರೂ ಪೂರ್ಣ ಸಂತುಷ್ಟರಾದೆವು. ನೀನಿ ಸಂದೇಹವನ್ನು ಬಿಟ್ಟು ಪರಿಶುದ್ಧಳಾಗಿರುವ ಸೀತೆಯನ್ನು ಸಂತೋಷದಿಂದ ಸರಿಗ್ರಹಿಸು, ಲೋಕಾನುಗ್ರಹಾರ್ಥವಾಗಿ 'ನೀನೂ ನಿನ್ನ ಪತ್ನಿ ಯ ಮಾಡಿದ ಎರಡು ಕೆಲಸಗಳಿಗೆ ಎರಡು ವರಗಳನ್ನು ಕೊಡುವೆವು, ನಿಸ್ಸಂದೇಹದಿಂದ ಬೇಡಿಕೊ ಎಂದು ಹೇಳಲು ಆಗ ನಿಶ್ಯಂಕಮನಸ್ಕನಾದ ಶ್ರೀ ರಾಮನು ಆ ದೇವತೆಗಳಿ ಗೆಲ್ಲಾ ನಮಸ್ಕರಿಸಿ ಸರ್ವಜ್ಞರಾದ ನೀವೆಲ್ಲರೂ ಈ ಸೀತೆಯು ಪರಿಶುದ್ದಳು ಎಂದು