ಪುಟ:ಕಥಾಸಂಗ್ರಹ ಸಂಪುಟ ೨.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಶುರಾಮಾವತಾರದ ಕಥೆ 263 ಪಾಪಾತ್ಮರ ಹುಟ್ಟನ್ನೇ ಹಾಳುಮಾಡಿ ಈ ಭೂಮಂಡಲವನ್ನೆಲ್ಲಾ ಬ್ರಾಹ್ಮಣರ ಸ್ವಾಧೀ ನಮಾಡುವೆನು ಎಂದು ಹೇಳಿ ಮೃತನಾದ ತಂದೆಗೆ ಮಾಡಬೇಕಾದ ಕರ್ಮಗಳನ್ನೆಲ್ಲಾ ವಿಧಿವತ್ತಾಗಿ ನೆರವೇರಿಸಿ ಕೂಡಲೆ ಪ್ರಳಯ ಕಾಲದ ರುದ್ರನಂತೆ ಮೊರೆದು ಕೊಡಲಿ ಯನ್ನು ತೆಗೆದುಕೊಂಡು ಹೊರಟು ಭೂಲೋಕದಲ್ಲಿರುವ ಕ್ಷತ್ರಿಯ ಜಾತಿಯ ಒಂದು ಗಂಡು ಪಿಳ್ಳೆಯನ್ನಾದರೂ ಬಿಡದೆ ಇಪ್ಪತ್ತೊಂದು ಸಾರಿ ಪುನಃಪುನಃ ಹುಡುಕಿ ಕೊಂಡು ಸುತ್ತಿ ಕೊಡಲಿಯಿಂದ ಕಡಿದು ಆ ಕ್ಷತ್ರಿಯರಕ್ತನದೀಪ್ರವಾಹದಲ್ಲಿ ಮಿಂದು ಆ ರಕ್ತ ಜಲದಿಂದಲೇ ಸತ್ತ ತಂದೆಗೆ ತರ್ಪಣವನ್ನು ಕೊಟ್ಟು ಭೂಮಂಡಲವನ್ನೆಲ್ಲಾ ಕಶ್ಯ ಪರಿಗೆ ದಾನಮಾಡಿ, ದಾನವಾಗಿ ಕೊಟ್ಟ ಮೇಲೆ ಆ ಭೂಮಿಯಲ್ಲಿ ತಾನಿರಬಾರದೆಂದು ಯೋಚಿಸಿ ಪಡುವಣ ಕಡಲ ಬಳಿಗೆ ಬಂದು ಸಮುದ್ರರಾಜನಿಗೆ ಹನ್ನೆರಡು ಗಾವುದರ ಳಷ್ಟು ಹಿಂದಕ್ಕೆ ಹೋಗುವಂತೆ ಹೇಳಲು ಅವನು ಅದರಂತೆ ಬಿಟ್ಟು ಹಿಂದಕ್ಕೆ ಹೋದ ಸ್ಥಳದಲ್ಲಿರುವ ಮಹೇಂದ್ರ ಪರ್ವತದಲ್ಲಿ ತಪಸ್ಸು ಮಾಡಿಕೊಂಡು ನಿರ್ವ್ಯಸನದಿಂದಿದ್ದನು. ಇತ್ತಲಾ ಕಶ್ಯಪಮುನಿಯು ಪರಶುರಾಮನು ತನಗೆ ದಾನವಾಗಿ ಕೊಟ್ಟ ಭೂಮಂಡಲವನ್ನು ಯಾರಿಗೆ ಕೊಡಬೇಕೆಂದು ಯೋಚಿಸಿ ಭೂಮಂಡಲದಲ್ಲಿ ಯಾರಾ ದರೂ ಕ್ಷತ್ರಿಯರಿದ್ದಾರೆ ಎಂದು ಹುಡುಕುತ್ತ ಅಯೋಧ್ಯಾ ಪಟ್ಟಣಕ್ಕೆ ಬಂದು ಅಲ್ಲಿ ಪರಶುರಾಮನ ಸಂಹಾರಕಾಲದಲ್ಲಿದ್ದ ಒಬ್ಬ ಹತ್ತು ವರುಷದ ಗಂಡುಮಗನಿಗೆ ಹೆಂಗ ಸರೆಲ್ಲಾ ಕೂಡಿ ಸ್ತ್ರೀವೇಷವನ್ನು ಹಾಕಿ ಸೀರೆಯನ್ನು ಡಿಸಿ ಪುರುಷರೂಪನ್ನು ಮರಿಸಿಟ್ಟಿ ದ್ದುದರಿಂದ ಭೂಮಂಡಲವನ್ನೆಲ್ಲಾ ಅವನಿಗೆ ಕೊಟ್ಟು ತಾನು ತಪಸ್ಸಿಗೆ ಹೋದನು. ಆ ಸೂರ್ಯವಂಶದಲ್ಲಿ ಮಹಾವಿಷ್ಣುವು ತನ್ನ ಪೂರ್ಣಾ೦ಶದಿಂದ ರಾವಣಸಂಹಾರಾರ್ಥ ವಾಗಿ ರಾಮನಾಮದಿಂದ ಅವತರಿಸಿ ಶಿವಧನುಸ್ಸನ್ನು ಮುರಿದು ಸೀತೆಯನ್ನು ಮದುವೆ ಯಾಗಿ ಬರುವ ದಾರಿಯಲ್ಲಿ ಪರಶುರಾಮನು ಶ್ರೀರಾಮನೊಡನೆ ಯುದ್ದ ಕೈ ನಿಂತು ತನ್ನ ವಿಷ್ಣಂಶವನ್ನು ಅವನಿಗೆ ಒಪ್ಪಿಸಿ ತಾನು ತಪಸ್ಸಿಗೆ ಹೊರಟು ಹೋದನು. ತರುವಾಯ ಚಕ್ರರಾಜನು ಕಾರ್ತವೀರ್ಯಾರ್ಜುನನ ಜನ್ಮವನ್ನು ನೀಗಿ ಅಹಂಕಾರಶೂನ್ಯನಾಗಿ ವೈಕುಂಠವನ್ನು ಹೊಕ್ಕು ಮಹಾವಿಷ್ಣುವಿಗೆ ನಮಸ್ಕಸಿರಿ- ಎಲೈ ಮಹಾತ್ಮನೇ ! ನಾನು ಅಲ್ಪನು, ಮಢನು ಮತ್ತು ದುರಹಂಕಾರಿಯು. ಮಹಾತ್ಮನಾದ ನಿನ್ನ ಪಾದ ಸನ್ನಿಧಾನದಲ್ಲಿ ಕೇವಲ ಅಜ್ಞಾನಿಯಾದ ನಾನು ಮಾಡಿದ ಅಪರಾಧವನ್ನು ಕ ಮಿಸಿ ನನ್ನನ್ನು ಕಾಪಾಡಬೇಕೆಂದು ಬೇಡಿಕೊಂಡುದರಿಂದ ಕರುಣಾಳುವಾದ ವಿಷ್ಣುವು ಹಾಗೆಯೇ ಅವನ ಅಪರಾಧವನ್ನು ಮನ್ನಿಸಿ ಯಥಾಪ್ರಕಾರವಾಗಿ ಆ ಚಕ್ರಾ ಯುಧವನ್ನು ತನ್ನ ಬಲಗೈಯಲ್ಲಿ ಧರಿಸಿಕೊಂಡನು. For the Seventh or Rama Incarnation, see pages 32-209. ರಾಮಾವತಾರದ ಕಥೆ, ಪುಟ ೩೨-೨೦೯ ನೋಡಿರಿ.