ಪುಟ:ಕಥಾಸಂಗ್ರಹ ಸಂಪುಟ ೨.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 105 ಕೂಡಿ ಬಂದಿದ್ದಾನೆಯಂತೆ. ಇದಕ್ಕೆ ನಿಮ್ಮ ನಿಮ್ಮ ಮನೋಗತಾಭಿಪ್ರಾಯಗಳಾ ವುವು ? ಅವುಗಳನ್ನು ಹೇಳಿರಿ ಎಂದು ಕೇಳಿದನು. ಆಗ ತನ್ನ ಕುಮಾರನ ಮಹಾ ವೀರನೂ ಆದ ಇಂದ್ರಜಿತ್ತು-ಜೀಯಾ ! ಇದೆಷ್ಟರ ಕೆಲಸ. ಹಾವಿನ ಮರಿಗಳು ಗರುಡ ನನ್ನು ಕೆಣಕಿ ಬದುಕಬಲ್ಕು ವೇ ? ಕರಿಕಲಭಗಳು ಮೃಗೇಂದ್ರನನ್ನು ಗೆಲ್ಲ ಬಲ್ಕು ವೇ ? ಗಿಡ ಮರ ಮೆಳೆಗಳ ಮೇಲೆ ಓಡಿಯಾಡಿಕೊಂಡು ಚಿಗುರು ಹೂವು ಹಣ್ಣುಗಳನ್ನು ತಿಂದು ಜೀವಿಸುವ ಕೋಡಗಗಳು ನಮಗೆ ಗಣ್ಯವೇ ? ಯಮನ ತಲೆಯನ್ನು ತರ ಹೇಳು. ಸ್ವರ್ಗದಮರಾವತಿಯನ್ನು ಕಿತ್ತು ತಂದು ಪಾತಾಳದಲ್ಲಿ ಬಿಸುಡಹೇಳು. ಅಷ್ಟದಿಕಾಲಕರ ಮಗು ಗಳನ್ನು ಕೊಯ್ದು ತರುವುದಕ್ಕೆ ಆಜ್ಞಾಪಿಸು, ಹಾವು ಗಳೊಡೆಯನ ಹೊಳಲನ್ನು ತಂದು ಸ್ವರ್ಗದಲ್ಲಿಳಿಸಹೇಳು. ಎಲೈ ತಂದೆಯೇ ! ಕೇಳು. ಯಮಾದಿಗಳಿಂದಲೂ ಕೂಡ ನೋಡಲಮ್ಮದ ಕಲ್ಪಾಂತ ರುದ್ರನ ಹಣೆಗಣ್ಣಿನ ಕೇಸು ರಿಗ೦ಜದ ನಮ್ಮಂಥ ವೀರಾಗ್ರೇಸರರೊಡನೆ ತೃಣಪಾಯರಾದ ಮನುಜಕವಿಗಳ ರಣದ ರಾಜಕಾರ್ಯದ ಗೌರವವನ್ನು ಹೇಳಬಹುದೇ ? ಇಷ್ಟು ಮಾತ್ರಕ್ಕೆ ಈ ಮಹಾ ಭಟರ ಪರ್ಯ೦ತರವೂ ಯೋಚಿಸಬೇಕೇ ? ಈ ನಿನ್ನ ಚಾಮರಧಾರಿಗಳಿಂದಲೇ ಆಕೊಡಗ ಗಳ ತಂಡವನ್ನೂ ಅಲ್ಪರಾದ ಮನುಷ್ಯರನ್ನೂ ಬೀಳ ಒಡಿಸುವೆನು. ಈ ಮಾತು ಹಾಗಿ ರಲಿ, ಸೀತೆಯು ಶೀಘ್ರವಾಗಿ ನಿನಗೆ ಒಲಿಯುವ ಉಪಾಯದ ಮಾತುಗಳನ್ನಾಡು. ಈ ಮಹಾ ಸಭಾಸ್ಥಾನದಲ್ಲಿ ಕಪಿಬಲದ ವರ್ತಮಾನವನ್ನಾಡುವುದು ಲಜ್ಜಾಸ್ಪದವೆಂದು ಹೇಳಿದನು. - ಆಗ ವಿಭೀಷಣನು ಇಂದ್ರಜಿತ್ತಿನ ಗರ್ವೋಕ್ತಿಗಳು ಕಿವಿಯಲ್ಲಿ ಬಿದ್ದ ಕೂಡಲೇ ಮುಖದಲ್ಲಿ ಕೋಪಾಗ್ನಿ ಯು ಭುಗಿಲೆನ್ನಲು ಗಹಗಹಿಸಿ ನಗುತ್ತ ತಲೆಯನ್ನು ತೂಗಿ ಮೈಯನ್ನು ಒಲೆದೋಲೆದು ಇಂದ್ರಜಿತ್ತನ್ನು ನೋಡಿ ಎಲೈ ಶೂರನೇ ! ನೀನು ಹೇಳಿದ ಮಾತುಗಳಿಂದ ನನಗೆ ಅತಿ ಸಂಶಯಾಶ್ಚರ್ಯ ಭಾವಗಳುಂಟಾಗಿವೆ. ಇನ್ನೊಂದು ಸಾರಿ ಚೆನ್ನಾಗಿ ತಿಳಿಯ ಹೇಳು. ನೀನು ಮಹಾ ಪರಾಕ್ರಮಶಾಲಿಯಷ್ಟೆ. ಈಗ ನಾವು ನಿನ್ನು ಬಾಳುತನವನ್ನು ಹೊಸದಾಗಿ ತಿಳಿಯಬೇಕೇ ? ಸತ್ತಿಗೆಯವರಿಂದ ಕೋಡಗಗಳನ್ನೂ ಮನುಜರನ್ನೂ ಹೋಯ್ಲಿ ಬಿಡುವೆಯೋ ? ಇಂಥ ಸಾಮರ್ಥ್ಯದ ಮಹಿಮೆಯು ನಿನ್ನ ತಮ್ಮನಾದ ಅಕ್ಷಾದ್ಯಸಂಖ್ಯಾತ ರಾಕ್ಷಸವೀರರ ಹೊಟ್ಟೆ ಗಳನ್ನು ಬಗೆದು ಪ್ರಾಣಗಳನ್ನು ಹಾರಿಸಿ ಈ ನಮ್ಮ ಲಂಕಾನಗರವನ್ನು ಅಗ್ನಿಗೆ ಆಹುತಿ ಮಾಡಿದ ಒಂದು ಕೋಡಗದ ಮುಂದೇಕೆ ನಡೆಯದೆ ಹೋಯಿತು ? ಆ ವೇಳೆಯಲ್ಲಿ ಈ ಕುಂಭ ನಿಶುಂಭ ದೇವಾಂತಕ ನರಾಂತಕಾದಿ ಶೂರರೆಲ್ಲರೂ ಎಲ್ಲಡಗಿದರು ? ಎಲೇ ಅಣ್ಣಾ! ಕೇಳು, ಇವರುಗಳ ಬನ್ನಣೆಯ ಬಿಂಕದ ಮಾತುಗಳು ಹಾಗಿರಲಿ, ಭೂಮಿಯ ಭಾರವನ್ನು ಇಳಿಸುವುದಕ್ಕೋಸ್ಕರ ಶ್ರೀಮಹಾ ವಿಷ್ಣುವು ನರರೂಪವನ್ನು ಧರಿಸಿ ಬಂದಿ ರುವನು. ಈ ಹೆಣ್ಣಿನ ನೆಪದಿಂದ ನಮ್ಮನ್ನು ಮಣ್ಣು ಪಾಲು ಮಾಡದೆ ಬಿಡನು. ಹೀಗಿ. ರುವುದನ್ನು ತಿಳಿದೂ ಅಶಕ್ತರಾದ ನಾವು ಆತನೊಡನೆ ವಿರೋಧವನ್ನು ಸಂಪಾದಿಸಿ ಕೊಂಡು ವ್ಯರ್ಥವಾಗಿ ಉಣ್ಣದೆ ಉಡದೆ ಉರಿದುಹೋಗಬೇಕಾಗುವುದು, ಆ ರಾಮನು