ಪುಟ:ಕಥಾಸಂಗ್ರಹ ಸಂಪುಟ ೨.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

202 ಕಥಾಸಂಗ್ರಹ-೪ ನೆಯ ಭಾಗ ಮಣ್ಣನ್ನೂ ಹಾಕಿ ಕಟ್ಟಿಸಿ ಅಣುಮಾತ್ರವೂ ವ್ಯತ್ಯಾಸವಿಲ್ಲದಂತೆ ಇರುವ ಗಂಧದ ಕಲ್ಲೋ ಎಂಬಂತೆ ಮಾಡಿದರು. ಮತ್ತು ನಂದಿಗ್ರಾಮದಿಂದ ಅಯೋಧ್ಯೆಯ ವರೆಗೂ ಮಹೋನ್ನ ತವಾದ ಚಪ್ಪರವನ್ನು ಹಾಕಿ ಮಾಂದಳಿರು ಬಾಳೆಗಂಬ ವಿವಿಧವಾದ ಕುಸುಮ ಗುಚ್ಛ ಬಾಳೆಗೊನೆ ಎಳನೀರು ಈ ಮೊದಲಾದ ಮಂಗಲವಸ್ತುಗಳಿಂದಲೂ ಎಚಿತಾಲಬರಗಳಿಂದಲೂ ತೋರಣಧ್ವಜ ಪತಾಕೆಗಳಿಂದ ಅಲಂಕರಿಸಿ ನೋಡುವ ವರ ನೇತ್ರಗಳಿಗೂ ಯೋಚಿಸುವರ ಮನಸ್ಸುಗಳಿಗೂ ಆಶ್ಚರ್ಯವನ್ನು ೦ಟು ಮಾಡುವಂತೆ ಮಾಡಿದರು. ಮತ್ತು ಅಲ್ಲಿಗಲ್ಲಿಗೆ ಎಳೆನೀರು ನೀರ್ಮಜ್ಜಿಗೆ ಪಾನಕ ಫಲಾಹಾರದ್ರವ್ಯ ಗಂಧ ಪುಷ್ಪ ತಾಂಬೂಲ ಈ ಮೊದಲಾದವುಗಳಿಂದ ಕೂಡಿ ಲೋಕದಲ್ಲಿ ಸುಕೃತಿಗೆ ೪ಾದವರು ಸ್ವರ್ಗಕ್ಕೆ ಹೋಗುವ ದಾರಿಯೊಂದಿದ್ದರೆ ಅದು ಇದೇ ಎಂಬುವಂತೆ ಸರಿ ರಂಜಿಸುವ ಅರವಟಿಗೆಗಳು ಏರ್ಪಡಿಸಲ್ಪಟ್ಟು ವು. ಅಲ್ಲಿ ಗಲ್ಲಿಗೆ ಲತಾಮಂಟಪಗಳು ಸಮಸ್ವಾಹಾರ ಸಾಮಗ್ರಿಗಳಿಂದ ಸಂಪೂರಿತವಾದ ಬೀಡಾರಗಳು ನಯವಾದ ಗಾರೆಯಿಂದ ಮಾಡಲ್ಪಟ್ಟು ಕಾಳಂಜಿಗಳಿಂದ ತುಂಬಲ್ಪಟ್ಟ ನಿರ್ಮಲೋದಕಗಳಿಂದ ಕೂಡಿದ ಕೊಳಗಳೂ ರಾರಾಜಿಸಿದವು. ಮತ್ತು ಶ್ರೀರಾಮನು ಮೊದಲು ಅಯೋದ್ಯಾ ನಗರವನ್ನು ಬಿಟ್ಟು ಅರಣ್ಯಕ್ಕೆ ಹೋದಾರಭ್ಯ ರಾಜಧಾನಿಯಲ್ಲೂ ದೇಶದಲ್ಲೂ ಸರ್ವ ಜನರೂ ವ್ಯಸನಾಕ್ರಾಂತರಾಗಿದ್ದುದರಿಂದ ಕೆಲಕೆಲವರು ಪೊಳಲು ಊರು ಹಳ್ಳಿ ಇವು ಗಳನ್ನು ಬಿಟ್ಟು ಹೋಗಿ ಪರದೇಶವಾಸಿಗಳಾದುದರಿಂದ ಅವುಗಳೆಲ್ಲವೂ ಹಾಳುಬಿದ್ದು ಮನೆಗಳು ಮುರಿದು ಕಂಬ ಬೋದಿಗೆಗಳೆಲ್ಲಾ ಬಿಟ್ಟು ತೊಟ್ಟಿ ಪಡಸಾಲೆಗಳೆಲ್ಲಾ ಅಮಂಗಲಗಳಾಗಿ ಮಹೋನ್ನತವಾದ ಮಹಡಿಗಳೆಲ್ಲಾ ನೆಲಸಮನಾಗಿ ವಿಶೇಷವಾದ ಹಾಳು ಗೋಡೆಗಳೇ ಕಾಣಿಸುತ್ತ ಹೆಗ್ಗಣಗಳಿಗೂ ಇಲಿಗಳಿಗೂ ಆವಾಸಗಳಾಗಿ ಎಲ್ಲಿ ನೋಡಿದರೂ ಇಲಿಬಿಲಗಳೂ ಹುಲ್ಲು ಗಿಡಗಳೂ ಕಾಣಿಸುತ್ತಿದ್ದವು. ಆ ಸ್ಥಳದಲ್ಲಿ ಮೊಲ ನರಿ ತೋಳ ಮೊದಲಾದುವುಗಳು ಬಂದು ವಾಸಮಾಡ, ತಿದ್ದುವು. ಎಲ್ಲಿ ನೋಡಿದರೂ ಗೆದ್ದಲುಗಳೂ ಸೊಳ್ಳೆಗಳ ಜೇನ್ನೊಣಗಳೂ ದೊರೆಯುತ್ತಿದ್ದುವು. ಹಾಳುಮನೆಗಳಲ್ಲಿ ಮುಂಗಿಸಿಗಳು ಓಡಿಯಾಡುತ್ತಿದ್ದುವು. ಹಾವುಗಳು ಕೂರಿಸುತ್ತ ಇಲಿಬಿಲಗಳನ್ನು ಹೊಕ್ಕು ಹೊರಟು ತಿರುಗುತ್ತಿದ್ದು ವು. ಈ ರೀತಿಯಾಗಿ ಇನ್ನೂ ವಿವಿಧವಾದ ವಿಕಾರ ಸ್ಥಿತಿಗಳನ್ನು ಹೊಂದಿ ನೋಡುವವರಿಗೆ ದುಃಖಾಶ ರ್ಯಭೀತಿ ಭಾವಗಳನ್ನು ಹುಟ್ಟಿ ಸುತ್ತ ಅಯೋಧ್ಯಾನಗರ ದೇಶಗಳ ಸ್ಥಿತಿಯು ಬಹು ಪರಿತಾಪಕ ರವಾಗಿತ್ತು. ಆಗ ರಾಜ ಕೋಶದಿಂದ ಕೊಡಲ್ಪಟ್ಟ ದ್ರವ್ಯರಾಶಿಯಿಂದ ಹೊಸದಾದ ಸ್ವರ್ಗಸೀಮೆಯೋ ಎಂಬಂತೆ ದೇಶವೆಲ್ಲವೂ ಮಂಗಳಕರವಾದ ಸುಸ್ಥಿತಿಯಿಂದ ಆಶ ರ್ಯವನ್ನು ಬೀರುತ್ಯ ಮನೋಹರತೆಯಿಂದ ಒಪ್ಪಿತು. ಅಯೋಧ್ಯಾ 'ದೇಶದಲ್ಲಿ ಎಲ್ಲಿ ನೋಡಿದರೂ ಊರೂರುಗಳಲ್ಲಿ ತೋರಣ ಚಿತ್ರಪತಾಕಾಧ್ವಜಾದಿ ಮಂಗಳಸೂಚಕವ ಸ್ತು ಗಳು ರಾರಾಜಿಸಿದುವು. ಬೀದಿಬೀದಿಗಳಲ್ಲಿ ಉತ್ಸವಗಳು ಭಜನೆಗಳು ಮನಂಗೊಳಿ ಸಿದುವು. ಲೋಕದಲ್ಲಿ ಪುಣ್ಯಾತ್ಮರ ಭೋಗಯೋಗ್ಯವಾದ ಅಮರಾವತಿಯೊಂದಿದ್ದರೆ ಅದೇ ಇದು ಎಂಬಂತೆ ವಾಚಾಮಗೋಚರವಾದ ಶೃಂಗಾರದಿಂದ ಅಯೋಧ್ಯಾನಗ