ಪುಟ:ಕಥಾಸಂಗ್ರಹ ಸಂಪುಟ ೨.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

266 ಕಥಾಸಂಗ್ರಹ-೫ ನೆಯ ಭಾಗ ನಾಗಿದ್ದನು. ಅಲ್ಲಿ ವಸುದೇವ ದೇವಕಿಯರು ಪರಸ್ಪರಾನುರಾಗದಿಂದ ಕೂಡಿರುತ್ತಿರು ವಲ್ಲಿ ಕೆಲಕಾಲದ ಮೇಲೆ ದೇವಕಿಯು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. ಕಂಸಾಸುರನು ಆ ವರ್ತಮಾನವನ್ನು ಕೇಳಿ ತತ್‌ಕ್ಷಣದಲ್ಲೇ ಹೊಲೆಮನೆಯ ಬಳಿಗೆ ಬಂದು ಆ ಶಿಶುವನ್ನು ತೆಗೆದುಕೊಂಡು ಕಾಲನ್ನು ಹಿಡಿದು ಒಂದು ದೊಡ್ಡ ಕಲ್ಬಂ ಡೆಯ ಮೇಲೆ ಬಡಿದು ಕೊಂದು ನಿರ್ನಾಮಮಾಡಿದನು. ಈ ರೀತಿಯಾಗಿ ಹುಟ್ಟಿದ ಆರು ಮಕ್ಕಳುಗಳ ವರೆಗೂ ಕಾಲು ಹಿಡಿದು ಕಲ್ಬಂಡೆಯ ಮೇಲೆ ಒಗೆದು ಕೊಟ್ಟು , ಬಂದನು. ಇತ್ತಲಾ ಮಹಾವಿಷ್ಣುವು ಬ್ರಹ್ಮಾದಿ ದೇವತೆಗಳಿಗೆ ಮೊದಲು ಅಭಯವಚನ ವನ್ನು ಕೊಟ್ಟ ಮೇರೆಗೆ ಭೂಲೋಕದಲ್ಲಿರುವ ವಸುದೇವದೇವಕಿಯರಿಗೆ ಪುತ್ರನಾಗಿ ಹುಟ್ಟಿ ದುಷ್ಟರನ್ನು ಸಂಹರಿಸಬೇಕೆಂದು ಯೋಚಿಸಿ ಮೊದಲು ತನಗೆ ಹಾಸಿಗೆಯಾಗಿ ರುವ ಮಹಾ ಶೇಷನನ್ನು ನೋಡಿ-ಎಲೈ ಫಣಿರಾಜನೇ ! ನೀನು ಈಗಲೇ ಭೂಲೋ ಕಕ್ಕೆ ಹೋಗಿ ಮಧುರಾಪ್ರರದಲ್ಲಿರುವ ವಸುದೇವನ ಹೆಂಡತಿಯಾದ ದೇವಕೀದೇವಿಯ ಬಸುರನ್ನು ಹೊಗುವವನಾಗು ಎಂದು ಅಪ್ಪಣೆಯನ್ನು ಕೊಟ್ಟುದರಿಂದ ಅವನು ಅದೇ ಮೇರೆಗೆ ನಡೆದುಕೊಂಡನು. ಅನಂತರದಲ್ಲಿ ತನ್ನ ಮಾಯೆಯನ್ನು ಕುರಿತು-ಎಲೈ ಮಾಯೆಯೇ ! ಈಗ ನನ್ನ ಹಾಸಿಗೆಯಾದ ಮಹಾ ಶೇಷನು ಹೋಗಿ ದೇವಕೀ ದೇವಿಯ ಗರ್ಭವನ್ನು ಹೊಕ್ಕು ಅಲ್ಲಿ ಶಿಶುವಿನಾಕಾರದಿಂದಿರುವನು. ನೀನು ಮೊದಲು ಅಲ್ಲಿಗೆ ಹೋಗಿ ಆತನನ್ನು ದೇವಕೀದೇವಿಯ ಬಸುರಿನಿಂದ ಬೆಳೆದು ನಂದಗೋಕುಲದಲ್ಲಿರುವ ಆ ವಸುದೇವನ ಜೇಷ್ಠ ಪತ್ತಿಯಾದ ರೋಹಿಣೀದೇವಿಯ ಹೊಟ್ಟೆಯಲ್ಲಿಟ್ಟು ಆ ಮೇಲೆ ಅದೇ ಗೋಕುಲದಲ್ಲಿರುವ ನಂದಗೋಪನೆಂಬ ಗೊಲ್ಲರೊಡೆಯನ ಮಡದಿಯಾದ ಯಶೋದೆ ಎಂಬವಳ ಹೊಟ್ಟೆಯಲ್ಲಿ ಶ್ರಾವಣಬಹುಳ ಅಷ್ಟಮಿಯ ಅರ್ಧರಾತ್ರಿ ಯಲ್ಲಿ ಹೆಣ್ಣು ಶಿಶುವಾಗಿ ಹುಟ್ಟು, ನೀನು ನನಗೆ ತಂಗಿಯಾಗಿರುವದರಿಂದ ದುರ್ಗಿ ಚಾಮುಂಡಿ ಪಾರ್ವತಿ ಕಾತ್ಯಾಯಿನಿ ಕಾಳಿ ಎಂಬ ಈ ಮೊದಲಾದ ಹೆಸರುಗಳನ್ನು ಧರಿಸಿ ಶಿವನಿಗೆ ಪತ್ನಿ ಯಾಗಿ ಕೋಣ ಕುರಿ ಕೋಳಿ ಮುಂತಾದ ಪ್ರಾಣಿಬಲಿಯನ್ನು ಕೊಟ್ಟು ಯಾರು ನಿನ್ನನ್ನು ಭಕ್ತಿಯಿಂದ ಆರಾಧಿಸುವರೋ ಅಂಥವರಿಗೆ ನೀನು ಬೇಕಾದ ವರಗಳನ್ನು ಕೊಡುತ್ತಾ ಲೋಕದ ಜನರಿಂದ ಪೂಜಿಸಿಕೊಂಡಿರು ಎಂದು ಅಪ್ಪಣೆ ಯನ್ನು ಕೊಟ್ಟು ಕಳುಹಿಸಲು ಆಕೆಯು ಅದೇ ಮೇರೆಗೆ ಅಲ್ಲಿಂದ ಹೊರಟು ಮಧು ರಾಪಟ್ಟಣಕ್ಕೆ ಬಂದು ದೇವಕಿಯ ಒಸುರಿನಿಂದ ಶಿಶುವನ್ನು ಸೆಳೆದು ರೋಹಿಣಿಯ ಗರ್ಭದಲ್ಲಿರಿಸಿ ತಾನು ಯಶೋದೆಯ ಉದರವನ್ನು ಹೊಕ್ಕಳು. ಇತ್ತಲಾ ಮಧುರಾಪುರದಲ್ಲಿ ದೇವಕೀದೇವಿಯು ಏಳನೆಯ ಸಾರಿ ಬಸುರಾ ಗಿದ್ದು ಮೈಯಿಳಿದಳೆಂದು ನೋಡಿದ ಹೆಂಗಸರು ಬಂದು ಕಂಸಾಸುರನಿಗೆ ತಿಳಿಸಿದರು. ತರುವಾಯ ಕೆಲವು ದಿನಗಳ ಮೇಲೆ ಮಹಾವಿಷ್ಣು ವು ದೇವಕೀದೇವಿಯ ಗರ್ಭವನ್ನು ಪ್ರವೇಶಿಸಲು ಆಕೆಯು ಎಂಟನೆಯಸಾರಿ ಬಸುರಾದಳೆಂಬ ಸುದ್ದಿಯು ಕಂಸನಿಗೆ ತಿಳಿ ಯಲು ಅವನು ಈ ಸಾರಿ ಹುಟ್ಟುವ ಕೂಸೇ ನನ್ನನ್ನು ಕೊಲ್ಲುವಂಥದು ಇದನ್ನು