ಪುಟ:ಕಥಾಸಂಗ್ರಹ ಸಂಪುಟ ೨.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾದೆಗಳು 281 ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ತೊಡೆಯಬಹುದೇ ? ಒಡಂಬಡಿಕೆಯಿಂದ ಆಗುವದು ದಡಂಬಡಿಕೆಯಿಂದ ಆದೀತೇ ? ಒಿತ್ತುಂಡುವ ಯೋಗಿ, ಎರಡೊತ್ತುಂಡುವ ಭೋಗಿ, ಮತ್ತೊತ್ತುಂಡುವ ರೋಗಿ, ನಾಲ್ಲೊ ತುಂಡುವನ ಹೊತ್ತು ಕೊಂಡು ಹೋಗಿ, ಒರಳಲ್ಲಿ ಕೂತರೆ ಒನಕೇ ಪೆಟ್ಟು ತಪ್ಪಿತೇ ? ಓದಿ ಓದಿ ಮರುಳಾದ. ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ಥಿ, ಕಂಡದ್ದು ಮಾತನಾಡಿದರೆ ಕೆಂಡದಂಥ ಕೋಪ. ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳಾ ನೋಡಿದ ಹಾಗೆ. ಕಚೋ ನಾಯಿ ಬೊಗಳದು, ಬೊಗಳೋ ನಾಯಿ ಕಚ ದು. ಕಡು ಕೋಪ ಬಂದಾಗ ತಡಕೊಂಡವನೇ ಜಾಣ. ಕಡೆಗೆ ಬಾಯಿ ತೆರೆದು ಕಡಿವಾಣಕ್ಕೆ ಬಾಯಿ ಮುಚ್ಚಿದರೆ ಆದೀತೇ ? ಕತ್ತೆ ಕಸ್ತೂರೀ ಹೊತ್ತ ಹಾಗೆ, ಕತ್ತೆ ಮೊಲೆಯಲ್ಲಿ ಖಂಡುಗ ಹಾಲಿದ್ದರೇನು ? ಕಪ್ಪೆ ಕೂಗಿ ಮಳೆ ಬರಿಸಿದ ಹಾಗೆ. ಕಬ್ಬಿಣ ಗಡಾರಿ ನುಂಗಿ ಶುಂಠಿ ಕಷಾಯಾ ಕುಡಿದ ಹಾಗೆ. ಕಬ್ಬು, ಡೊಂಕಾದರೆ ಸವಿ ಡೊಂಕೇ ? ಕರಡಿಗೆ ಕೂದಲು ಯಾವದು, ರೋಮವು ಯಾವದು ? ಕರಡೀ ಕೈಗೆ ಹೆದರದವ ಕರೀ ಕಂಬಳಿಗೆ ಹೆದರಾನೇ ? ಕರೆಯುವ ಹಸಾ ಕೊಟ್ಟು ಒದೆಯುವ ಕತೇ ತಂದ ಹಾಗೆ. ಕಳ್ಳ ಕಳ್ಳಗೆ ಬಲ್ಲ, ಕಾಗೆ ಕೋಗಿಲೆಯ ಹಾಗಿದ್ದರೂ ರಾಗದಲ್ಲಿ ಭೇದವಿಲ್ಲವೇ ? ಕಾಡಲ್ಲಿ ಹೊಂಬಾಳೆ ಬಯಸಿದ ಹಾಗೆ, ಕಾಡಿನಲ್ಲಿ ತಿರುಗಿ ಕಟ್ಟಿಗೆ ಇಲ್ಲ ಅಂದ ಹಾಗೆ ಕಿಚೆ ದ್ಯಾಗ ಬಾವಿ ತೋಡಿದ.. ಕಿಟಿಕಿಯಿಂದ ನುಸುಳುವವ ಹೆಬ್ಬಾಗಿಲಿಂದ ಬಾರನೇ ? ಕಿಡಿಯಿಂದ ಕಾಡ ಸುಡಬಹುದು. ಕೀಟ ಸಣ್ಣದಾದರೂ ಕಾಟ ಬಹಳ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ. ಕುರುಬನ ಮಂದೇ ತೋಳ ಕಾದ ಹಾಗೆ. ಕುಲವನ್ನು ನಾಲಿಗೆ ಹೇಳುವದು. ಕೂಸು ಕಾಸು ಬಾಳದು, ಜೋಗುಳ ಮುಗಿಲು ಮುಟ್ಟಿತು. ಕೂಳ ಚೆಲ್ಲಿದ ಕಡೆ ಸಾವಿರ ಕಾಗೆ.