ಪುಟ:ಕಥಾಸಂಗ್ರಹ ಸಂಪುಟ ೨.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

114 ಕಥಾಸಂಗ್ರಹ-೪ ನೆಯ ಭಾಗ ರಾದ ವಾನರನಾಯಕರು ನಿನ್ನ ಆಜ್ಞಾಧಾರಕರಾಗಿದ್ದಾರೆ. ಅಪ್ಪಣೆಯಾದರೆ ಅತಿಶೀಘ್ರ ವಾಗಿ ಈ ಕಡಲನ್ನು ಹೂಳಿಸಿ ಮಾರ್ಗವನ್ನು ಸಿದ್ದ ಮಾಡಿ ಕರೆದುಕೊಂಡು ಹೋಗಿ ಹಗೆಯಾದ ರಾವಣನನ್ನು ನಿನಗೆ ತೋರಿಸುವೆನು. ಆ ಮೇಲೆ ಅವನನ್ನು ಕೊಲ್ಲ ಬೇ ಕಾದರೂ ಉಳುಹಬೇಕಾದರೂ ಸರ್ವಜ್ಞ ಚಿತ್ತವೇ ಕಾರಣವೆಂದು ಬಿನ್ನವಿಸಿದನು. ಆ ಮೇಲೆ ಗವಾಕ್ಷನೆಂಬ ಕಪಿನಾಯಕನೆದ್ದು ಕೈಮುಗಿದು-ಎಲೈ ರಾಘವೇಂ ದ್ರನೇ ! ಈ ನಮ್ಮೊಡೆಯನಾದ ಸುಗ್ರೀವನು ನುಡಿದ ನುಡಿಯು ನಮ್ಮ ಶೌರ್ಯಾತಿಶ ಯಕ್ಕೆ ಭೂಷಣವಾದುದೆಂದು ಹೇಳಲಾರೆನು. ಕಪಿನಾಯಕರೆಲ್ಲಾ ಕಷ್ಟ ಪಟ್ಟು ಈ ಕಡಲನ್ನು ಹೂಳುವುದೇಕೆ ? ಈ ನನ್ನ ಉದ್ದವಾದ ಬಾಲವೊಂದನ್ನೇ ಲಂಕೆಗೆ ಕಳು ಹಿಸಿ ಹುಲ್ಲು ಪರೆಗೆ ಸಮಾನನಾದ ರಾವಣನನ್ನು ಹಿಡಿದು ತರಿಸುವೆನು ಎಂದು ಹೇಳಿ ದನು. ಆಗ ಗವಯನೆಂಬ ವಾನರ ಸೇನಾಪತಿಯು ಗವಾಕ್ಷನನ್ನು ಕುರಿತು ಲೋಕೈ ಕವೀರನಾದ ರಾಮನ ಮುಂಗಡೆಯಲ್ಲಿ ಒಳ್ಳೆಯ ಪರಾಕ್ರಮೋಕ್ಕಿಯನ್ನಾಡಿದಿ ! ಬಲು ಚೆನ್ನಾ ಯಿತು. ಛೇ ! ಆಚೆಗೆ ಹೋಗು, ಹಗೆಯಾದ ರಾವಣನೊಬ್ಬನನ್ನು ಮಾತ್ರ ಹಿಡಿದು ತರುವುದು ಮಹಾ ಪೌರುಷವೋ ? ಆಜ್ಞೆಯಾದರೆ ಆ ಖಳನನ್ನೂ ಅವನ ಸಮಸ್ತ ಬಲವನ್ನೂ ಅವನ ವಾಸಸ್ಥಾನವಾದ ಲಂಕಾದುರ್ಗವನ್ನೂ ಕ್ಷಣಕಾಲದಲ್ಲಿ ತಂದು ಈ ರಾಘವನ ಮುಂದಿಳುಹದಿದ್ದರೆ ನಾನು ಬಂಟನಲ್ಲ ಎಂದು ಬೊಬ್ಬಿರಿದನು. ಆ ಮೇಲೆ ಶರಭನೆಂಬ ಕಪಿವೀರನು ನಮ್ಮೆದುರಿಗಿರುವ ಈ ಸಮುದ್ರವನ್ನು ಬಿಟ್ಟು ಈ ಕೆಲಸವನ್ನು ಮಾಡುವುದು ಬಲು ದೊಡ್ಡದಲ್ಲ, ಕೊಡನ ಮಗನಾದ ಅಗಸ್ಯನ ಹಾಗೆ ಮೊದಲು ಈ ಕಡಲನ್ನೆಲ್ಲಾ ಕುಡಿದು ಆ ಮೇಲೆ ರಾವಣನ ತಲೆಯನ್ನು ತರಿದು ಈ ರಾಮನ ಮುಂದೊಟ್ಟುವೆನು ಅಂದನು. ಅನಂತರದಲ್ಲಿ ಸರ್ವಸೇನಾಪತಿಯಾದ ನೀಲನು--ನೀವು ಹೇಳಿದುದೆಲ್ಲಾ ಮಹಾತಿಶಯವಾದ ಕಾರ್ಯವಲ್ಲ, ಒಡೆಯನ ಅಪ್ಪಣೆಯಾದರೆ ಈ ಬ್ರಹ್ಮಾಂಡವನ್ನೇ ತಲೆಕೆಳಗುಮಾಡಿಬಿಡುವೆನು ಎಂದುಬ್ಬಿ ಗರ್ಜಿಸಿದನು. ಈ ಪ್ರಕಾರವಾಗಿ ಸಮಸ್ತ ಕಪಿಸೇನಾನಾಯಕರೂ ತಮ್ಮ ತಮ್ಮ ಶಕ್ತಿ ಸಾಹ ಸಗಳನ್ನು ವಾರೂಪವಾಗಿ ಪ್ರಕಟಿಸಿಕೊಳ್ಳುತ್ಯ ಆರ್ಭಟಿಸುತ್ತಿರಲು ಇನಕುಲೇ ದ್ರನು ಅದನ್ನೆಲ್ಲಾ ಕೇಳಿ ಅತ್ಯಂತ ಸಂತೋಷದಿಂದ ಹಿಗ್ಗಿ ಹನುಮಂತನ ಮುಖವನ್ನು ನೋಡಿ.ಈ ವಿಷಯದಲ್ಲಿ ನಿನ್ನ ಬುದ್ದಿಗೆ ಏನು ಯೋಚನೆಯು ತೋರುತ್ತಿರುವು ದೈಯ್ಯಾ ಎಂದು ಕೇಳಲು ಮಾರುತಿಯು ಎದ್ದು ಕೈಮುಗಿದು-ಜೀಯಾ ! ಈ ಪ್ರಖ್ಯಾತರಾದ ಕಪೀಂದ್ರರೊಳಗೆ ನಾನೆಷ್ಟರವನು ? ಪ್ರಭುವಿನ ಅಪ್ಪಣೆಯಾದಂತೆ ನಡೆ ಯುವುದೊಂದೇ ನನ್ನ ಮತವು ಎಂದು ಬಿನ್ನವಿಸಲು ರಾಮನು ಆಂಜನೇಯನ ವಿಚಾರಪೂರ್ವಕವಾದ ಬಿನ್ನ ಪಕ್ಕೆ ಮೆಚ್ಚಿ ಸುಗ್ರೀವನನ್ನು ನೋಡಿ.ಎಲೈ ಪ್ರಿಯ ಸಖನೇ ! ನಿನ್ನ ಕಪಿಸೇನಾಪತಿಗಳೆಲ್ಲರಿಗೂ ಅಪ್ಪಣೆಯನ್ನು ಕೊಟ್ಟು ತರುಪರ್ವತಾದಿ ಗಳನ್ನು ತರಿಸು. ಅವರು ತಂದ ತರುಗಿರಿಶಿಲಾದಿಗಳನ್ನು ತಗೆದುಕೊಂಡು ಸಮುದ್ರ ದಲ್ಲಿಟ್ಟು ಸೇತುವನ್ನು ಕಟ್ಟುವಂತೆ ನಳನಿಗೆ ಆಜ್ಞಾಪಿಸು. ಇನ್ನು ಸಾವಕಾಶವೇತಕ್ಕೆ