ಪುಟ:ಅನುಭವಸಾರವು.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಸಂಧಿ. ೧ ನೇ ಸೂತ್ರ, ಪ್ರಶ್ನನಿರೂಪಣ. ಯೋಗಬಲದಿಂದಾತ್ಮಲಾಭವಾಗಲು ಮುಕ್ಕಿ | ಯಾಗುವಂದವನೆನಗೆ ಬೆಸಸು ಗುರುವೆ || ೧ ತಿ! ವರಚಿತ್ರಕಾಶಂಗೆ ಚಿರಮುಕಿ ಕೋಶಂಗೆ 1 ದುರಿತನಾಶಂಗೆ ಗಿ ರಿಶಂಗುಮೇಶಂಗೆ | ಗುರುಶಂಭುವಿಂಗೆ ನತನಂ | ಸಗುರುಮೇವ ಎಂಬ ನಗುರೋರಧಿಕಮೆಂಬ ನಿಗಮ ಸಂಸಿದ್ದ ಗು ರುವರಜಯತೆಂದು | ಪೊಗಳಬಿನ್ನೈಸಿದನು ಸೂನು | ಶ್ರೀಗುರುವೆ ಕರ್ಮದಿಂದಾಗಿರ್ದ ತನುವಿರಲು ಯೋಗದಿಂ ಕರ್ಮ ವಳದು ನಿಜವಹನೆಂಬು | ದಾಗ ದಿದನೆಂತು ತಿಳಿವೆನು | 8 ತನುವಿರುತ್ತಿಜಗದಜನರ ಮಧ್ಯದೊಳೆರ್ವ 1 ನೆನಿಸಿ ಮೊದಲಂತೆ ಬೇವಿಸುವನಂ ಮುಕ್ಕ ನೆನಲಿದೇನಘುಟತನದಿ। b ತಿ ಏಳನೆಯ ಸಂಧಿ ೧ ನೇ ಸೂತ್ರ, ಪ್ರಶ್ನನಿರೂಪಣ. ಎಲೈ ಗುರುವೇ, ಸಮಾಧಿಯೋಗದ ಶಕ್ತಿಯಿಂದ ಬ್ರಹ್ಮಸಾಕ್ಷಾತ್ಕಾರವಾದರೆ ಮೋಕ್ಷವು ಹೇಗಾಗುವುದು ? ನನಗೆ ಅಪ್ಪಣೆ ಕೊಡಿಸು. ೧ ಶ್ರೇಷ್ಠವಾದ ಜ್ಞಾನದ ಬೆಳಕಾಗಿಯೂ, ಸ್ಥಿರವಾದ ಮೋಕ್ಷಕ್ಕೆ ಬೊಕ್ಕಸವಾಗಿ ಯೂ, ಪಾಪನಾಶಕನಾಗಿಯ, ರಜತಾದ್ರಿಯಲ್ಲಿ ವಾಸಮಾಡುವವನಾಗಿಯ, ಪಾರ್ವತೀ ಪತಿಯಾಗಿಯೂ ಇರವ ಶಂಭುಲಿಂಗನೆಂಬ ಗುರುವಿಗೆ ನಮಸ್ಕರಿಸಿದವ ನಾಗುತ್ತೇನೆ. - ಶಿಷ್ಯನು ಸಗುರು ಮೇವ ಎಂಬದಾಗಿಯ, ನಗುರೋರಧಿಕಂ ಎಂಬದಾಗಿಯೂ, ಹೇಳಿರುವ ವೇದದಲ್ಲಿ ಪ್ರಸಿದ್ಧನಾದ ಆಚಾರ್ ಶ್ರೇಷ್ಠ ನೇ ಸರೋಸ್ಕೃಷ್ಟನಾಗು ಎಂದು ಸ್ತೋತ್ರ ಮಾಡಿ ವಿಜ್ಞಾಪಿಸಿಕೊಂಡನು. ಶ್ರುತಿ, ಸಗುರುಮೆವಭಚೆತ ಯಸ್ಸಸಂಶಯಂನಾಶಯತಿ , ನಗುರೋರಧಿಕಂದೈನಂಭವತಿ ಎಲೈ ಷಡ್ಗುಣೈಶ್ವರಸಂಪನ್ನನಾದ ಗುರುವೇ, ಕರ್ಮದಿಂದ ಹುಟ್ಟಿರುವ ದೇಹವಿರು ವಾಗಲೇ ಸಮಾಧಿಯೋಗದಿಂದ ಕತ್ಮಕ್ಷಯವಾಗಿ ಬ್ರಹ್ಮನಾಗುವನೆಂದು ಹೇಳುವ ದು ಸಂಭವಿಸುವದಿಲ್ಲ, ಈ ಸಂಗತಿಯನ್ನು ನಾನು ಯಾವ ರೀತಿಯಿಂದ ತಿಳಿದು ಕೊಳ್ಳಲಿ? ಶರೀರದೊಡನಿರುತ್ತಾ ಲೋಕವ ಜನರ ನಡುವೆ ಒಬ್ಬನೆನಿಸಿಕೊಂಡು ಮುಂಚಿನಂತೆ ಬದುಕುವವನನ್ನು ಮುಕ್ತನೆಂದು ಹೇಳಿದರೆ ಅದು ಸಮಂಜಸವಾಗುವದಿಲ್ಲವಲ್ಲವೇ ?