ಪುಟ:ಅನುಭವಸಾರವು.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5 {• ಕೆಲರಿದಂಪನಿಯೊಂದು ಕೆಲರಿದಂದಿಟವೆಂದು ಕೆಲರಿದಂಮೊದಲೆಳ ಹುದರಿದೊಡಿಲೆಂದು | ಕೆಲರಿದಂನುಡಿಯಲರಿದೆಂದು V ಬೇರೆಬೇರನುಮಾನ ಬೇರೆಬೇರೆತರ್ಕ | ಬೇರೆಬೇರಾದ ಶಾಸ್ತ್ರ ಯುಕ್ತಿಗಳಿ೦ದೆ 1 ಸಾರಿಸಂಪಾದಿಸುವರಿಲ್ಲಿ || ಏನೆಂದುತಿಳವೆನಾನೇನೆಂದುನಂಬಿ ಸಂ। ಧಾನಮಂಮಾನಿದನೆ ಸತ್ಯಾ ರ್ಥಸಿಧಿ! ನೀನೆಗುರುವಯ್ಯ ಕರುಣಿಪುದು || ೪ನೇ ಸೂತ್ರ-ಚಿದ್ದಿವರ್ತನ ನಿರೂಪತೆ. ಏಕಮೇವಾದ್ವಿತೀಯಾತ್ಮನಲ್ಲಿಯತೋರ್ಪ | ಲೋಕರಂಜನೆಕಾಲ್ಪನಿಕವಿದೈತೆ | ೧ ತಿಪದೆ ಕಂದಕೇಳಹುದುನೀನಿಂದುಮಾಡಿದಚದ್ಯ | ವಂದವಾಯಿ ತು ಈಗಳಿ೦ತಿದನಿನ್ನ | ಸಂದೇಹವಳಿಯಲೋರವೆನು | ೨ ಇವನಾವನರಿದೊಡವನೊದೆದು ಸಂಸಾರಮಂ ! ಮುದದಿಂದೆನಡೆವನ ಕಲಂಕವಾದನಿಜ | ಸದವನಂತದನೆ ತಿಳಿವೇಳೆ | C 0 ೭೮ ಈ ಲೋಕವನ್ನು ಕೆಲವರು ಸುಳ್ಳೆಂತಲೂ, ಕೆಲವರು ಸತ್ಯವೆಂತಲೂ, ಕೆಲವು ಆದಿಯಿಂದಲೂ ಇದೆ, ತಿಳಿದ ಮೇಲೆ ಇಲ್ಲವೆಂತಲೂ, ಕೆಲವರು ಇದನ್ನು ಕುರಿತು ಹೇಳುವದಸಾಧ್ಯವೆಂತಲೂ ಹೇಳಿ, ಬೇರೆ ಬೇರೆ ಅನುಮಾನ ಪ್ರಮಾಣ, ಬೇರೆ ಬೇರೆ ಊಹೆ, ಬೇರೆ ಬೇರೆ ನ್ಯಾಯ ಇವುಗಳಿಂದ ಸಾಧಿಸುತ್ತಾರೆ. - ನಾನು ಈ ಲೋಕವನ್ನು ಏನೆಂದು ತಿಳಿದುಕೊಳ್ಳಲಿ? ಏನೆಂದು ನಂಬಿಕೆಯಿಟ್ಟು ಧ್ಯಾನಿಸಲಿ ? ತತ್ವಾರ್ಧಕ್ಕೆ ಆಸ್ಪದನಾದ ಗುರುವೆ, ಈ ಸಂಗತಿಯನ್ನು ನನಗೆ ತಿಳಿಸು. ೪ ನೇ ಸೂತ್ರ, ಚಿದ್ವಿ ವರ್ತನ ನಿರೂಪಣೆ. ಒಂದೇ ಒಂದಾಗಿ ಎರಡನೆಯದಿಲ್ಲವಾದ ಬ್ರಹ್ಮದಲ್ಲಿ ಕಾಣುತ್ತಿರುವ ಈ ಲೋಕ ವಿಸ್ತಾರವು ಕಲ್ಪನೆಯಿಂದಾದದ್ದಲ್ಲವೇ ? ೧ ಮಗನೇ ಕೇಳು, ಸತ್ಯ, ನಿನು ಈಗ ಮಾಡಿದ ಪ್ರಶ್ನೆಯು ಚೆನ್ನಾಯಿತು, ಈಗ ನಿನ್ನ ಮನದ ಸಂಶಯವು ನಿವಾರಣೆಯಾಗುವಂತೆ ಹೇಳುತ್ತೇನೆ. 5 ಇದನ್ನು ಯಾವನು ತಿಳಿದಾಗ್ಯೂ ಅವನು ಜನನ ಮರಣ ರೂಪವಾದ ಈ ಸಂಸಾ ರವನ್ನು ನೂಕಿ ಸಂತೋಷದಿಂದ ಯಾವದೊಂದು ಕಳಂಕವೂ ಇಲ್ಲದ ಮುಕ್ತಿ ಯನ್ನು ಪಡೆಯುವನು, ಹಾಗೆಯೇ ಅದನ್ನು ತಿಳಿಯುಹಾಗೆ ಹೇಳುತ್ತೇನೆ.