ಈ ಪುಟವನ್ನು ಪರಿಶೀಲಿಸಲಾಗಿಲ್ಲ.
416
ಕರ್ಣಾಟಕ ಕವಿಚರಿತೆ
[17 ನೆಯ
ಹಲಸು ಉಸಿರದೋರಂತೆ ಪುರುಷಾರ್ಧಮಂ ಮಾಡಿ ಸಂ | ತಸಗೈವ ಸತ್ಪುರುಷರಂತೆ ಬಹಿರಂಗದೊಳ್ |ಪಸರಿಸಿದ ಮೃದುಕಂಟಕಂಗಳಿಂ ಹೃದಯದೊಳ್ ತವೆ ತೀವಿ ಕಟ್ಟಿನಿದಿನ | ಮಿಸುನಿಯೊರೆಯುರುಳಿಗಳನಾಂತು ಮಘಮಘಿಸುತೆ | ಣ್ದೆ ಸೆಗಳಂ ಪಕ್ವ ಫಲಭಾರದಿಂ ಜಡಿದು ಶೋ | ಭಿಸುವ ಮಂಜುಳಬಕ್ಕೆ ವಲಸುಗಳ ಸಾಲು ಕಾಣ್ಗೆಸೆದಿರ್ದುವಾಬನದೊಳು|| ದಾಳಿಂಬ ಪೊಡವಿಧರದಿಂ ಪುಟ್ಟಿದೆವು ಮುನ್ನ ಕಾಠಿನ್ಯ | ನಡೆದು ಕಲ್ಲೆನಿಸಿಕೊಂಡೆವು ಸಾಣೆಯಿಂದೊಡಲ | ಕಡುಶಿಥಿಲಗೈದು ರಂಧ್ರಿಸಿದರೆಂದವನೀರುಹಂಗಳುದರದೊಳು ಜನಿಸಿ || ಕಡುಚೆಲ್ವಿನಿಂ ಕಾಂತಿವೆತ್ತು ರಸ ತೀವಿ ಕೆಂ | ಪಿಡಿದು ಮೃದುವೆನಿಸಿ ಕಟ್ಟಿನಿದಾಗಿಯುಂ ಪಲ್ಗೆ | ಪಡಿಗೈವರೆಂದು ಬಾಯ್ದಿಡುವಂತೆ ಪಣ್ವಿಡಿದ ದಾಡಿಮಂ ರಂಜಿಸಿದವು|
- ತುಂಗಭದ್ರೆ ಸುಳಿವ ಸುತ್ತುವ ಪತ್ತು ವೆತ್ತುವೊತ್ತುವ ಧಳಂ | ಧಳರೆನಲು ಪೊಯ್ವ ಮೆಲ್ವಾಯ್ವ ಸೋಂಕುವ ನೂಂಕು || ತೊಳವಂವ ಕೂಡುವಗಲುವ ಸೆಳೆವ ಪೊಳೆವ ತಗುಳುವ ಜಗಱವಾೞವೇೞ || ಲಳೆಮಸಗಿ ಪರಿವ ಭೋರ್ಗರೆವ ಘಳುಘಳಿಪ ಬೊ| |
ಬ್ಬು ಳಿಕೆಗಳ ಪೆರ್ದೆರೆಯ ಮರದೆರೆಯ ತುಂತುರಿನ | ಬೆನೊರೆಯ ಭೀಕರದ ಸೀಕರದ ವರತುಂಗಭದ್ರೆ ಕಣ್ಗೊಳಿಸಿರ್ದಳು | ನರೆದರೆಗಳಿರ್ದು ಜವ್ವನೆ ಜಡಪ್ರಕೃತಿಯ | ರ್ದುರುತರದ ಸತ್ವಗುಣಸಂಪನ್ನೆ ತನ್ನೊಳೊ | ಪ್ಪಿಗೆ ನಿಂದೆ ಭುವನವಿಖ್ಯಾತೆ ಪಾವನೆ ಪರರ ಕೈಬಾಯ್ಗೆ ಬಂದಿಳೆಯೊಳು | |ಪರಪೀಡನಂ ತನ್ನೊಳಿರ್ದು ಪಾಪವಿದೂರೆ | ಪರಿಕಿಸಲ್ ವಿಷಮೆನಿಸಿಯಮೃತಸ್ವರೂಪೆಯ | ಚರಿಯೆನೆ ಮನಂಗೊಳಿಸುತಿರ್ದಳನುಸಮತುಂಗಭದ್ರೆ ಮುಕ್ತಿಯ ಸುಮುದ್ರೆ ||