ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಪೆಮ್ಮಿ ಸೆಟ್ಟಿ 427

                      ಪೆಮ್ಮಿಸೆಟ್ಟ ಸು. 1650
   ಈತನು ಗುರುಭಕ್ತಾ೦ಡಾರ ಚರಿತ್ರೆಯನ್ನು ಬರೆದಿದ್ದಾನೆ. ಇವನು ವೀರಶೈವಕವಿ; ಮರುಳುಸಿದ್ದೇಶನ ಕರಜಾತನು ಇವನಿಗೆ ಪ್ರಾಸಭೂಶಣ ಎಂಬ ಹೆಸರೂ ಉಂಟು; “ಶಿವಕವಿಗೆ ಪ್ರಾಸವೇ ಭೂಷಣಗಳಾಗಿ ಕೈಕೊಂಡೆನೆನ್ನ ವೆಸರನು” ಎನ್ನುತ್ತಾನೆ. ಈ ಹೆಸರಿಗೆ ಅನುಗುಣವಾಗಿ ಇವನ ಗ್ರಂಥವೂ ಪ್ರಾಸದಿಂದ ತುಂಬಿದೆ. ಇವನು ಸುಮಾರು 165) ರಲ್ಲಿ ಇದ್ದಿರಬಹುದು. ಪೂರ್ವಕವಿಗಳಲ್ಲಿ ಬಾಣ, ಉದ್ಧಟ, ಮಲುಹಣ, ಹಲಾಯುಧ, ಕಾಳಿದಾಸ, ಕೇಶಿರಾಜ, ಭೋಜ, ರಾಮಯ್ಯ ಇವರುಗಳನ್ನು ಸ್ಮರಿಸಿದ್ದಾನೆ.
    ಇವನ ಗ್ರಂಥ
            ಗುರುಭಕ್ಸಾಂಡಾರಚರಿತ್ರೆ. 
      ಇದು ಉದ್ದಂಡಶಾಟ್ಟದಿಯಲ್ಲಿ ಬರೆದಿದೆ, ಸಂಧಿ 3, ಪದ್ಯ 273.ಇದರಲ್ಲಿ ಗುರುಭಕ್ಸಾಂಡಾರೆಂಬ ಶಿವಭಕ್ತನ ಚರಿತ್ರವು ಹೇಳಿದೆ. ಪಾಲ್ಕುರಿಕೆ ಸೋಮೇಶ್ವರನು ಆಂಧ್ರಭಾಷೆಯೊಳಗೆ ದ್ವಿಪದಿಯಲ್ಲಿ ಬರೆದಿರುವ ಗುರುಭಕ್ತಾಂಡಾರ ಚರಿತ್ರೆಯನ್ನು ಕನ್ನಡಿಸು ಎಂದು “ಬಸವಣ್ಣ ನೆನಹಿನೊಳ್ ಬಂದು ಭಸಿತವನಿಟ್ಟು ಮತಿಗೊಡಲು” ತಾನು ಈ ಗ್ರಂಥವನ್ನು ಬರೆದಂತ ಹೇಳುತ್ತಾನೆ
    ಗ್ರಂಥಾವತಾರದಲ್ಲಿ ಮರುಳುಸಿದ್ದೇಶನ ಸ್ತುತಿ ಇದೆ. ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ_ _
   ಇದು ಶ್ರೀಮತ್ಸಂಚಾಕ್ಷರೀಪಂಚಮುಖದ ಪ೦ಚಾಚಾರಪರಿಪೂರ್ಣಪರಮಜ್ಞಾ ನಪರಂಜ್ಯೋತಿಪರಮಪ್ರಕಾಶಪರಮಕಲೆಯ ಪ್ರಣವೋಂಕಾರಪ್ರಾಣಲಿಂಗಪ್ರತಿಷ್ಠಾ ಪಾಲಕಪ್ರಸಿದ್ಧಾವತಾರ ಪರಮಯೋಗೀಶ್ವರಪರಮಗುರುಮರುಳಸಿದ್ದೇಶ್ವರನ ಕಾರುಣ್ಯ 

ಪ್ರಸಾದಿ ಶಿವಕವಿ ಪೆಮ್ಮಿಸೆಟ್ಟಿಯರು ಶಿವಶರಣರ ಶ್ರೀಪಾದರೇಣುವಂ ಧರಿಸಿದ ಬಲದಿಂದೆ ಪ್ರಾಸಭೂಷಣನೆಂಬ ಪೆಸರ್ವೆತ್ತು ಪೆಟ್ಟಿ ಗುರುಭಕಾಂಡಾರಚರಿತ್ರೆ.

    ಈ ಗ್ರಂಥದಿಂದ ಕವಿಯ ವಿಷಯವಾದ ಎರಡು ಪದ್ಯಗಳನ್ನು 

ತೆಗದು ಬರೆಯುತ್ತೇವೆ_ _ _

 ಪೊಡವಿಯೊಳ್ ಜಡಿವ ಗಿರಿ ದಡದಲ್ಲಿ ನುಡಿವವರ | 
 ನೊಡನೊಡನೆ ನುಡಿವ೦ತೆ ಮೃಡನು ಎನ್ನೊಡನಿರ್ದು |