ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩೧ ಅಧ್ಯಾ. ೭.] ಏಕಾದಶಸ್ಕಂಧನು. ಬೇಕು. ನೀನು ಈ ತಿಳುವಳಿಕೆಯಲ್ಲಿಯೇ ದೃಢವಾಗಿದ್ದರೆ, ಆಗ ನಿನಗೆ ಹಿಂದೆ ಹೇಳಿದ ಭ್ರಮವೂ, ಅದರಮೂಲಕವಾದ ಸಂಸಾರವೂ ನಿವೃತ್ತವಾಗು ವುದು. ಆದರೆ ಇದುಮೊದಲು ನಾನು ಅದೇವಿಧವಾದ ತಿಳಿವಳಿಕೆಯನ್ನು ದೃಢವಾಗಿ ಹಿಡಿದಿದ್ದರೂ, ಅನಾದಿಯಾಗಿ ಅನುಸರಿಸಿ ಬರುತ್ತಿರುವ ವಿಷ ಯಾಸಕ್ತಿಯಿಂದ, ನಡುನಡುವೆ ನನಗೆ ಆ ಜ್ಞಾನವು ತಪ್ಪಿಹೋಗಬಹುದ ಲ್ಲವೆ?” ಎಂದರೆ, ಮೊದಲು ಪೃಥಿವಿ ಮೊದಲುಗೊಂಡು ಆತ್ಮ ಪರಂತವಾದ ಎಲ್ಲಾ ತತ್ವಗಳಿಗಿರುವ ಸಮಾನಧಗಳನ್ನೂ , ಅವುಳಲ್ಲಿ ತೋರುವ ಪರಸ್ಪರ ವಿಲಕ್ಷಣಧಗಳನ್ನೂ ತಿಳಿದು ಸಮಸ್ತಭೂತಗಳನ್ನೂ ತನ್ನಂತೆಯೇ ಭಾವಿ ಸುತ್ತ,ಆತ್ಮಾನುಭವದಿಂದಲೇ ಸಂತುಷ್ಟನಾಗಿರತಕ್ಕವನಿಗೆ, ಆ ತಿಳುವಳಿಕೆಗೆ ಎಂದಿಗೂ ವಿಷ್ಣು ವು ಬರಲಾರದು.ಮೇಲೆ ಹೇಳಿದಂತೆ ಆತ್ಮಾನುಭವವೆಂಬ ಆ ನಂದದಲ್ಲಿ ಮುಳುಗಿದ್ದವನಿಗೆ, ಅತ್ಯಲ್ಪಗಳಾದ ಬೇರೆ ಲೌಕಿಕ ಸುಖಗಳಲ್ಲೆ ಲ್ಯಾ ರುಚಿಯು ತಪ್ಪವುದರಿಂದ, ಪ್ರಾಪಂಚಿಕ ಸುಖದುಃಖಗಳೆರಡನ್ನೂ ಅತಿ ಕ್ರಮಿಸಿದವನಾಗುವನು. (( ಆದರೆ ಹೀಗೆ ಸುಖದುಃಖಗಳೆರಡನ್ನೂ ಲಕ್ಷಕ್ಕೆ ತಾರದವನು ಶಾಸ್ತ್ರಿಯವಾದ ವಿಧಿನಿಷೇಧಗಳನ್ನೂ ಲಕ್ಷದಲ್ಲಿಡದೆ ಯಥೇ ಛವಾಗಿ ನಡೆಯಬೇಕಷ್ಟೆ? ” ಎಂದರೆ, ಈ ವಿಚಾರವಾಗಿ ಅವನಲ್ಲಿ ಸ್ವಲ್ಪ ವಿಶೇಷವುಂಟು. ಏನೆಂದರೆ; ಅಂತವನು ಸುಖದುಃಖಗಳನ್ನು ಗಮನಿಸ ದಿದ್ದರೂ, ನಿಷಿದ್ಧಕಗಳನ್ನಾಚರಿಸುವುದರಿಂದ ಆತ್ಮಪ್ರಾಪ್ತಿಗೆ ವಿಫಾ ತವು ಬರುವುದೆಂದು ಅವುಗಳಲ್ಲಿ ದೋಷವನ್ನೆಣಿಸಿ, ಆ ನಿಷೇಧವಾಕ್ಯಗಳಿಗೆ ನುಸಾರವಾಗಿಯೇ ದುಷ್ಟಾರಗಳನ್ನು ಬಿಟ್ಟುಬಿಡುವನು. ಹಾಗೆಯೇ ವಿಹಿ ತಕಾವ್ಯಗಳನ್ನು ನಡೆಸುವುದರಿಂದ ಸ್ವರ್ಗಾದಿಸುಖಗಳು ಲಭಿಸಬಹುದೆಂಬ ಗುಣಗ್ರಹಣವಿದ್ದರೂ, ಆ ಕಾಮ್ಯಕರಗಳು, ಆಯಾಕರೆಗಳಿಗೆ ತಕ್ಕ ಅಲ್ಪ ಫಲಗಳನ್ನೇ ಕೈಗೂಡಿಸುವುದರಿಂದ, ತನ್ನ ಮುಖ್ಯೋದ್ದೇಶವಾದ ಆತ್ಮ ಪ್ರಾಪ್ತಿಗೆ ಏಷ್ಟು ಕಾರಿಗಳೆಂಬ ಭಾವದಿಂದ ಆ ಕಾರಗಳನ್ನೂ ನಡೆಸ ಲಾರನು. ಮುಖ್ಯವಾಗಿ ನಿಷಿಕರಗಳು ದೋಷೋತ್ಪಾದನದಿಂದ ಆತ್ಮ ಪ್ರಾಪ್ತಿಗೆ ವಿರೋಧಿಗಳಾಗುವಂತೆ, ವೇದವಿಹಿತಕಗಳನ್ನು ಗುಣಬುದ್ದಿ ಯಿಂದ ನಡೆಸಿದಾಗಲೂ, ಅವು ಅಲ್ಪ ಫಲಗಳನ್ನು ಕೈಗೊಡಿಸಿ ಮೋಕ್ಷಪ್ರಾ