ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*೨೪೫೮ ಶ್ರೀಮದ್ಭಾಗವತವು [ಅಧ್ಯಾ. . ವಾಗ ನಿನ್ನೊಡನೆ ಕುಳ್ಳಿರುವುದು, ಸಂಚರಿಸುವಾಗ ನಿನ್ನೊಡನೆ ಸಂಚರಿಸು. ವುದು, ನಿನ್ನೊಡನೆ ಸ್ನಾನಮಾಡುವುದು, ನೀನು ನಿಂತ ಕಡೆಯಲ್ಲಿ ನಿಲ್ಲು ವುದು, ನಿನ್ನ ಸಂಗಡಲೇ ಭೋಜನಮಾಡುವುದು, ನೀನು ಕೆಲಸಮಾಡು ವಾಗ ನಿನ್ನೊಡನೆ ಕೆಲಸಮಾಡುವುದು, ಹೀಗೆಯೇ ಬೇರೆ ಎಲ್ಲಾ ಸಮಯಗ ಇಲ್ಲಿಯೂ ನಾನು ನಿನ್ನೊಡನೆ ಕಲೆತೇಇದ್ದವನಲ್ಲವೆ? ಈಗ ನಾನು ನಿನ್ನನ್ನು ಆಗಲಿರಬಲ್ಲೆನೆ ? ಕೃಷ್ಣಾ ! ನೀನೇ ನನಗೆ ಅತ್ಮಭೂತನಾಗಿರುವಾಗ, ನಿನ ಗಿಂತಲೂ ನನಗೆ ಬೇರೆ ಪ್ರಿಯವಸ್ಸುವ ವುದುಂಟ ? ಭಕ್ತರಾದ ನಮ್ಮನ್ನು ಸೀನು ಬಿಟ್ಟು ಹೋದರೆ, ನಾವು ಹೇಗೆ ತಾನೆ ಸಹಿಸಬಲ್ಲೆವು ? ಮತ್ತು ಗಂಧಪಷ್ಟವಸ್ತ್ರಾಲಂಕಾರಾದಿಗಳಲ್ಲಿ ನೀನು ಅನುಭವಿಸಿ ಮಿಕ್ಕುದನ್ನೆ ಕೈಕೊಳ್ಳುತ್ಯ, ಸೀನು ತಿಂದು ಸಿಗಿಸಿದ ಉಷ್ಣವಸ್ಯ ಪರಮಭೋಗ್ಯ ವೆಂದು ತಿಳಿದು ಭುಜಿಸುತಿ ನಾ ವ್ರ, ಈಗೆ ನಿನ್ನ ನ್ನು ಆಗಲಿರಬಲ್ಲೆನೆ ? ಆದರೆ ಸಂಸಾರಭಯಕ್ಕಾಗಿ ನಾವು ನಿಮ್ಮೊಡನೆ ಬರುವುದಕ್ಕೆ ಬಯಸಿದೆ ಎಂದು ತಿಳಿಯಬೇಡ ! ನಿನ್ನ ಭಕ್ತರಾದ ನಿಮಗೆ ಸಂಸಾರಭಯವಲ್ಲಿ ಯದು ? ನಿನ್ನ ಅನುಗ್ರಹಬಲದಿಂದ ನಾವೂ ಈ ಸಂಸಾರಮಾಯೆಯನ್ನು ಜಯಿಸಿದವರೇ ! ನಿನ್ನನ್ನು ಬಿಟ್ಟಿರುವುದಕ್ಕೆ ಯಪಡುವವೇ ಹೊರತು, ಸಂಸಾರಕ್ಕೆ ಭಯಪಟ್ಟು ನಿನ್ನನ್ನು ನಿರ್ಬಂಧಿಸುವೆವೆಂದೆಣಿಸಬೇಡ : ಕೆಲವು ಮಹರ್ಷಿಗಳು, ಕೌಪೀನಮಾತ್ರವನ್ನು ಮುಸಿ, ದಿಗಂಬರರಾಗಿ, ಉಪ ವಾಸಾದಿಗಳಿಂದ ದೇಹವನ್ನು ದಂಡಿಸಿ, ಊರ್ಧ್ವರೇತಸ್ಸುಗಳೆನಿಸಿಕೊಂಡು, ರಾಗದ್ವೇಷಾದಿಗಳನ್ನು ನೀಗಿ, ಸನ್ಯಾಸವನ್ನು ಹಿಡಿದು, ಇಷ್ಟು ಪ್ರಯಾಸಗೆ Gಂದ ತಮ್ಮ ಪಾಪಶೇಷವೆಲ್ಲವನ್ನೂ ಕಳೆದಮೇಲೆ,ಬ್ರಹ್ಮಲೋಕವೆಂಬ ನಿನ್ನ ಸ್ಥಾನವನ್ನು ಹೊಂದಬಲ್ಲರು. ಕೆಲವರು ಬ್ರಹ್ಮಚಾರಕೇಶಗಳಿಗೆ ಗುರಿ ಯಾಗಿ ಸಂಸಾರವನ್ನು ದಾಟುವರು. ನಾವಾದರೋ, ಸಂಸಾರದಲ್ಲಿ ಕಲ್ಯಾರ್ಜಿತಗಳಾದ ಸುಖದುಃಖಾಹಿಗಳಲ್ಲಿ ಬಿದ್ದು ಕಳವಳಿಸತಕ್ಕರಾ ಗಿದ್ದರೂ, ನಿನ್ನ ಮತ್ತು ನಿನ್ನ ಭಕ್ತರ ಸಹವಾಸಮಾತ್ರದಿಂದಲೇ ಅನಾ ಯಾಸವಾಗಿ ಸಂಸಾರಸಮುದ್ರವನ್ನು ದಾಟುತ್ತಿರುವೆವು. ನಿನ್ನ ನಡೆ, ನುಡಿ, ನಗೆ, ನೋಟ, ಮೊದಲಾದುವುಗಳನ್ನೂ, ಇತರಮನುಷ್ಯಲೀಲೆಗೆ