ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨Va೬ ಶ್ರೀಮದ್ಭಾಗವತವು ಅಧ್ಯಾ, ೪. ಪಟ್ಟು ಲೆಕ್ಕ ಮಾಡಿ ತಿಳಿಯಬಹುದೇಹೊರತು,ಆ ಭಗವಂತನ ಗುಣಗಳನ್ನೂ ಆದ್ಭುತಕಾರಗಳನ್ನೂ ಎಷ್ಟು ಮಾತ್ರವೂ ಎಣಿಸುವುದಕ್ಕೆ ಸಾಧ್ಯವಲ್ಲ. ಆದಿದೇವವಾದ ಆ ನಾರಾಯಣನು,ಮೊದಲು ಸೃಥಿವಿ ಮೊದಲಾದ ಭೂತ ಗಳನ್ನೂ , ಇತರತತ್ವಗಳನ್ನೂ ವಿರಾಟ್" ಎಂಬ ಬ್ರಹ್ಮಾಂಡರೂಪವಾಗಿ ಏರ್ಪಡಿಸಿ, ತನ್ನ ಅಂಶದಿಂದ ತಾನೂ ಅದರಲ್ಲಿ ಧಾರಕವಾಗಿ ಪ್ರವೇತಿಸಿ, ಆಗ ಎರಾಟ್ಟುರುಷನೆಂಬ ನಾಮವನ್ನು ಹೊಂದಿದನು ಇದೇ ಆ ಭಗವಂತ ನ ಮೊದಲನೆಯ ಅವತಾರವು. ಈ ಮೂರುಲೋಕಗಳೆ ಆ ವಿರಾರು ಹನಿಗೆ ದೇಹವು. ಅವನ ಇಂದ್ರಿಯಗಳಿಂದ ಸಮಸ್ಯಜೀವರ ಜ್ಞಾನಕ ಹೀಂದ್ರಿಯಗಳೆಲ್ಲವೂ ಉಂಟಾದುವು.ಅವನ ಬ್ಯಾನವು ತನಗೆ ತಾನೇ ಪ್ರಕಾ ತಿಸತಕ್ಕುದೇ ಹೊರತು, ಇಂದ್ರಿಯಗಳ ಸಹಾಯವನ್ನ ಪೆಕಿಸತಕ್ಕುದಲ್ಲ. ಆ ವನ ನಿಶ್ಯಾಸರೂಪವಾದ ವಾಯುವೇ ಸಮಸ್ಯಪ್ರಾಣಿಗಳ ಬಲಕ್ಕೂ, ಕೂ, ಚೇಷ್ಟೆಗಳಿಗೂ ಕಾರಣವಾಗಿರುವುದು. ಆತನೇ ರಜಸ್ಯತ್ವ ತಮೋ ಗುಣಗಳಿಂದ ಈ ಪ್ರಪಂಚದ ಸೃಷ್ಟಿಸ್ಥಿತಿಲಯಗಳನ್ನು ನಿರ್ವಹಿಸತಕ್ಕವನು. ಆದುದರಿಂದ ಆದಿಕರ್ತನು. ಆತನೇ ಈ ಪ್ರಪಂಚದ ಸೃಷ್ಟಿಕಾರಕ್ಕಾಗಿ ಮೊ ದಲು ರಜೋಗುಣವನ್ನವಲಂಬಿಸಿ ಚತಮ್ಮ ಖನಾದನು. ಆತನೇ ತಮೋಗು ಣದಿಂದ ರುದ್ರನಾಗಿ ಜಗತ್ತನ್ನು ಲಯಹೊಂದಿಸುವನು. ಅವನೇ ಯಜ್ಞ ಪತಿಯೂ, ವರ್ಣಾಶ್ರಮಧಮ್ಮ"ಳಿ' ನಿಯಾಮಕನೂ ಆದ ಏಷ್ಟವಾದುದ ರಿಂದ,ತನ್ನ ಸಹಜವಾದ ಶುದ್ಧಸತ್ವಗುಣದಿಂದಲೇ ಸ್ಥಿತಿಯನ್ನು ಸಿಶ್ವಹಿಸುವ ನು. ಆದುದರಿಂದ ಆ ವಿಷ್ಣುವೇ ಆದಿಪುರುಷನೆನಿಸಿಕೊಂಡು, ಜಗತ್ತಿನ ಸೃ ಸ್ಥಿತಿಲಯಗಳಿಗೆ ತಾನೇ ಕಾರಣಭೂತನಾಗಿರುವನು. ಈ ವಿರಾಡೂಪ `ದಿಂದಾಚೆಗೆ ನರನಾರಾಯಣಾವತಾರವು.ಇದರಲ್ಲಿ ಭಗವಂತನು ಧರನೆಂಬ ವನಿಗೆ ದಕ್ಷಪಿಯಾದ ಮೂರ್ತಿಯೆಂಬವಳಲ್ಲಿ, ನರನಾರಾಯಣರೆಂಬ ಎರ ಡುರೂಪಗಳಿಂದ ಅವತರಿಸಿ, ನಾರದಾದಿಮಹರ್ಷಿಗಳಿಗೆ ಕರ ನಿವೃತ್ತಿಗೆ ಕಾರಣವೆನಿಸಿದ ಜ್ಞಾನಯೋಗವನ್ನು ಉಪದೇಶಿಸಿ, ಈಗಲೂಬದರಿಕಾಶ್ರಮ ದಲ್ಲಿ ಅನೇಕ ಮಹರ್ಷಿಗಳಿಂದ ಸೇವಿಸಲ್ಪಡುತ್ತಿರುವನು. ಹೀಗೆ ಭಗವಂತನು ನರನಾರಾಯಣರೂಪದಿಂದ ಅತ್ಯಂತಶಾಂತನಾಗಿ ತಪಸ್ಸಿನಲ್ಲಿರುವುದನ್ನು