ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶ್ರೀಮದ್ಭಾಗವತರು (ಅಧ್ಯಾ. ೩. ದನ್ನು ಹೇಳಬೇಕಾದುದೇನು ? ಆ ಪರಮಾತ್ಮಸ್ವರೂಪವು ಮಾಯ ಪ್ರಯುಕ್ತಗಳಾದ ನಾನಾಬಗೆಯ ಕುತರ್ಕಗಳಿಗಾಗಲಿ, ಸಂಕಲ್ಪವಿಕಲ್ಲಾ ಶ್ರಯವಾದ ಮನಸ್ಸಿಗಾಗಲಿ ಗೋಚರಿಸತಕ್ಕುದಲ್ಲ' ಆ ಮಾಯಾಮೋಹ ವನ್ನೂ, ಸಂಕಲ್ಪವಿಕಾರ ವಿಕಾರಗಳನ್ನೂ ಸೀಗಿ, ಯೋಗದಿಂದ ಪು ಶುದ್ಧವಾದ ಮನಸ್ಸಿಗೇ ಗೋಚರವಾ.ತಕ್ಕದು. ಮತ್ತು ಆ ಪರಮಾತ್ಮ ನಲ್ಲಿ ಕರ ಸಂಬಂಧವಾಗಲಿ, ಕರ ಮೂಲಕವಾದ ಶರೀರಸಂಬಂಧವಾಗಲಿ ಇರುವುದಿಲ್ಲ ಕರಗಳಿಂದಲ, ಕರಕಲ್ಪಿತಗಳಾದ ಶರೀರಗಳಿಂದಲೂ ಅನುಭವಿಸಬೇಕಾದ ಸುಖದುಃಖಾದಿಫಲಗಳೂ ಅವನಿಗಿಲ್ಲ. ದೇವಮನು ಹ್ಯಾವ್ಯವಹಾರಗಳೂ ಅವನಲ್ಲಿ ವರ್ತಿಸಲಾರವು ಪರಮಾತ್ಮಸ್ವರೂ ಪವು ಈ ವಿಧವಾದುದು. ಹಾಗಿಲ್ಲದೆ ಜೀವನು ಸತ್ಕಾರಿಗುಣಗಳಿಗೆ ವಶ್ಯನಾ ಗಿದ್ದರೂ, ಆ ಪರಮಾತ್ಮ ಸ್ವರೂಪವನ್ನು ಮನನಮಾಡುತ್ತಿರುವುದರಿಂದ, ಬಾಧ್ಯಬಾಧಕರೂಪವಾದ ಗುಣತ್ರಯವ್ಯಾಪಾರಗಳೊ೦ದೂ ತನ್ನನ ಹೊ ದಂತೆ, ಪ್ರಕೃತಿಸಂಬಂಧವನ್ನು ನೀಗಿ, ಹಸಿವು, ಬಾಯಾರಿಕೆ,ಮೊದಲಾದ ಷಡೂರಿಗಳ ತಪ್ಪಿಸಿಕೊಂಡು, ಸಮಾ ಹಿತಚಿತ್ತನಾಗಿರಬಹುದು ಸಮಾಧಿಸಿಷ್ಠರಾದ ಯೋಗಿಗಳು, ಬ್ರಹ್ಮನಿಗಿಂತ ಬೇರೆಯಾದ ಚೇತನಾ ಚೇತನವಸ್ತುಗಳ ಸ್ವರೂಪವನ್ನು ಪರಿಶೀಲಿಸಿ, ಅದು ಆ ಬ್ರಹ್ಮನಂತಿಲ್ಲ ವೆಂಬುದನ್ನು ತಿಳಿದು, ರಾಗದ್ವೇಷದೊಷಗಳನ್ನು ನೀಗಿ, ಅನನ್ಯಾ ಪೇಕ್ಷರಾಗಿ, ಯಾವ ಪರಮಾತ್ಮ ಸ್ವರೂಪವೊಂದನ್ನೇ ಅನವರತವೂ ಸೃದ ಯದಲ್ಲಿಟ್ಟು ಧ್ಯಸಿಸುವರೋ, ಅದು ಸತ್ತಮವಾದ ಆ ವೈಷ್ಣವ ಸ್ವರೂಪವೇ ! ಯಾರಿಗೆ ತಮ್ಮ ದೇಹದಲ್ಲಿಯೂ, ಮನೆಮಂದಿಮಕ್ಕಳಲ್ಲಿಯೂ, ತಾನು, ತನ್ನದೆಂಬ ಅಹಂಕಾರಮಮಕಾರಗಳಿಲ್ಲವೋ, ಅಂತವರೇ ಆ ಶ್ರೀವಿಷ್ಣುವಿನ ಪರಸ್ವರೂಪವನ್ನು ಸಾಕ್ಷಾತ್ಕರಿಸಬಲ್ಲರು. ಆದುದರಿಂದ ಓvಿನಕಾದಿಗಳೆ : ಬ್ರಹ್ಮಪ್ರಾಪ್ತಿಯಲ್ಲಿ ಉದ್ದೇಶವುಳ್ಳವನು, ದೇಹಾಭಿ ಮಾನವನ್ನು ತೊರೆದು, ಮತ್ತೊಬ್ಬರು ತನ್ನನ್ನು ಪರುಷವಾಕ್ಯದಿಂದ ನಿಂದಿಸಿದರೂ ಸಹಿಸಿಕೊಳ್ಳಬೇಕು. ಯಾರನ್ನೂ ಅವಮಾನಪಡಿಸಬಾರದು. ಈ ನಶ್ವರವಾದ ದೇಹವನ್ನು ತನ್ನ ದೆಂದು ಅಭಿಮಾನಿಸಿ ಮತ್ತೊಬ್ಬರೊಡನೆ