ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೦ ಶ್ರೀಮದ್ಭಾಗವತವು ಅಧ್ಯಾ, ೨೦, ಥಿವಿ ಮೊದಲಾಗಿ ಪ್ರಕೃತಿಯವರೆಗೆ ವಿಲೋಮಕ್ರಮದಿಂದ ಎಲ್ಲಾವ ಸ್ತುಗಳ ಲಯಕ್ರಮವನ್ನೂ, ಮನುಷ್ಯನು, ತನ್ನ ಮನಸ್ಸಿನ ಕಲ್ಮಷಗಳೆಲ್ಲವೂ ನೀಗುವವರೆಗೆ ಚಿಂತಿಸುತ್ತಿರಬೇಕು.ಹೀಗೆ ಪ್ರಪಂಚದ ಸೃಷ್ಟಿಪ್ರಳಯಗಳ ನ್ನು ಪುನಃಪುನಃ ಚಿಂತಿಸುವುದರಿಂದ, ಸಂಸಾರದಲ್ಲಿ ನಿಲ್ವೇದವೂ, ಅದರಿಂದ ವಿರಕ್ತಿಯ ಹುಟ್ಟುವುದು. ಅಂತಹ ವಿರಕ್ತಿಯು ಹುಟ್ಟಿದಮೇಲೆ, ಮನಸ್ಸು ಹಿಂದಿನಂತೆ ಶಬ್ದಾದಿವಿಷಯಗಳಕಡೆಗೆ ಪ್ರವೇಶಿಸಲಾರದು. ಮನಸ್ಸಿನ ದುಷ್ಟವರ್ತನೆಯನ್ನು ನೀಗಿಸಬೇಕಾದರೆ, ಯಮನಿಯಮಾಡಿ ಯೋಗಮಾರ್ಗಗಳನ್ನು ಹಿಡಿಯುವುದೊಂದು, ತತ್ವಜ್ಞಾನವೊಂದು, ನನ್ನ ಉಪಾಸನೆಯೊಂದು, ಈ ಮೂರರಿಂದಲ್ಲದೆ ಬೇರೆಯಾವ ಉಪಾಯದಿಂದ ಲೂ ಸಾಧ್ಯವಲ್ಲ! ಯೋಗಿಯು ಪ್ರಮಾದವಶದಿಂದ ಒಂದುವೇಳೆ ನಿಷಿದ್ಧ ಕರಗಳನ್ನು ನಡೆಸಿದರೂ, ಭಗವದ್ಯಾನರೂಪವಾದ ಯೋಗದಿಂದಲೇ ಪಾಪವನ್ನು ನೀಗಿಸಿಕೊಳ್ಳಬೇಕೇ ಹೊರತು, ಬೇರೆ ವಿಧವಾದ ಕೃಛಾದಿವ್ರ ತಾಚರಣೆಗಳಿಂದ ಅದನ್ನು ದಹಿಸಲು ಸಾಧ್ಯವಲ್ಲ. ಉದ್ದವಾ! ಹೀಗೆ ಆ ಯಾ ಅಧಿಕಾರಿಗಳ ಸ್ವಭಾವಕ್ಕೆ ತಕ್ಕಂತೆ ಪುರುಷಾರಸಿದ್ಧಿಗೆ ಬೇರೆಬೇರೆ ಸಾ ಧನಗಳೇರ್ಪಟ್ಟಿರುವುವು. ಆದರೆ ಆಯಾ ಅಧಿಕಾರಿಗಳು ಅವಲಂಬಿಸತಕ್ಕ ಮಾರ್ಗಗಳಲ್ಲಿ ಗುಣದೋಷನಿರ್ಣಯವು ಹೇಗೆಂದು ಕೇಳಿದೆಯಲ್ಲವೆ ? ತನ್ನ ತನ್ನ ವರ್ಣಾಶ್ರಮಾನುಗುಣವಾದ ಅಧಿಕಾರಧ್ರದಲ್ಲಿ ನಿಷ್ಠೆಯಿಂದಿರುವು ದೇ ಗುಣವು. ತನಗೆ ಅಧಿಕಾರವಿಲ್ಲದ ಇತರವರ್ಣಾಶ್ರಮಧರಗಳಲ್ಲಿ ಪ್ರವ ರ್ತಿಸುವುದೇ ದೋಷವು, ಗುಣದೋಷಗಳೆಂಬಿವೆರಡಕ್ಕೂ ಇದೇ ಸ್ವರೂಪ ನಿರ್ಣಯವು. ನಾನು ಹಿಂದೆ ಸುಖದುಃಖಸಾಧನಗಳಾದ ಕರ್ಮಗಳಲ್ಲಿ ಗುಣ ದೋಷಗಳನ್ನೆಣಿಸುವುದೇ ದೋಷವೆಂದೂ,ಅವೆರರಲ್ಲಿಯೂ ದೋಷದೃಷ್ಟಿ ಯಿಂದ ತ್ಯಜಿಸುವುದೇ ಗುಣವೆಂದೂ ಹೇಳಿದುದು, ಮೋಕ್ಷಾಪೇಕ್ಷೆಯುಳ್ಳ ವರಿಗಾಗಿಯೇಹೊರತು ಭೋಗಾಪೇಕ್ಷೆಯುಳ್ಳವರಿಗಲ್ಲ. ಏಕೆಂದರೆ, ಮು ಮುಕ್ಷುಗಳು ಸ್ವಭಾವದಿಂದ ತಮಗೆ ಅಶುದ್ಧಿಹೇತುಗಳಾದ ಕಾಮ್ಯಕರ ಗಳಲ್ಲಿಯೂ, ಸಂಸರ್ಗಗಳಲ್ಲಿಯೂ ಗುಣದೋಷಭಾವನೆಯನ್ನಿಟ್ಟು ಅವು ಗಳಲ್ಲಿ ಪ್ರವರ್ತಿಸಬಾರದೆಂಬುದಕ್ಕಾಗಿಯೇ ನಾನು ಅವಿಧವಾದ ಗುಣದೋ