ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೩೦] ಏಕಾದಶ ಸ್ಕಂಧವು. ೨೬೩೩ ಯೋಗವನ್ನು ಹಿಡಿದು, ಮನುಷ್ಯ ಶರೀರದಲ್ಲಿ ಅದುವರೆಗೆ ನೆಲೆಸಿದ್ದ ತನ್ನ ಸಂಕರ್ಷಣಾಂಶವನ್ನು, ನಿಜಸ್ವರೂಪವುಳ್ಳ ಸಂಕರ್ಷಣನೊಡನೆ ಐಕ್ಯ ಹೊಂದಿಸಿದಂತೆ ಧ್ಯಾನಿಸುತ್ತ,ತಾನು ಅಂಗೀಕರಿಸಿದ್ದ ಮನುಷ್ಯರೂಪವನ್ನು ಪರಿತ್ಯಜಿಸಿದನು. ಹೀಗೆ ತನ್ನಣ್ಣನಾದ ಬಲರಾಮನು ಮೊದಲಿನಂತೆ ತನ್ನ ಅಸಾಧಾರಣಸ್ವರೂಪವನ್ನು ಹೊಂದಿದುದನ್ನು ತಿಳಿದು, ಭಗವಂತನಾದ ಶ್ರೀಕೃಷ್ಣನು, ಸಮೀಪದಲ್ಲಿದ್ದ ಒಂದಾನೊಂದು ಆಲದಮರದ ಕೆಳಕ್ಕೆ ಬಂದು, ಅಲ್ಲಿನ ಬರೀ ನೆಲದಮೇಲೆ ಮೌನದಿಂದ ಕುಳಿತನು. ಆಗ ಅವನು, ಚತುರ್ಭುಜಗಳಿಂದ ಕೂಡಿದ ತನ್ನ ಅಸಾಧಾರಣದಿವ್ಯರೂಪದಿಂದೊಪ್ಪ ತಿದ್ದನು. ಆಗ ಅವನ ದಿವ್ಯತೇಜಸ್ಸು, ಹೊಗೆಯಿಲ್ಲದ ಬೆಂಕಿಯಂತೆ, ನಿಷ್ಠ qಷವಾದ ಕಾಂತಿವಿಶೇಷದಿಂದ ದಿಕ್ಕುಗಳೆಲ್ಲವನ್ನೂ ಬೆಳಗುತಿದ್ದಿತು. ಮತ್ತು ಆಗ ಅವನಿಗೆ ಮೇಷುದಂತೆ ಶ್ಯಾಮಲವಾದ ಮೈ! ಎದೆಯಲ್ಲಿ ಶ್ರೀ ವತ್ವವೆಂಬ ಮಚ್ಚೆ ಯ ಗುರುತು ! ಪುಟಹಾಕಿದ ಚಿನ್ನದಂತೆ ಹೊಳೆಯುವ ಎರಡು ಪಟ್ಟಿ ಮಡಿ (ಪೀತಾಂಬರ) ಗಳು ! ಮಂಗಳಕರವಾದ ಮೂರ್ತಿ ! ಅರಳಿದ ಕಮಲದಂತೆ ಮಂದಹಾಸವಿಶಿಷ್ಟವಾದ ಮುಖದ ಸೊಗಸು ! ಆ ಮುಖಕ್ಕೆ ರೇಖೆಕಟ್ಟಿದಂತೆ ಶೋಭಿಸುವ ಕಪ್ಪಾದ ಮುಂಗುರುಳುಗಳು ! ಪುಂಡರೀಕದಂತೆ ಮನೋಹರವಾದ ಕಣ್ಣುಗಳು! ಕಿವಿಯಲ್ಲಿ ಮಕರಕುಂಡಲ ಗಳು! ಕಿರೀಟ, ಕೈಬಳೆ, ಬಂದಿ,ಉಡದಾರ, ತೋಳ್ಳಳೆ, ಹಾರ, ಕಾಲಂದುಗೆ, ಕೈಯುಂಗುರ,ಕೌಸ್ತುಭಮಣಿ, ಮುಂತಾದ ಸಾಭರಣಗಳಿಂದಲೂ ಝಗ ಝಗಿಸುವ ದಿವ್ಯಮೂರ್ತಿ ! ಬ್ರಹ್ಮಸೂತ್ರ(ಜನಿವಾರ)ದಿಂದಲೂ, ವನಮಾ ಲಿಕೆಯಿಂದಲೂ ಶೋಭಿತವಾದ ಕೊರಲು! ಇಂತಹ ದಿವ್ಯಲಕ್ಷಣಗಳಿಂ ದೊಪ್ಪತ್ತಿರುವ ಆ ಶ್ರೀಕೃಷ್ಣನ ಸುತ್ತಲೂ, ಸುದರ್ಶನ, ಪಾಂಚಜ ನ್ಯಗಳೇ ಮೊದಲಾದ ಪಂಚಾಯುಧಗಳೂ ಪುರುಷಾಕಾರದಿಂದ ನಿಂತು ಸೇವೆಮಾಡುತ್ತಿರುವುವು. ಈ ವಿಧವಾದ ದಿವ್ಯವೈಭವದೊಡನೆ ಶ್ರೀ ಕೃಷ್ಣನು, ಆಲದ ಮರದ ಕಳಗೆ,ಕಮಲದಂತೆ ಸುಂದರವಾದ ತನ್ನ ಬಲದ ಕಾಲನ್ನು ಎಡದ ತೊಡೆಯಮೇಲಿಟ್ಟು ಮೌನದಿಂದ ಕುಳಿತಿದ್ದನು. ಆ ಕಾಲಕ್ಕೆ ಸರಿಯಾಗಿ, ಜರೆಯೆಂಬ ಒಬ್ಬಾನೊಬ್ಬ ಬೇಡನು ಬೇಟೆಯಾಡುತ್ತ