ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

984 ಶ್ರೀಮದ್ಭಾಗವತವು [ಅಧ್ಯಾ, ೧೩, ಅದಕ್ಕಾ ಕೃಷ್ಣನು ಉದ್ದವಾ ಹಿಂದೆ ಕುರುಕ್ಷೇತ್ರದ ಯುದ್ಧಾ ರಂಭದಲ್ಲಿ, ಅರ್ಜುನನು ಕೇವಲರಾಜ್ಯದಾಸೆಗಾಗಿ ತಾನು ತನ್ನ ಜಾತಿಗೆ ಳನ್ನು ಕೊಲ್ಲುವುದು ಪಾಪಹೇತುವೆಂದೆಣಿಸಿ, ಯಾವ ಕಾರ ತಾನು ಅಸ್ವತಂತ್ರನೆಂಬುದನ್ನು ತಿಳಿಯದೆ, ತಾನೇ ಕೊಲ್ಲತಕ್ಕವನೆಂದೂ, ಶತ್ರು ಗಳು ತನ್ನಿಂದಲೇ ಕೊಲ್ಲಲ್ಪಡತಕ್ಕವರೆಂದೂ ತಪ್ಪು ತಿಳುವಳಿಕೆಯುಳ್ಳವನಾಗಿ ಯುದ್ಧ ಮಾಡುವುದಕ್ಕೆ ಹಿಂಜರಿದನು. ಆಗ ನಾನು ಅವಗೆ ಅನೇಕತತ್ವ ಬೋಧೆಗಳನ್ನು ಮಾಡತೊಡಗಿದನು ಈಗ ನೀವು ಪ್ರಶ್ನೆ ಮಾಡುವಂತೆಯೇ ಅವನೂ ಆಗ ನನ್ನ ವಿಭೂತಿಗಳಾವುವೆಂಬುದನ್ನು ಕೇಳಿದನು. ನಾನು ಆ ವಿಚಾರಗಳೆಲ್ಲವನ್ನೂ ಅವಗೆ ವಿವರವಾಗಿ ತಿಳಿಸಿ ಬೋಧಿಸಿದಮೇಲೆ ಯುದ್ಯುಕ್ತನಾದನು. ಆಗ ನಾನು ಹೇಳಿದ ವಿಷಯಗಳನ್ನೆ ಈಗಲೂ ಸಿನಗೆ ತಿಳಿಸುವೆನು ಕೇಳು ! ಸಮಸ್ತಭೂತಗಳಿಗೂ ಅ೦ತರಾತ್ಮನಾಗಿ, ಅವುಗಳನ್ನು ಆಯಾ ಕಾಣ್ಯಗಳಲ್ಲಿ ನಿಯಮಿಸತಕ್ಕವನು ನಾಸೀಹೊರತು, ಬೇರೆ ಯಾರಿಗೂ ಯಾವವಿಧದಲ್ಲಿಯ ಸ್ವಾತಂತ್ರ್ಯವಿಲ್ಲ. ಸಮಸ್ಯಭೂತಗ ಳಿಗೂ ನಾನು ಸುಕೃತಾಗಿಯೂ ಇರುವೆನು. ಎಲ್ಲವೂ ಮಲಾತ್ಮಕವಾದುದ ರಿಂದ, ಸಮಸ್ಯಭೂತಗಳೂ ನಾನೇ ಎಂದು ತಿಳಿ : ಎಲ್ಲಾ ವಸ್ತುಗಳ ಉತ್ಪ ತಿನಾಶಗಳೆಲ್ಲವೂ ನನ್ನಿಂದಲೇ ನಡೆಯುವುವು. ಉತ್ತಮಗತಿಯುಳ್ಳವ ರಲ್ಲಿ ನಾನೇ ಗತಿರೂಪನಾಗಿಯೂ, ಕೊಲ್ಲತಕ್ಕ ನಲ್ಲಿ ನಾನೇ ಕಾಲರೂಪ ನಾಗಿಯೂ ಇರುವನು ಸತ್ಸಾಹಿಗುಣಗಳ ಸಮ್ಯವೂ ನಾನೆ. ' ಈ ಗಣ ಗಳಲ್ಲಿ ಯಾರಿಗೆ ಯಾವುದು ಸ್ವಭಾವಸಿದ್ಧವಾದುದೋ, ಗಣರೂಪದಿಂದಿ ರುವವನೂ ನಾನೇ' ಈ ಗುಣಪರಿಣ: ಮರೂಪಗಳಾದ ಸಮಸ್ತ ವಸ್ತುಗ ಳಿಗೂ ಸೂತ್ರರೂಪವಾದ ಮಹತ್ವವೂ ನಾನೇ ! ಮಹಾಸಿಸಿಕೊಂಡ ವಸ್ತುಗಳಲ್ಲಿರುವ ಮಹತ್ವವೆಂಬ ಗುಣವೂ ನಾಸಿ : ಸೂಕ್ಷವಸ್ತುಗಳ ಕ್ಲಿಯೂ ಅತಿಸೂಕ್ಷ್ಮವಾದ ಜೀವನೂ ನಾನೇ' ದುರ್ಜಯರಾದವರಲ್ಲಿ ಅವರ ಮನೋರೂಪಹಿಂದಿರುವವನೂ ನಾನೇ : ದೇವತೆಗಳಲ್ಲಿ ಹಿರಣ್ಯ ಗರ್ಭನೂ, ಮಂತ್ರಗಳಲ್ಲಿ ಮೂರಕ್ಷರಗಳುಳ್ಳ ಪ್ರಣವಮಂತ್ರವೂ ನಾನಾ ಗಿರುವೆನು. ಅಕ್ಷರಗಳಲ್ಲಿ ಆಕಾರವೂ, ವೇದಗಳಲ್ಲಿ ಗಾಯತ್ರಿಯೂ ನಾನಾ