ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wi೨ ಶ್ರೀಮದ್ಭಾಗವತನ (ಅಧ್ಯಾ, ೨೫. ಪರಿಶುದ್ಧರಾಗಬಹುದು. ಹೀಗೆ ಯಾರು ನನ್ನ ಕಥೆಗಳನ್ನು ಶ್ರದ್ಧೆ ಯಿಂ ದಲೂ, ಆದರದಿಂದಲೂ ಕೇಳುತ್ತ ಆಗಾಗ ಅವುಗಳನ್ನು ಕೀರ್ತಿ ಸುತ್ತ, ನನ್ನ ಆರಾಧನದಲ್ಲಿ ನಿರತರಾಗಿರುವರೋ ಅವರಿಗೆ ತಾನಾಗಿ ನನ್ನಲ್ಲಿ ಭಕ್ತಿಯು ಹುಟ್ಟುವುದು, ಅನಂತಕಲ್ಯಾಣಗುಣಪರಿಪೂರ್ಣ ನಾಗಿಯೂ, ಜ್ಞಾನಾನಂದಸ್ವರೂಪನಾಗಿಯೂ ಇರುವ ಪರಬ್ರಹ್ಮನೆನಿಸಿ ಕೊಂಡ ನನ್ನಲ್ಲಿ ಭಕ್ತಿಯನ್ನು ಪಡೆದ ಸಾಧುಗಳಿಗೆ ಹೊಂದಬೇಕಾದ ಬೇರೆ ಪುರುಷಾರವೇನೂ ಇರುವುದಿಲ್ಲ. ಆಗ್ನಿ ಯನ್ನಾಶ್ರಯಿಸಿದವನಿಗೆ ಶೀತ ಭಯವಾಗಲಿ, ಕತ್ತಲೆಯ ಭಯವಾಗಲಿ ಇಲ್ಲದಿರುವಂತೆ, ಸಾಧುಗಳನ್ನಾ ಶ್ರ ಯಿಸಿದವರಿಗೆ, ಅಜ್ಞಾನದಿಂದಾಗಲಿ, ಸಂಸಾರದಿಂದಾಗಲಿ ಭಯವಿಲ್ಲ ! ಭಯಂಕರವಾದ ಸಂಸಾರಸಮುದ್ರದಲ್ಲಿ ಮುಳುಗಿ ತೇಲುತ್ತಿರುವ ವರಿಗೆ, ಸಾಧುಗಳು ದೃಢವಾದ ನಾವೆಯಂತಿರುವರು. ಪ್ರಾಣಿಗಳಿಗೆ ಅನ್ನವು ಹೇಗೆ ಜೀವನಾಧಾರವೋ, ಹಾಗೆ ತಾಪತ್ರಯಪೀಡಿತ ರದವರಿಗೆ ಸರೇಶ್ವರನಾದ ನಾನೇ ಉದ್ಧಾರಕನು, ಪರಲೋಕದಲ್ಲಿ ಧರವೂ, ಇಹಲೋಕದಲ್ಲಿ ಧನವೂ, ಮನುಷ್ಯರಿಗೆ ರಕ್ಷಕವಾಗಿರುವಂತೆ, ಸಂಸಾರಭೀತರಿಗೆ ಸಾಧುಗಳೇ ರಕ್ಷಕರು. ಪ್ರಾಣಿಗಳಿಗೆ ಸೂರೈನು ಹೊರ ಗಿನ ಕಣ್ಣಗಳನ್ನು ಕೊಡುವನು. ಸಾಧುಗಳಾದರೋ ಜ್ಞಾನಾತ್ಮಕವಾದ ಒಳಗಿನ ಕಣ್ಣುಗಳ ಕೂಡುವರು. ಆದುದರಿಂದ ಸಜ್ಜನರು ದೇವತೆಗೆ ಳಂತೆ ಪೂಜ್ಯರೂ, ಬಂಧುಗಳಂತೆ ಉಪಕಾರಕರೂ ಆಗಿರುವರು. ಅಂತವರೇ ನನಗೆ ಆತ್ಮಭೂತರಾದುದರಿಂದ ಅವರನ್ನು ನಾನೆಂದೇ ತಿಳಿ ! ಉದ್ಯವಾ! ಹೀಗೆ ವೀರಸೇನರಾಜನ ಮಗನಾದ ಪುರೂರವನು, ಸಿಸಂಗದಲ್ಲಿದ್ದು, ತನ್ನ ವಿವೇಕದಿಂದ ತಾನೇ ಅದನ್ನು ಬಿಡಿಸಿಕೊಂಡು, ಆತ್ಮ ಧ್ಯಾನಪರನಾಗಿ, ಭೂಮಿಯನ್ನು ಸಂಚರಿಸುತ್ತಿದ್ದನು. ಇದು ಇಪ್ಪತ್ತಾರನೆಯ ಅಧ್ಯಾಯವು. w+ ಭಗವದಾರಾಧನಕ್ರಮನ, we ಉದ್ದವನು ಪ್ರಶ್ನೆ ಮಾಡುವನು. “ಓ ಪ್ರಭ ! ನಿನ್ನ ಆರಾಧನ ರೂಪವಾದ ಕಠಯೋಗಿ ವನ್ನು ನನಗೆ ವಿವರಿಸಿ ತಿಳಿಸಬೇಕು. ನಿನ್ನ ಭಕ್ತರು