ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಅಧ್ಯಾ, ೧೭.) ವಿದರ೦ಧವು. ದೂರವಾಗಿ ನಿಂತಿರಬೇಕು. ಬ್ರಹ್ಮಚಾರಿಯು ಈ ವಿಧವಾದ ವ್ರತವನ್ನು ಹಿಡಿದು, ಭೋಗಾಪೇಕ್ಷೆಯನ್ನು ಬಿಟ್ಟು, ತನ್ನ ವೇದಾಧ್ಯಯನವು ಮುಗಿ ಯುವವರೆಗೂ ಗುರುಕುಲದಲ್ಲಿಯೇ ವಾಸಮಾಡುತ್ತಿರಬೇಕು. ಉದ್ಯವಾ! ಈ ಬ್ರಹ್ಮಚಯ್ಯಾಶ್ರಮದಲ್ಲಿ ನಡೆಸತಕ್ಕ ಅಧ್ಯಯನಾದಿವ್ರತಗಳಿಗೆ ಬ್ರಹ್ಮ ಲೋಕಪ್ರಾಪ್ತಿಯೇ ಫಲವೆನಿಸಿರುವುದು. ಬ್ರಹ್ಮಚಾರಿಯು ಆ ಫಲವನ್ನೆ. ಅಪೇಕ್ಷಿಸತಕ್ಕವನಾಗಿದ್ದರೆ, ಸಾಯುವವರೆಗೂ ಇದೇವ್ರತವನ್ನು ಹಿಡಿದು, ತನ್ನ ದೇಹವನ್ನು ಆಚಾರನಿಗೆ ಅಧೀನವಾಗಿ ಮಾಡಬೇಕು. ಅಂತವನೇ ವೈಷ್ಠಿಕ ಬ್ರಹ್ಮಚಾರಿಯೆನಿಸುವನು. ಇಂತಹ ನೈಷ್ಠಿಕಬ್ರಹ್ಮಚಾರಿಯು ಅಗ್ನಿ ಯಲ್ಲಿಯೂ, ಗುರುವಿನಲ್ಲಿಯೂ, ತನ್ನ ಆತ್ಮ ನಲ್ಲಿಯೂ, ಇತರ ಸಮಸ್ತ ಭೂತಗಳಲ್ಲಿಯೂ ನನ್ನನ್ನು ಅಂತರಾತ್ಮನೆಂದು ತಿಳಿದು, ಭೇದಬುದ್ಧಿಯಿ ಅದೆ ಉಪಾಸಿಸುತ್ತಬಂದರೆ, ಅದರಿಂದ ಸರಪಾಪವಿಮುಕ್ತನಾಗಿ, ಬ್ರಹ್ಮ ವರ್ಚಸ್ಸಿನಿಂದ ಬೆಳಗುವನು.ಇಂತವನು ಸ್ತ್ರೀಯರನ್ನು ಕಣ್ಣೆತ್ತಿಯೂ ನೋ ಡಬಾರದು. ಅವರನ್ನು ಯಾವಕಾರಣದಿಂದಲೂ ಮುಟ್ಟಬಾರದು. ಅವರೊ ಡನೆ ಸಂಭಾಷಣವನ್ನಾಗಲಿ, ಪರಿಹಾಸ್ಯವನ್ನಾಗಲಿ ನಡೆಸಬಾರದು. ರತಿ ಕ್ರೀಡೆಯಲ್ಲಿರುವ ಪಶುಪಕ್ಷಿಗಾದಿಗಳನ್ನು ತಾನು ಕಣ್ಣಿಂದ ನೋಡ ಬಾರದು. ಸ್ನಾನ, ಶೌಚ, ಆಚಮನ, ಸಂಧ್ಯಾವಂದನ, ಮನೋವಾಕ್ಕಾ ಯಗಳೆಂಬ ತ್ರಿಕರಣಗಳಲ್ಲಿಯೂ ಏಕರೂಪವಾಗಿರುವುದು, ಪೂಜ್ಯರನ್ನು ಸೇವಿಸುವುದು, ಜಪಮಾಡುವುದು, ಮುಟ್ಟಬಾರದುದನ್ನೂ , ಭುಜಿಸಬಾರ ದುದನ್ನೂ , ಬಾಯಿಂದ ಮುಡಿಯಬಾರದುದನ್ನೂ ವರ್ಜಿಸುವುದು, ಸಮಸ್ತ ಭೂತಗಳನ್ನೂ ನನ್ನ ಭಾವದಿಂದ ನೋಡುವುದು, ಮನೋವಾಕ್ಕಾಯಗ ಳೆಂಬ ತ್ರಿಕರಣಗಳನ್ನೂ ಅಸತ್ಪವರ್ತನಕ್ಕೆ ಹೋಗದಂತೆ ತಡೆದಿಡುವುದು, ಎಂಬಿವು, ಎಲ್ಲಾ ಆಶ್ರಮದವರೂ ಸಾಧಾರಣವಾಗಿ ಅನುಸರಿಸಬೇಕಾದ ನಿಯಮಗಳಾಗಿರುವುವು. ಉದ್ದವಾ ! ಮೇಲೆ ಹೇಳಿದಂತೆ ಬ್ರಹ್ಮಚಯ್ಯ ಯನ್ನು ಕ್ರಮವಾಗಿ ನಡೆಸುತ್ತ ಬಂದು, ವೇದಾಧ್ಯಯನವನ್ನು ಮುಗಿಸಿದ ವನು, ಬ್ರಹ್ಮ ತೇಜಸ್ಸಿನಿಂದ ಆಗ್ನಿ ಯಂತೆ ಜ್ವಲಿಸುತ್ತ, ಆ ವೇದಾಧ್ಯಯನ ವೆಂಬ ತೀವ್ರತಪಸ್ಸಿನಿಂದ ಭಕ್ತಿಯೋಗವನ್ನು ಪಡೆದು, ಅದರಿಂದ ಕವಿ