ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SWL ಶ್ರೀಮದ್ಭಾಗವತನ [ಅಧ್ಯಾ. ೧೦ ನನ್ನಿಂದ ಭಯವು ತಪ್ಪದು. ಈ ಲೋಕಪಾಲಾದಿಗಳೆಲ್ಲರೂ ಕೆಲವು ಕಾಲದ ವರೆಗೆ ಉತ್ತಮ ಭೋಗದಲ್ಲಿದ್ದರೂ, ಅವರೂ ಕಾಲವಶರಾಗಿ, ತಮ್ಮ ಪದವಿ ಯಿಂದ ಕದಲಬೇಕಾಗಿಯೇ ಇರುವುದರಿಂದ, ಅವರಿಗೂ ನಿರ್ಭಯವಾದ ಸುಖವಿಲ್ಲ! ಮುಖ್ಯವಾಗಿ ಆತ್ಮನು ದೇಹಕ್ಕಿಂತಲೂ ಭಿನ್ನ ನು! ಕೇವಲ ಜ್ಞಾನೈಕಸ್ವರೂಪನು! ಕರೆರಹಿತನು.ಹಾಗಿದ್ದರೂ, ಪ್ರಕೃತಿಗುಣಗಳು ತಮ ತಮಗೆ ಅನುಗುಣಗಳಾದ ಕರ ವಾಸನೆಯಿಂದ ಅವನಿಗೆ ದೇಹಸಂಬಂಧ ವನ್ನುಂಟುಮಾಡಿ, ಆ ಮೂಲಕವಾಗಿ ಕರಗಳನ್ನು ಮಾಡಿಸುವುವು. ಹಾಗಯೇ ಗುಣಪರಿಣಾಮಾತ್ಮಕವಾದ ಆ ದೇಹವೂಕೂಡ, ಆಯಾಗುಣಗಳ ಇನುಸರಿಸಿ ಕರೆಗಳನ್ನು ಹುಟ್ಟಿಸುವುದು. ಹೀಗೆ ಪ್ರಾಕೃತಗುಣಗಳೊಡ ಗೂಡಿ ಅವುಗಳಿಗೆ ವಶ್ಯನಾದ ಜೀವನು, ಆ ಗುಣಗಳಿಂದಲೂ, ಅದರಿಂದ ತನಗೆ ತಗುಲಕಟ್ಟಿದ ದೇಹದಿಂದಲೂ ಕರಗಳನ್ನು ನಡೆಸಿ, ಆಯಾಕರಗ ಳಿಗೆ ಫಲವಾದ ಸುಖದುಃಖಗಳನ್ನು ತಾನು ಅನುಭವಿಸುವನು ಪ್ರಾಣಿಗಳಿಗೆ ಕಾಲಾತ್ಮಕನಾದ ನಂದ ಈ ಭಯವು ಎಲ್ಲಿಯವರೆಗೆ ಅನುಸರಿಸಿ ಬರುವು ದೆಂದು ಕೇಳುವೆಯಾ? ಎಷ್ಟರವರೆಗೆ ಸತ್ತಾಗಿಪ್ರಾಕೃತಗುಣಗಳಲ್ಲಿ ತಾರತ ಮ್ಯವುಂಟಾಗುತ್ತಿರುವುದೋ,ಅಷ್ಟರವರೆಗೆ ಆತ್ಮನಿಗೆ ದೇವಮನುವಾದಿ ದೇ ಹಪ್ರಯುಕ್ತವಾದ ನಾನಾತ್ಸವ, ಎಂದರೆ ದೇಹಸಂಬಂಧವಿದ್ದೇ ಇರುವು ದು.ಆ ದೇಹಸಂಬಂಧವು ಅನುಸರಿಸಿ.ಬರುವವರೆಗೆ ಜೀವನಿಗೆ ಪಾರತಂತ್ರವೂ ಏರ್ಪಟ್ಟಿರುವುದು. ಎಂದರೆ ಜೀವನು ಕರ ವಶ್ಯನಾಗಿರುವನು. ಆ ಪಾರ ತಂತ್ರವಿರುವವರೆಗೆ ಕಲರೂಪನಾದ ನನ್ನಿಂದ ಭಯವೂ ಇದ್ದೇ ಇರು ವುದು. ಮುಖ್ಯವಾಗಿ ಪ್ರಕೃತಿಗುಣಪರಿಣಾಮರೂಪವಾದ ಈ ಶರೀರವನ್ನೆ ಶಾನೆಂದು ಭ್ರಮಿಸಿ ಅಭಿಮಾಸಿಸುವವರೂ, ಮತ್ತು ಅದರ ಸುಖ ಕಾಗಿ ಯತ್ನಿಸುವವರೂ ಯಾವಾಗಲೂ ದುಃಖಕ್ಕೊಳಗಾಗಿಯೇ ಇದ್ದು,ತಮ್ಮ ಶ್ರೇಯಸ್ಸಿಗೆ ದಾರಿಯನ್ನು ಕಾಣದೆ ಕಳವಳಿಸುವರು. ಆದುದ ರಿಂದ ದೇಹೋಪಾಸನೆಯನ್ನು ಬಿಟ್ಟು ಪರಮಾತ್ಯೋಪಾಸನೆಯನ್ನು ಮಾಡುವುದೊಂದೇ ನಿರ್ಭಯವಾದ ಮಾರ್ಗವು. ಆದರೆ, ಕಾಲದೇಶಸ್ವಭಾ ವಾದಿಗಳು ಪ್ರತಿಕೂಲವಾಗಿರುವುದೇ ಭಯಕಾರಣವೆಂದು ಕೆಲವರು ತಿಳಿದು