ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ಣಿ ಶ್ರೀಮದ್ಭಾಗವತನ [ಅಧ್ಯಾ: ೨೪. ಕೆಟ್ಟುಹೋದಮೇಲೆಯೂ ಆ ಕಾರಣವಸ್ತುವಿನ ಸ್ವರೂಪದಿಂದಲೇ ನಿಲ್ಲು ವುದಲ್ಲವೆ! ಆದುದರಿಂದ ಒಂದು ವಸ್ತುವಿನಲ್ಲಿ ಬೇರೆಬೇರೆ ವಿಕಾರಗಳಿಗೆ ಆದ್ಯಂತಗಳುಂಟೇ ಹೊರತು, ಆ ದ್ರವ್ಯವುಮಾತ್ರ ಸ್ಥಾಯಿಯೆಂದೇ ಎಣಿಸ ಲ್ಪಡುವುದು. ಆಯಾ ಅವಸ್ಥಾಭೇದಗಳೊಡನೆ ದ್ರವ್ಯಕ್ಕೂ ಉತ್ಪತಿವಿಕಾಶ ಗಳೆಂದು ತಿಳಿಯಬಾರದು. ಅದರಂತೆಯೇ ದೇವಮನುಷ್ಯಾದ್ಯಾಕಾರಭೇದ ಗಳಿಂದ ಕಾಣುವ ಶರೀರಪರಂಪರೆಗಳಿಗೆ, ಪ್ರಕೃತಿಯೇ ಉಪಾದಾನಕಾರ ಇವು. ಈ ಪ್ರಕೃತಿಗಿಂತಲೂ ಭಿನ್ನ ನಾದ ಜೀವನು, ಆ ಪ್ರಕೃತಿವಿಕಾರಗ ಳೆನಿಸಿದ ದೇಹಗಳಲ್ಲಿ ಪ್ರವೇಶಿಸಿ, ಅವುಗಳಿಗೆ ಧಾರಕನಾಗಿರುವನು. ಪ್ರಕೃತಿ ಯಂತೆ ಜೀವನಿಗೆ ಉತ್ಪತ್ತಿ ಮೊದಲಾದ ವಿಕಾರಗಳಿಲ್ಲ. ಹೀಗೆ ಸ್ವರೂಪ ಸ್ವಭಾವಗಳಲ್ಲಿ ವಿಕಾರರಹಿತನಾಗಿ, ನಿತ್ಯನೆನಿಸಿಕೊಂಡ ಜೀವಾತ್ಮನಿಗೆ, ಧರ ಭೂತವಾದ ಜ್ಞಾನದಲ್ಲಿ ಸಂಕೋಚವಿಕಾಸಗಳನ್ನುಂಟುಮಾಡತಕ್ಕುದು ಕಾಲವು, ಏಕೆಂದರೆ, ಸೃಷ್ಟಿ ಕಾಲದಲ್ಲಿ ಜೀವನಿಗೆ ಜ್ಞಾನವಿಕಾಸವುಂ ಟಾಗುವುದು. ಹೀಗೆ ಮೇಲೆ ಹೇಳಿದ ಪ್ರಕೃತಿ, ಪುರುಷ, ಕಾಲವೆಂಬಿವು ಮೂರೂ ಬ್ರಹ್ಮನೆನಿಸಿಕೊಂಡ ನನಗೆ ಶರೀರವಾಗಿಯೇ ಇರುವುದರಿಂದ ಅವೆಲ್ಲವೂ ನಾನೇ : ಹೀಗೆ ಚಿತ್ತು, ಅಚಿತ್ತು ಎಂಬಿವೆರಡೂ ಸ್ವರೂಪದಿಂ ದ ನಿತ್ಯವಾಗಿರುವಂತೆ, ಇವುಗಳಿಂದೇರ್ಪಡುವ ಪ್ರಪಂಚವೆಂಬ ಕಾರ ಪ್ರಹಾರವೂ ನಿತ್ಯವೇ ! ಹೇಗೆಂದರೆ, ಪರಬ್ರಹ್ಮರೂಪಿಯಾದ ನನ್ನ ನೋ ಟದಿಂದ, ಪ್ರಕೃತಿಯಲ್ಲಿ, ಮಹತ್ತು ಮೊದಲಾದ ಸೃಷ್ಟಿಗೆ ಆರಂಭವಾಗಿ, ನನ್ನ ಸಂಕಲ್ಪವಿರುವವರೆಗೂ ತ್ರಿಗುಣಾತ್ಮಕವಾದ ಚೇತನಾಚೇತನ ಪ್ರ ಪಂಚದ ಉತ್ಪತ್ತಿ ವಿನಾಶಗಳು ಒಂದರಮೇಲೊಂದು ನಿತ್ಯವಾಗಿ ನಡೆ ಯುತ್ತಲೇ ಇರುವುವು. ಸಮಸ್ಯಪ್ರಾಣಿಗಳ ಉತ್ಪತ್ತಿವಿನಾಶಗಳಿಗೆ ಸ್ಥಾ ನವಾದ ಬ್ರಹ್ಮಾಂಡವು, ಕೊನೆಗೆ (ಎಂದರೆ ಪ್ರಳಯಕಾಲದಲ್ಲಿ),ಕಾಲಶರೀ ರಕನಾದ ನನ್ನಿಂದ ಆಯಹೊಂದಿಸಲ್ಪಡುವುದು. ಆಗ ಬ್ರಹ್ಮಾಂಡವೆಲ್ಲವೂ ಮೊತ್ತಕ್ಕೆ ತನ್ನೊಳಗಿನ ಸಮಸ್ತಲೋಕಗಳೊಡನೆ ನಾಶಹೊಂದಿ ನನ್ನಲ್ಲಿ ಲಯಿಸುವುದು. ಈ ಲಯಕ್ರಮವು ಹೇಗೆಂದರೆ, ಮೊದಲು ಪ್ರಾಣಿಶರೀರ ಗಳು ಅನ್ನದಲ್ಲಿ ಲಯಿಸುವುವು. (ಎಂದರೆ ಅನ್ನಾ ಭಾವದಿಂದ ಪ್ರಾಣಿ